• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಸ್ತೆ ಬದಿಯಲ್ಲಿ ಬಿಪಿಎಲ್ ಕಾರ್ಡ್ ಹಂಚುವ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿದೆ!!

Hanumantha Kamath Posted On March 14, 2018


  • Share On Facebook
  • Tweet It

ಬನ್ನಿ, ಬನ್ನಿ, ಬನ್ನಿ, ಬಿಪಿಎಲ್ ಕಾರ್ಡ್ ತೆಗೆದುಕೊಳ್ಳಿ, ಸರಕಾರಿ ಸೌಲಭ್ಯಗಳ ಮಜಾ ಉಡಾಯಿಸಿ, ವೋಟ್ ಮಾತ್ರ ನಮಗೆ ಹಾಕಿ ಎಂದು ಆಹಾರ ಸಚಿವ, ಮಂಗಳೂರು ಅಂದರೆ ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕ ಯುಟಿ ಖಾದರ್ ಮೈಕ್ ನಲ್ಲಿ ಹೇಳುತ್ತಾ ಹೋಗೋದು ಮಾತ್ರ ಬಾಕಿ. ಇದೊಂದು ಡ್ರಾಮ ಉಳಿದಿತ್ತು. ಇವರಿಗೆ ಇಂತಹ ಐಡಿಯಾ ಯಾರು ಕೊಡ್ತಾರೋ ದೇವರಿಗೆ ಗೊತ್ತು. ಆದರೆ ಯಾರೇ ಐಡಿಯಾ ಕೊಡಲಿ, ಕೊಟ್ಟವರು ಮತ್ತು ಜಾರಿಗೆ ತರುತ್ತಿರುವ ಇಬ್ಬರು ದೇಶಕ್ಕೂ, ಜನಸಾಮಾನ್ಯರ ತೆರಿಗೆ ಹಣಕ್ಕೂ ದ್ರೋಹ ಮಾಡುತ್ತಿದ್ದಾರೆ ಎನ್ನುವುದು ನೂರಕ್ಕೆ ನೂರು ನಿಜ. ನಾನು ಒಂದು ವಿಷಯ ಮೊದಲೇ ಸ್ಪಷ್ಟಪಡಿಸುತ್ತೇನೆ. ನಾನು ಬಿಪಿಎಲ್ ಕಾರ್ಡ್ ಕೊಡುವುದಕ್ಕೆ ವಿರೋಧಿ ಅಲ್ಲ. ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವುದು ತಪ್ಪು ಕೂಡ ಅಲ್ಲ. ಆದರೆ ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವಾಗ ನಾವು ಅದಕ್ಕೆ ಅರ್ಹರೋ ಎಂದು ನೋಡಿ ತೆಗೆದುಕೊಳ್ಳಬೇಕಾಗಿರುವುದು ನಮ್ಮ ಕರ್ತವ್ಯ. ಹಾಗೆ ಕೊಡುವವವರು ನಾವು ಅರ್ಹರಿಗೆ ಕೊಡುತ್ತಿದ್ದೆವೋ ಇಲ್ಲವೋ ಎಂದು ನೋಡಿಕೊಡದಿದ್ದರೆ ಅದು ಅವರು ಜನರ ತೆರಿಗೆಯ ಹಣಕ್ಕೆ ಮಾಡುವ ದೊಡ್ಡ ಮೋಸ.

ನಾನು ಎರಡು ವರ್ಷ ಮುಂಚೆನೆ ಡೊಂಗಿಯನ್ನು ಹಿಡಿದಿದ್ದೆ..

