ಯೋಗಿ ನಾಡಲ್ಲಿ ಅಸಲಿ ಮದರಸಾಗಳಿಗೆ ಪಾಸ್ ನಕಲಿ ಮದರಸಾಗಳಿಗೆ ಗೇಟ್ ಪಾಸ್!
ಉತ್ತರ ಪ್ರದೇಶದಿಂದ ಅನುದಾನ ಪಡೆಯುತ್ತಿರುವ ಅಲ್ಪಸಂಖ್ಯಾತ ಸಂಸ್ಥೆಗಳ ಆನ್ ಲೈನ್ ನೋಂದಣಿಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ್ದರಿಂದ ಎರಡು ಸಾವಿರಕ್ಕೂ ಹೆಚ್ಚು ನಕಲಿ ಮದರಸಾಗಳು ಬೆಳಕಿಗೆ ಬಂದಿವೆ.
ಈ ನಕಲಿ ಮದರಸಗಳು ಪ್ರತಿ ವರ್ಷ 100 ಕೋಟಿ ಅನುದಾನ ಪಡೆಯುತ್ತಿದ್ದವು. ಈ ಹಿಂದೆ ಇದ್ದ “ಸೆಕ್ಯೂಲರ್” ಸರ್ಕಾರಗಳು ಇವುಗಳನ್ನು ಗಮನಿಸುವ ಗೋಜಿಗೆ ಹೋಗದೇ ನ್ಯಾಯ ಬದ್ಧವಾಗಿ ನಡೆಯುತ್ತಿರುವ ಮದರಸಾಗಳಿಗೆ ಅನ್ಯಾಯ ಮಾಡಿದ್ದವು. ಬದಲಾದ ಕಾಲದಲ್ಲಿ ಉತ್ತರ ಪ್ರದೇಶ ಸರ್ಕಾರ ಮದರಸಾ ಸೇರಿದಂತೆ ಅಲ್ಪಸಂಖ್ಯಾತರ ಇತರ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಆನ್’ಲೈನ್ ನೋಂದಣಿಗೆ ಮುಂದಾಗಿತ್ತು. ಇದನ್ನು ನಕಲಿ ಮದರಸಾಗಳು ವಿರೋಧಿಸಿದ್ದು ಮಾತ್ರವಲ್ಲದೇ ಗಂಭೀರವಾಗಿ ಪರಿಗಣಿಸಲೂ ಇಲ್ಲ. ಹಲವು ಬಾರಿ ಕೊನೆ ದಿನಾಂಕವನ್ನು ಮುಂದೂಡಿ ಅವಕಾಶ ಮಾಡಿಕೊಟ್ಟರೂ ಸಹ ನಕಲಿ ಮದ್ರಸಗಳು ನೋಂದಣಿ ಮಾಡಿಕೊಂಡಿರಲಿಲ್ಲ.
ಆಡಳಿತದಲ್ಲಿ ಬಿಗಿ ಹಿಡಿತ ಹೊಂದಿರುವ ಉತ್ತರ ಪ್ರದೇಶ ಸರ್ಕಾರ ಯಾವ ಬೆದರಿಕೆಗೂ ಜಗ್ಗದೇ ತಕ್ಷಣದಿಂದಲೇ ನೋಂದಣಿಯಾಗದೇ ಉಳಿದಿರುವ ಸುಮಾರು ಎರಡು ಸಾವಿರ ಮದರಸಾಗಳಿಗೆ ನೀಡುವ ಅನುದಾನವನ್ನು ತಡೆ ಹಿಡಿದಿದೆ.
ರಾಜ್ಯ ಮದ್ರಸಾ ಮಂಡಳಿಯಿಂದ ಮಾನ್ಯತೆ ಪಡೆದಿರುವ 19,213 ಮದರಸಗಳು ಉತ್ತರಪ್ರದೇಶದಲ್ಲಿವೆ. ಆ ಪೈಕಿ ನ್ಯಾಯಬದ್ಧವಾಗಿ ನಡೆಯುತ್ತಿರುವ ಸುಮಾರು 17,000 ಮದರಸಗಳು ಮಾತ್ರ ಮಂಡಳಿಗೆ ಅಗತ್ಯ ಮಾಹಿತಿ ನೀಡಿದೆ. ಹಾಗಾಗಿ ಉಳಿದ ಮದರಸಾಗಳು ನಕಲಿಯಾಗಿದ್ದು ಮುಂದಿನ ದಿನಗಳಲ್ಲಿ ಅವುಗಳಿಗೆ ಅನುದಾನ ಸ್ಥಗಿತಗೊಳಿಸಲಾಗುವುದು ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ತಿಳಿಸಿದ್ದಾರೆ.
ಇದುವರೆಗೆ ಕೇವಲ ದಾಖಲಾತಿಗಳಲ್ಲಿ ಮಾತ್ರ ಈ ನಕಲಿ ಮದ್ರಸಗಳು ಅಸ್ತಿತ್ವದಲ್ಲಿದ್ದವು. ಇಲ್ಲಿಂದ ಇವುಗಳ ಮೇಲೆ ಹದ್ದಿನ ಕಣ್ಣು ಇಡಲಾಗುವುದು, ಅಷ್ಟೇ ಅಲ್ಲದೇ ಈವರೆಗೆ ಇವುಗಳಿಗೆ ನೀಡಲಾಗುತ್ತಿದ್ದ ಅನುದಾನದ ಬಗ್ಗೆಯೂ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ
ಮದರಸಗಳಲ್ಲಿ ಸೂಕ್ತ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದು ನಮ್ಮ ಸರ್ಕಾರದ ಉದ್ದೇಶ. ಅಧ್ಯಾಪಕರು, ಸಿಬ್ಬಂದಿಗಳು ಯಾವುದೇ ಶೋಷಣೆ ಅನುಭವಿಸಬಾರದು. ವಿದ್ಯಾರ್ಥಿ ವೇತನ ಸೇರಿದಂತೆ ಸರ್ಕಾರದ ಸೌಲಭ್ಯಗಳು ನೇರವಾಗಿ ವಿದ್ಯಾರ್ಥಿಗಳೇ ಸಿಗಬೇಕು. ನಕಲಿ ಮದರಸಾಗಳಿಂದ ನ್ಯಾಯ ಬದ್ಧವಾಗಿರುವ ಮದರಸಾಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
Leave A Reply