ಜಿಎಸ್ಟಿ ಕಸದ ಬುಟ್ಟಿಗೆ ಎಸೆಯಬೇಕು ಎನ್ನುವ ಕಮಲ್ ಹಾಸನ್ ತಲೆಯಲ್ಲಿ ಕಸ ತುಂಬಿದೆಯೇ?
ನಟನೆಯಲ್ಲಿದ್ದುಕೊಂಡೇ ಕಾಂಗ್ರೆಸ್ ಪರ ರಾಜಕಾರಣ ಮಾಡುತ್ತಿರುವ ಪ್ರಕಾಶ್ ರೈ, ನಟನೆ ಪಕ್ಕಕ್ಕಿಟ್ಟು ರಾಜಕೀಯಕ್ಕೆ ಇಳಿದಿರುವ ಕಮಲ್ ಹಾಸನ್ ಅವರಿಗೆ ಏನಾಗಿದೆ? ಇವರೇಕೆ ಎಲ್ಲ ವಿಷಯಗಳಲ್ಲೂ ಮೋದಿ ಹಾಗೂ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಬೇಕು? ಅದರಲ್ಲೂ ಕಮಲ್ ಹಾಸನ್ ಟೀಕೆಯಲ್ಲಿ ಯಾವ ಹುರುಳಿದೆ.
ನೀವೇ ನೋಡಿ, ತಮಿಳುನಾಡಿ ಈರೋಡಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕಮಲ್ ಹಾಸನ್, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್ಟಿಯನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ನಂಜು ಕಾರಿದ್ದಾರೆ. ಇವರ ಬೌದ್ಧಿಕ ಮಟ್ಟ ಎಷ್ಟು ಕೀಳುಮಟ್ಟಕ್ಕೆ ಇಳಿದಿದೆ ಎಂದರೆ, ಮೋದಿ ಅವರನ್ನು ತೆಗಳಿಯೇ ತಾವು ಫೇಮಸ್ ಆಗಬೇಕು ಎಂಬ ಹುಚ್ಚು ಹಿಡಿದಂತೆ ಕಾಣುತ್ತಿದೆ.
ಹಾಗಾದರೆ ಕಮಲ್ ಹಾಸನ್ ಹೇಳುವುದರಲ್ಲಿ ಯಾವ ಹುರುಳಿದೆ? ಸರಕು ಮತ್ತು ಸೇವಾ ತೆರಿಗೆಯನ್ನು ನಿಜವಾಗಿಯೂ ಕಸದ ಬುಟ್ಟಿಗೆ ಎಸೆಯಬೇಕಾ ಅಥವಾ ಅದರಿಂದ ಯಾವುದಾದರೂ ಉಪಯೋಗಗಳಾಗಿವೆಯಾ? ಕಮಲ್ ಹಾಸನ್ ಯಾವ ಆಧಾರದಲ್ಲಿ ಹೀಗೆ ಹೇಳಿದ್ದಾರೆ? ಅಷ್ಟಕ್ಕೂ ಜಿಎಸ್ಟಿಯಿಂದ ದೇಶಕ್ಕಾದ ಲಾಭಗಳಾದರೂ ಯಾವವು?
ಕಮಲ್ ಹಾಸನ್ ಬೊಗಳೆ ಪಕ್ಕಕ್ಕಿಟ್ಟು ಒಮ್ಮೆ ಯೋಚಿಸಿ ನೋಡಿ. ಸರಕು ಮತ್ತು ಸೇವಾ ತೆರಿಗೆ ಜಾರಿಗೊಳಿಸಿದ ಬಳಿಕ ದೇಶದಲ್ಲಿ ಉದ್ಯಮ ಕೈಗೊಳ್ಳುವುದು ತುಂಬ ಸರಳವಾಗಿದೆ. ಮೊದಲಾದರೋ ಕಚ್ಚಾ ಹಾಗೂ ಪಕ್ಕಾ ವಸ್ತುಗಳ ಖರೀದಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ತೆರಿಗೆ ಕಟ್ಟಬೇಕಿತ್ತು. ಮಧ್ಯವರ್ತಿಗಳ ಹಾವಳಿ ಸೇರಿ ಇಲ್ಲೇ ಅರ್ಧ ಹಣ ಪೋಲಾಗುತ್ತಿತ್ತು. ಆದರೆ ಜಿಎಸ್ಟಿ ಜಾರಿ ಬಳಿಕ ಏಕರೂಪ ತೆರಿಗೆ ಇರುವುದರಿಂದ ಸಣ್ಣ ಹಾಗೂ ಮಧ್ಯಮ ಉದ್ಯಮ ಕೈಗೊಳ್ಳುವವರಿಗೆ ಭಾರಿ ಅನುಕೂಲವಾಗಿದೆ.
