ಚೀನಾ ಗಡಿಯಲ್ಲಿ ತಂದೆ ಹೆಸರಿನ ಶ್ರೇಣಿ ಹೆಸರು ಕೇಳಿ ವಿಸ್ಮಿತರಾದ ಮಹಿಳಾ ಲೆಫ್ಟಿನೆಂಟ್ ಅಧಿಕಾರಿ
ಕೊಲ್ಕತ್ತಾ: ಭಾರತೀಯ ಸೈನ್ಯಕ್ಕೆ ಸೇರುವುದೆಂದರೆ ಹೆಮ್ಮೆ. ಸೈನ್ಯದಲ್ಲಿ ತಂದೆ, ಸಹೋದರ ಸೇವೆ ಸಲ್ಲಿಸುತ್ತಿದ್ದರೂ ನಾವು ಎದೆಯುಬ್ಬಿಸಿ ತಿರುಗಾಡುತ್ತೇವೆ. ಅವರು ಹುತಾತ್ಮರಾದರೇ ರಾಷ್ಟ್ರಧ್ವಜ ಹೊದಿಸಿ ಅತ್ಯುನ್ನತ ಗೌರವ ಸಲ್ಲಿಸುತ್ತೇವೆ. ಅಷ್ಟೇ ಅಲ್ಲ ಸೈನ್ಯ ಸೈನಿಕರಿಗೆ ಹಲವು ಮಹತ್ತರ ಗೌರವಗಳನ್ನು ಸಲ್ಲಿಸುತ್ತದೆ. ಆದರೆ ಈ ವಿಷಯ ಕುಟುಂಬದವರಿಗೂ ತಿಳಿದಿರಲ್ಲ. ಅಂತ ವಿಶೇಷ ಗೌರವ ಪಡೆದ ಅಧಿಕಾರಿಯ ಮಗಳು ತಂದೆಗೆ ನೀಡಿದ ಗೌರವ ತಿಳಿದು ದಿಗ್ಬ್ರಾಂತರಾಗಿದ್ದಾರೆ.
ಇತ್ತೀಚೆಗೆ ಸೈನ್ಯಕ್ಕೆ ಸೇರಿದ ಲೆಫ್ಟಿನೆಂಟ್ ಅಧಿಕಾರಿ ತನ್ನ ತಂದೆಯ ಹೆಸರಿನ ಪ್ರದೇಶವಿರುವುದನ್ನು ಕೇಳಿ ಮೂಕವಿಸ್ಮಿತರಾದ ಮಹಿಳಾ ಲೆಫ್ಟಿನೆಂಟ್ ಅಧಿಕಾರಿ, ಹೆಸರಿನ ಬೆನ್ನತ್ತಿದ್ದಾಗ ತಿಳಿದ ವಾಸ್ತವ ಕೇಳಿ ದಿಗ್ಬ್ರಾಂತರಾಗಿದ್ದಾರೆ. ಅರುಣಾಚಲ ಪ್ರದೇಶದ ಯುವ ಮಹಿಳೆ ಇತ್ತೀಚೆಗೆ ಲೆಫ್ಟಿನೆಂಟ್ ಅಧಿಕಾರಿಯಾಗಿ ನೇಮಕವಾಗಿದ್ದರು. ಈ ವೇಳೆ ಅವರು ತರಬೇತಿ ಕುರಿತ ಪ್ರವಾಸಕ್ಕೆ ಚೀನಾ ಗಡಿಯ ತವಾಂಗ ವಲಯದ ಕೈಪೋ ಪೋಸ್ಟ್ ಗೆ ಹೋಗಿದ್ದರು. ಈ ಪ್ರದೇಶದಲ್ಲಿ ‘ಆಶೀಶ್ ಟಾಪ್’ (ಆಶೀಶ್ ಶ್ರೇಣಿ’) ಎಂಬ ಪ್ರದೇಶಕ್ಕೆ ಹೋದಾಗ ಹಲವು ಅನುಮಾನಗಳು ಅವರಲ್ಲಿ ಮೂಡಿದ್ದವು. ಅರುಣಾಚಲ ಪ್ರದೇಶ ಮೂಲದ ಹೆಸರು ಈ ಪ್ರದೇಶಕ್ಕೆ ಏಕೆ ನಾಮಕರಣ ಮಾಡಲಾಗಿದೆ ಎಂದು ಯೋಚಿಸಿದರು.
ತಮ್ಮ ಯೋಚನೆ ಬೆನ್ನು ಹತ್ತಿದ ಅವರಿಗೆ ತಿಳಿದಿದ್ದು ಹೆಮ್ಮೆಯ ವಿಷಯ. ಆ ಹೆಸರಿನ ಹಿನ್ನೆಯನ್ನು ಓದಿದ ಅವರು ಒಂದರೆಗಳಿಗೆ ಮೂಕವಿಸ್ಮತರಾಗಿದ್ದರು. ಅದಕ್ಕೆ ಕಾರಣ ‘ಆಶೀಶ್ ಟಾಪ್’ ನ ಮೂಲ ಆಶೀಶ್ ಆ ಮಹಿಳಾ ಅಧಿಕಾರಿಯ ಹೆತ್ತ ತಂದೆಯದ್ದು ಎಂದು ತಿಳಿದಾಗ. ಇದಕ್ಕಿಂತ ಯಾವ ಭಾಗ್ಯ ಬೇಕು ಹೇಳಿ. ಒಬ್ಬ ಸೈನ್ಯಾಧಿಕಾರಿಯ ಹೆಸರು ಶಾಶ್ವತವಾಗಿ ಒಂದು ಪ್ರದೇಶಕ್ಕೆ ನಾಮಕರಣ ಮಾಡಿದ್ದು, ಅದನ್ನು ಮಗಳು ಆಕಸ್ಮಿಕವಾಗಿ ನೋಡಿದ್ದು, ಹೆಮ್ಮೆಯಿಂದ ಅಪ್ಪಿಕೊಂಡಿದ್ದು. ಇದಕ್ಕಿಂತ ದೊಡ್ಡ ಸನ್ಮಾನ ಯಾವುದೂ ಇಲ್ಲ ಬಿಡಿ.
ಆಶೀಶ್ ದಾಸ್ ಅರುಣಾಚಲ ರೆಜಿಮೆಂಟ್ ನ ಕರ್ನಲ್ ಆಗಿ ಮಹತ್ತರ ಸೇವೆ ಸಲ್ಲಿಸಿದ್ದರು. ಅವರ ಸೇವೆಯನ್ನು ಪರಿಗಣಿಸಿ, ಶ್ರೇಣಿಯೊಂದಕ್ಕೆ ಆಶೀಶ ಟಾಪ್ ಎಂದು ನಾಮಕರಣ ಮಾಡಿ, ಅವರ ಹೆಸರನ್ನು ಅಜರಾಮರ ಮಾಡಲಾಗಿತ್ತು.
Leave A Reply