ಇಷ್ಟಾಗಿಯೂ ಸಚಿವ ಯುಟಿ ಖಾದರ್ ಅವರು ಏನು ಹೇಳುತ್ತಿದ್ದಾರೆ ಎಂದರೆ ಯಾರಾದರೂ ಸುಳ್ಳು ಹೇಳಿ ಬಿಪಿಎಲ್ ಕಾರ್ಡ್ ಪಡೆದುಕೊಂಡರೆ ಅದನ್ನು ಸಾರ್ವಜನಿಕರು ಪತ್ತೆ ಹಚ್ಚಿ ನಮ್ಮ ಗಮನಕ್ಕೆ ತರಬೇಕು. ಅಂದರೆ ಸಾರ್ವಜನಿಕರಿಗೆ ಬೇರೆ ಕೆಲಸ ಇಲ್ಲ ಎಂದು ಸಚಿವರು ಅಂದುಕೊಂಡಿದ್ದಾರೆ. ಒಂದು ರೀತಿಯಲ್ಲಿ ಇವರು ಬೀಚ್ ನಲ್ಲಿ ಕಡ್ಲೆಕಾಯಿ ಮಾರುವವರಂತೆ ಬಿಪಿಎಲ್ ಕಾರ್ಡ್ ಹಂಚಿ ಒಳ್ಳೆಯವರಾಗುವುದು, ಇನ್ನೊಂದು ಕಡೆ ನಾವು ಡೊಂಗಿಗಳನ್ನು ಹಿಡಿದು ಕೆಟ್ಟವರಾಗುವುದು. ಖಾದರ್ ಒಳ್ಳೆಯ ಪ್ಲಾನ್ ಮಾಡಿದ್ದಾರೆ. ಹಾಗಂತ ಡೋಂಗಿಗಳನ್ನು ಹಿಡಿದು ಕೆಟ್ಟವನಾಗಲು ನನಗೆ ಹೆದರಿಕೆ ಇಲ್ಲ. ಎರಡು ವರ್ಷಗಳ ಮೊದಲೇ ನಾನು ಅಂತಹ ಡೋಂಗಿ ಒಬ್ಬನನ್ನು ಹಿಡಿದಿದ್ದೆ. ಆತ ಪೊಲೀಸ್ ಇಲಾಖೆಯಲ್ಲಿ ಇದ್ದ. ಆರ್ಯ ಸಮಾಜದ ರಸ್ತೆಯಲ್ಲಿ ಫ್ಲಾಟ್ ಇತ್ತು. ಅನುಕೂಲವಾಗಿಯೇ ಇದ್ದ. ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದ. ನಿಮಗೆ ಗೊತ್ತಿರುವ ಪ್ರಕಾರ ಬಿಪಿಎಲ್ ಕಾರ್ಡ್ ಪಡೆಯುವ ಮಾನದಂಡಗಳಲ್ಲಿ ಪ್ರಮುಖವಾಗಿರುವುದು ಏನೆಂದರೆ ನಿಮ್ಮ ಮನೆಯ ವಿದ್ಯುತ್ ಬಿಲ್ 450 ರೂಪಾಯಿ ದಾಟಬಾರದು. ಐಶಾರಾಮಿಫ್ಲಾಟ್ ನಲ್ಲಿ ವಾಸಿಸುತ್ತಿದ್ದವ ಮನೆಯ ಕರೆಂಟ್ ಬಿಲ್ ಮಾನದಂಡದ ಒಳಗೆ ಬರುವ ಸಾಧ್ಯತೆನೆ ಇರಲಿಲ್ಲ. ಅದಕ್ಕೆ ಇವನು ಏನು ಪ್ಲಾನ್ ಮಾಡಿದ್ದ ಎಂದರೆ ಕುಲಶೇಖರದಲ್ಲಿ ತೋಟಕ್ಕೆ ನೀರು ಬಿಡುತ್ತಿದ್ದ ಪಂಪ್ ಸೆಟ್ ಒಂದರ ಮೀಟರ್ ಬಿಲ್ ಕೊಟ್ಟಿದ್ದ. ಅದು ಮಾನದಂಡದ ಒಳಗೆ ಬರುತ್ತಿದ್ದ ಕಾರಣ ಅವನಿಗೆ ಬಿಪಿಎಲ್ ಕಾರ್ಡ್ ಸಿಕ್ಕಿತ್ತು. ಅದು ನನ್ನ ಗಮನಕ್ಕೆ ಬಂದ ತಕ್ಷಣ ನಾನು ಅದನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ರದ್ದು ಮಾಡಿಸಿದ್ದೆ. ಹಾಗಂತ ಇವರು ಮಾಡುವ ತಪ್ಪುಗಳನ್ನೆಲ್ಲ ಕಂಡು ಹಿಡಿದು ಸರಿ ಮಾಡಲು ನನ್ನಂತಹ ನಾಗರಿಕರಿಗೆ ಅದೊಂದೇ ಕೆಲಸವಲ್ಲ. ಇವರು ಎರಡು ಟೇಬಲ್ ಹಾಕಿ ಸಿಕ್ಕಸಿಕ್ಕವರಿಗೆ ಬಿಪಿಎಲ್ ಕಾರ್ಡ್ ಕೊಟ್ಟು ತಮ್ಮ ಮತಬ್ಯಾಂಕ್ ಹೆಚ್ಚಿಸುತ್ತಿರುವುದು ಪರೋಕ್ಷವಾಗಿ ಜನರ ತೆರಿಗೆಯ ಹಣ ಲೂಟಿ ಮಾಡುತ್ತಿರುವುದು ಎರಡೂ ಒಂದೇ. ಯುಟಿ ಖಾದರ್ ಅವರ ಈ ತಂತ್ರ ಇಷ್ಟವಾಗಿರುವುದರಿಂದ ಮತ್ತು ಅನಿವಾರ್ಯವಾಗಿರುವುದರಿಂದ ಮಂಗಳೂರು ನಗರ ದಕ್ಷಿಣದಲ್ಲಿ ಶಾಸಕ ಜೆ ಆರ್ ಲೋಬೋ ಅವರು ಕೂಡ ಇದರ ಮೊರೆ ಹೋಗಿದ್ದಾರೆ.