ಕಮಲ್ ಹಾಸನ್ ಎಂತಹ ಪೆದ್ದ ಶಿಖಾಮಣಿ ನೋಡಿ. ಜಿಎಸ್ಟಿ ಜಾರಿ ಬಳಿಕ ದೇಶದ ಎಲ್ಲ ಕ್ಷೇತ್ರಗಳಿಗೂ ನಕಾರಾತ್ಮಕವಾಗಿ ಪರಿಣಾಮ ಬೀರಿದೆ ಎಂದು ಬೊಗಳೆ ಬಿಟ್ಟಿದ್ದಾರೆ. ಆದರೆ, ಮುಂಬೈ ಹಾಗೂ ಬೆಂಗಳೂರು ಸೇರಿ ದೇಶದ ಹಲವು ಮಹಾನಗರಗಳಲ್ಲಿ ಜಿಎಸ್ಟಿ ಜಾರಿಯಿಂದ ರೆಸ್ಟೋರೆಂಟ್ ಉದ್ಯಮದಲ್ಲಿ ಶೇ.70ರಷ್ಟು ಬೆಳವಣಿಗೆ ಕಂಡಿದೆ ಎಂದು ಕಳೆದ ತಿಂಗಳು ಗ್ರ್ಯಾಂಟ್ ಥ್ರಾನ್ ಟನ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಸಣ್ಣ ಅಂಶವೂ ಕಮಲ್ ಹಾಸನ್ ಗೆ ತಿಳಿದಿಲ್ಲ ಎಂದರೆ ರಾಜಕಾರಣ ಮಾಡಲು ಈತ ಲಾಯಕ್ಕೇ?
ಇನ್ನು ಜಿಎಸ್ಟಿ ಜಾರಿ ಬಳಿಕ ತೆರಿಗೆ ಸುಧಾರಣೆಯ ಪರ್ವವೇ ಆರಂಭವಾಗಿದೆ. ದೇಶದ ಖಜಾನೆಗೆ ಕೋಟ್ಯಂತರ ರೂ. ತೆರಿಗೆ ಪಾವತಿಯಾಗಿದೆ. ಅಷ್ಟೇ ಏಕೆ, ಸುಮಾರು 80 ಲಕ್ಷ ತೆರಿಗೆದಾರರು ನೂತನವಾಗಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಕಳೆದ ಬಜೆಟ್ಟಿನಲ್ಲಿ ಘೋಷಿಸಿದೆ. ಶ್ರೀಮಂತರ ತೆರಿಗೆ ಹಣ ರಾಷ್ಟ್ರದ ಬೊಕ್ಕಸಕ್ಕೆ ಸೇರಿದರೆ ಆ ಹಣ ಯೋಜನೆಗಳ ಮೂಲಕ ಬಡವರಿಗೆ ಸೇರುತ್ತದೆ ಎಂಬ ಕನಿಷ್ಠ ಅರಿವೂ ಈ ನಟನಿಗಿಲ್ಲವಲ್ಲ, ಛೇ.
ಹೌದು, ಸರಕು ಮತ್ತು ಸೇವಾ ತೆರಿಗೆಯನ್ನು ಎಲ್ಲರೂ ಪಾವತಿಸಬೇಕು ನಿಜ. ಹಾಗಂತ ಪ್ರತಿ ವಸ್ತುಗಳ ಖರೀದಿ ಮೇಲೆ ತೆರಿಗೆ ಹೇರಿ ಕೇಂದ್ರ ಸರ್ಕಾರ ಬಡವರ ಜೇಬಿಗೆ ಕತ್ತರಿ ಹಾಕಿಲ್ಲ. ಬೇಳೆ, ಅಕ್ಕಿ ಸೇರಿ ಅಗತ್ಯ ವಸ್ತುಗಳಿಗೆ ತೆರಿಗೆಯಿಂದಲೇ ವಿನಾಯಿತಿ ನೀಡಿದೆ. ಇಡ್ಲಿ-ವಡೆಗೆ ತೆರಿಗೆ ವಿಧಿಸುವುದನ್ನು ನಿಲ್ಲಿಸಿದೆ. ನಾಲ್ಕಾರು ಬಾರಿ ಸಭೆ ಸೇರಿ ತೆರಿಗೆ ದರ ಕಡಿತಗೊಳಿಸಿದೆ. ಅಷ್ಟರಮಟ್ಟಿಗೆ ಜನರ ಪರವಾಗಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಹೇಳಿ, ಸರಕು ಮತ್ತು ಸೇವಾ ತೆರಿಗೆ ಪದ್ಧತಿಯಿಂದ ದೇಶಕ್ಕೆ ಇಷ್ಟೆಲ್ಲ ಲಾಭವಾದರೂ, ಇದನ್ನೇ ಕಸದ ಬುಟ್ಟಿಗೆ ಎಸೆಯಬೇಕು ಎನ್ನುತ್ತಾರಲ್ಲ ಕಮಲ್ ಹಾಸನ್, ಇವರ ತಲೆಯಲ್ಲಿ ಮಿದುಳು ಇದೆ ಎನಿಸುತ್ತದೆಯೇ? ಅಥವಾ ಜನರನ್ನು ಮರಳು ಮಾಡಲು, ದೊಡ್ಡವರನ್ನು ತೆಗಳಿ, ಕೇಂದ್ರ ಸರ್ಕಾರವನ್ನು ಟೀಕಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಬೇಕು ಎಂಬ ಹಪಾಹಪಿಯೇ? ಜನರೇನು ದಡ್ಡರೇ? ಮುಂದಾಲೋಚನೆಯೇ ಇಲ್ಲದೆ, ಇರುವ ಜನಪ್ರಿಯತೆಯಿಂದ ಜನರನ್ನು ಅಡ್ಡದಾರಿಗೆ ಎಳೆಯುವ ಕಮಲ್ ಹಾಸನ್ ಯಾವ ಸೀಮೆ ನಾಯಕ? ಹೀಗೆಂದು ಕೇಳಲೇಬೇಕಾಗಿದೆ.
Leave A Reply