ನೋಟ್ ಬ್ಯಾನ್ ಪ್ರಸ್ತಾವನೆ ಕಸದ ಬುಟ್ಟಿಗೆ ಎಸೆಯುತ್ತಿದ್ದೆ ಎಂಬ ರಾಹುಲ್ ಹೇಳಿಕೆಗೆ ತಿರುಗೇಟು ನೀಡಿದ ಯೋಗಿ
ಲಖನೌ: ಕೇಂದ್ರ ಸರ್ಕಾರದ ದಿಟ್ಟ ಮತ್ತು ದೂರ ದೃಷ್ಟಿಯ ಯೋಜನೆ ನೋಟ್ಯಂತರದ ಬಗ್ಗೆ ಗೇಲಿ ಮಾಡಿ ಮಾತನಾಡಿದ್ದ ರಾಹುಲ್ ಗಾಂಧಿ ‘ನೋಟ್ಯಂತರದ ಪ್ರಸ್ತಾವನೆ ನನ್ನ ಎದುರು ಬಂದಿದ್ದರೇ, ಕಸದ ಬುಟ್ಟಿಗೆ ಎಸೆಯುತ್ತಿದೆ ಎಂಬ ಮಾತಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.
ರಾಹುಲ್ ಗಾಂಧಿಯವರನ್ನೇ ಜನರು ಕಸದ ಬುಟ್ಟಿಗೆ ಎಸೆಯುತ್ತಿದ್ದಾರೆ. ಆದರೂ ಅವರಿಗೆ ಗಂಭೀರತೆ ಬಂದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಇಳಿಯುತ್ತಿರುವ ಹೀನಾಯ ಸ್ಥಿತಿಯನ್ನು ಅನಾವರಣ ಮಾಡಿದ್ದಾರೆ.
ಗೋರಖಪುರ ಲೋಕಸಭೆ ಉಪಚುನಾವಣೆ ನಿಮಿತ್ತ ನಡೆದ ಮತದಾನದಲ್ಲಿ ಭಾಗಿಯಾಗಿ ಮತಚಲಾಯಿಸಿದ ನಂತರ ಮಾತನಾಡಿದ ಯೋಗಿ, ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ‘ನಕಾರಾತ್ಮಕ ಚಿಂತನೆ ಹೊಂದಿದ್ದಾರೆ. ಸದಾ ಋಣಾತ್ಮಕ ಯೋಚನೆಗಳನ್ನು ಮಾಡುತ್ತಿರುವುದರಿಂದ ಇಂತಹ ಪೆದ್ದು ಹೇಳಿಕೆಗಳು ರಾಹುಲ್ ಗಾಂಧಿ ಬಾಯಿಯಿಂದ ಬರುತ್ತಿವೆ. ಆದ್ದರಿಂದ ರಾಷ್ಟ್ರದ ಜನರು ರಾಹುಲ್ ಗಾಂಧಿ ಮನವಿಯನ್ನು ದೇಶದೆಲ್ಲೆಡೆ ತಿರಸ್ಕೃರಿಸುತ್ತಿದ್ದಾರೆ. ಕಾಂಗ್ರೆಸ್ ಗೆ ಮತ ನೀಡದೇ ಬುದ್ಧಿ ಕಲಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
Leave A Reply