ಬಿಪಿಎಲ್ ಕಾರ್ಡ್ ಗೆ ಮಾನದಂಡಗಳೇನು?…

ಅಷ್ಟಕ್ಕೂ ಬಿಪಿಎಲ್ ಕಾರ್ಡ್ ಮಾಡಿಸುವ ಮೊದಲು ಆದಾಯ ಪ್ರಮಾಣ ಪತ್ರವನ್ನು ಮಾಡಿಸಬೇಕು. ಅದನ್ನು ಗ್ರಾಮ ಲೆಕ್ಕಾಧಿಕಾರಿ, ರೆವೆನ್ಯೂ ಇನ್ಸಪೆಕ್ಟರ್ ಪರಿಶೀಲಿಸಿ ನಂತರ ಬಿಪಿಎಲ್ ಕಾರ್ಡ್ ಕೊಡುವಂತದ್ದು ಸಂಪ್ರದಾಯ. ಆದರೆ ಇವರದ್ದು ಹಾಗಲ್ಲ. ಅಲ್ಲಲ್ಲಿ ಟೆಂಟ್ ಹಾಕಿ ಈ ಗಿಡಮೂಲಿಕೆಯ ಔಷಧಿ ಮಾರುತ್ತಾರಲ್ಲ, ಅವರ ಸ್ಟೈಲ್. ನೀವು ಡೋಂಗಿ ಬಡವರೋ ಅಥವಾ ನಿಜವಾದ ಅರ್ಹರೋ ನೋಡುವ ಕ್ರಮ ಇಲ್ಲ. ಒಂದು ಬಿಪಿಎಲ್ ಕಾರ್ಡ್ ಎಂದರೆ ಅವರ ಪ್ರಕಾರ ಆರು ವೋಟ್ ತಮ್ಮ ಬಗಲಿಗೆ ಎನ್ನುವ ಲೆಕ್ಕಾಚಾರ. ಇವರು ಹತ್ತು ಡೋಂಗಿಗಳಿಗೆ ಬಿಪಿಎಲ್ ಕಾರ್ಡ್ ಕೊಟ್ಟರೆ 60 ವೋಟ್ ತಮ್ಮ ಬುಟ್ಟಿಗೆ ಎನ್ನುವ ಲೆಕ್ಕದಲ್ಲಿ ಹಂಚುತ್ತಿದ್ದಾರೆ. ತೆಗೆದುಕೊಂಡವರು ಇವರಿಗೆ ನಾಲ್ಕು ವೋಟ್ ಹಾಕಬಹುದು. ಆದರೆ ವಿಷಯ ಇರುವುದು ಒಬ್ಬ ಅನರ್ಹ ವ್ಯಕ್ತಿಯ ಕೈಯಲ್ಲಿ ಬಿಪಿಎಲ್ ಕಾರ್ಡ್ ಇದೆ ಎಂದಾದರೆ ಆತ ಅದೆಷ್ಟೋ ಅರ್ಹ ಮಂದಿಯ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತಿದ್ದಾನೆ ಎಂದೇ ಅರ್ಥ. ಅದು ರೇಷನ್ ಅಂಗಡಿಯಲ್ಲಿ 40 ಕಿಲೋ ಅಕ್ಕಿಯೇ ಇರಲಿ ಅಥವಾ ಸರಕಾರಗಳ ವೈದ್ಯಕೀಯ ಬೆನಿಫಿಟ್ ಗಳಲ್ಲೇ ಇರಲಿ ಅಥವಾ ಶಿಕ್ಷಣಕ್ಕೆ ಸಂಬಂಧಪಟ್ಟ ಯೋಜನೆಗಳ ಲಾಭವೇ ಇರಲಿ ಅವನಿಗೆ ಯಕಶ್ಚಿತ್ ಒಂದು ಕಾರ್ಡ್ ನಿಂದ ಸಿಗುತ್ತದೆ. ಒಂದು ವೇಳೆ ನೀವು ಬಿಪಿಎಲ್ ಕಾರ್ಡ್ ಅನ್ನು ಅರ್ಹತೆಯ ಮೇಲೆ ಪಡೆದುಕೊಂಡಿದ್ದೀರಿ ಎಂದಾದರೆ ನಿಮಗೆ 40 ಕಿಲೋ ಅಕ್ಕಿ ಅಲ್ಲ 80 ಕೆಜಿ ಬೇಕಾದರೆ ಸರಕಾರ ಕೊಡಲಿ, ತೊಂದರೆ ಇಲ್ಲ. ಆದರೆ ಬೈಕ್, ಕಾರ್, ಫ್ಲಾಟ್ ಗಳನ್ನು ಹೊಂದಿರುವವರು, ವಿಕೆಂಡ್ ಗಳನ್ನು ಬಾರ್ ಅಂಡ್ ರೆಸ್ಟೋರೆಂಟ್ ಗಳಲ್ಲಿ ಕಳೆಯುವವರು ಹೀಗೆ ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದು ತಪ್ಪಲ್ವಾ? ಅದನ್ನು ನೇರವಾಗಿ ರಾಜ್ಯ ಸರಕಾರವೇ ಅವಕಾಶ ಕೊಟ್ಟು ಮಾಡಿಸುತ್ತಿದ್ದರೆ ಅದಕ್ಕಿಂತ ಘನಘೋರ ಅಪರಾಧ ಬೇರೆ ಇದೆಯಾ?

