ಮೋದಿ ವಿರೋಧಿಗಳೇ ಕೇಳಿ, ನೋಟ್ ಬ್ಯಾನ್, ಜಿಎಸ್ಟಿಯಿಂದ ಭಾರತ ಏಳಿಗೆಯ ಹಾದಿ ಹಿಡಿದಿದೆ!

ವಾಷಿಂಗ್ಟನ್: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೋಟ್ ಬ್ಯಾನ್ ನಿಷೇಧಿಸುತ್ತಲೇ, ಅಯ್ಯೋ ದೇಶದ ಜನರೆಲ್ಲ ಬ್ಯಾಂಕ್ ಎದುರು ನಿಂತುಕೊಳ್ಳುವಂತಾಯಿತು, ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬೊಬ್ಬೆ ಹಾಕಿದರು. ಅತ್ತ ತೆರಿಗೆ ಸುಧಾರಣೆಗಾಗಿ ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸುತ್ತಲೇ, ಅಯ್ಯೋ ಭಾರತದ ಆರ್ಥಿಕ ಸ್ಥಿತಿಯ ಅಂತ್ಯದ ಆರಂಭವಾಯಿತು, ನೋಡಿ ಜಿಡಿಪಿ ಕುಸಿಯಿತು ಎಂದು ಬೊಬ್ಬೆ ಹಾಕಿದರು ಮೋದಿ ವಿರೋಧಿಗಳು.
ಆದರೆ ನೋಟ್ ಬ್ಯಾನ್ ಹಾಗೂ ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಈ ಅವಧಿಯಲ್ಲಿ ಭಾರತ ಪ್ರಗತಿಯ ಹಾದಿಯಲ್ಲಿ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯೇ ತಿಳಿಸಿದ್ದು, ಮೋದಿ ನಡೆ ವಿರೋಧಿಸಿದ್ದವರಿಗೆ ತಕ್ಕ ಉತ್ತರವೇ ದೊರೆತಿದೆ ಹಾಗೂ ಭಾರತ ಏಳಿಗೆ ಸಾಧಿಸುತ್ತಿರುವುದು ಭಾರತೀಯರ ಪಾಲಿಗೆ ಖುಷಿಯ ವಿಚಾರವಾಗಿದೆ.
ಹೌದು, ನೋಟ್ ಬ್ಯಾನ್ ಹಾಗೂ ಜಿಎಸ್ಟಿ ಜಾರಿ ಬಳಿಕ ಭಾರತದ ವಿತ್ತೀಯ ಸ್ಥಿತಿ ತುಸು ಹದಗೆಟ್ಟಿತ್ತು. ಆದರೆ ಪ್ರಸ್ತುತ ಭಾರತದ ಆರ್ಥಿಕ ಸ್ಥಿತಿ ಏಳಿಗೆಯತ್ತ ದಾಪುಗಾಲು ಹಾಕುತ್ತಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಉಪ ವ್ಯವಸ್ಥಾಪಕ ನಿರ್ದೇಶಕ ತಾವೋ ಜಾಂಗ್ ತಿಳಿಸಿದ್ದಾರೆ.
ಭಾರತದಲ್ಲಿ ಸ್ವಾಗತಾರ್ಹ ಎನ್ನುವ ಬದಲಾವಣೆಗಳಾಗುತ್ತಿವೆ. ಇತ್ತೀಚೆಗೆ ಭಾರತದ ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ. ಜಿಡಿಪಿ ಸಹ 7.2ನ್ನು ತಲುಪುವ ಮೂಲಕ ಭಾರತ ತನ್ನ ಆರ್ಥಿಕ ವೇಗವನ್ನು ಮರಳಿ ಪಡೆದಿದೆ. ಇದನ್ನು ಗಮನಿಸಿದರೆ ನೋಟು ನಿಷೇಧ ಹಾಗೂ ಜಿಎಸ್ಟಿ ಫಲಪ್ರದವಾಗಿವೆ ಎಂಬುದು ದಿಟವಾಗಿದೆ ಎಂದು ಜಾಂಗ್ ಮಾಹಿತಿ ನೀಡಿದ್ದಾರೆ.
ಅಷ್ಟೇ, ಅಲ್ಲ ಆರೋಗ್ಯ ಹಾಗೂ ಶಿಕ್ಷಣ ರಂಗಗಳಲ್ಲಿ ಭಾರತ ಮತ್ತಷ್ಟು ಸುಧಾರಣೆ ತರಬೇಕು. ಬ್ಯಾಂಕ್ ಹಾಗೂ ಆರ್ಥಿಕ ವ್ಯವಸ್ಥೆಯ ಕಡೆ ಮತ್ತಷ್ಟು ಗಮನ ಹರಿಸಿದರೆ ಭಾರತ ವಿಶ್ವದ ಶ್ರೀಮಂತ ರಾಷ್ಟ್ರಗಳ ಸಾಲಿಗೆ ಸೇರುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿರುವುದು ದೇಶದ ಏಳಿಗೆಗೆ ಹಾಗೂ ಭವಿಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
Leave A Reply