ಯುಟಿ ಖಾದರ್ ಹಾಗೂ ಜೆ ಆರ್ ಲೋಬೋ ಅವರಿಗೆ ತಾವು ಗೆಲ್ಲುವುದು ಸಂಶಯ ಎಂದು ಅನಿಸುತ್ತಿರುವುದರಿಂದ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಅನಿಸುತ್ತದೆ. ಇಲ್ಲದಿದ್ದರೆ ದಿನಕ್ಕೆ ಎರಡರಂತೆ ಕಳೆದ ಮೂರು ತಿಂಗಳುಗಳಿಂದ ಗುದ್ದಲಿ ಪೂಜೆ ಮಾಡುತ್ತಿರುವ ಜೆ ಆರ್ ಲೋಬೋ ಅವರಿಗೆ ಈಗ ಬಿಪಿಎಲ್ ಕಾರ್ಡ್ ಈ ಪ್ರಕಾರ ಹಂಚಿ ಗೆಲ್ಲಬಹುದು ಎಂದು ಅನಿಸುತ್ತಿದೆ ಎಂದಾದರೆ ಅವರು ಕಳೆದ ಐದು ವರ್ಷಗಳಲ್ಲಿ ಮಾಡಿದ್ದು ಶೂನ್ಯ ಎಂದು ಅವರೇ ಹೇಳಿದಂತೆ ಆಗಲಿಲ್ಲವೇ? ಇನ್ನು ಬಿಪಿಎಲ್ ಕಾರ್ಡ್ ಪಡೆದುಕೊಳ್ಳುವ ವ್ಯಕ್ತಿಯ ಆದಾಯ ವರ್ಷಕ್ಕೆ 1,20,000 ಮೀರಬಾರದು ಎನ್ನುವ ನಿಯಮ ಇದೆ. ಆದರೆ ನಮ್ಮ ಸಚಿವರು, ಶಾಸಕರು ಸಂಬಂಧಪಟ್ಟ ಇಲಾಖೆಗೆ ಫೋನ್ ಮಾಡಿ ಇಂತಿಂತಹ ವ್ಯಕ್ತಿ ಬಂದರೆ ಆದಾಯ ಪ್ರಮಾಣ ಪತ್ರ ಮಾಡಿಕೊಡಿ ಎಂದು ಹೇಳಿ ನಿಯಮ ಉಲ್ಲಂಘನೆ ಮಾಡುತ್ತಾ ಹೋಗುತ್ತಾರೆ. ಇನ್ನು ದ್ವಿಚಕ್ರ ವಾಹನ ಇದ್ದವರಿಗೆ ಬಿಪಿಎಲ್ ಕಾರ್ಡ್ ಕೊಡಲು ಆಗುವುದಿಲ್ಲ. ಆದರೆ ಬಿಪಿಎಲ್ ಕಾರ್ಡ್ ಹೊಂದಿರುವ ಅನೇಕರ ಹತ್ತಿರ ಸ್ಕೂಟರ್, ಬೈಕ್ ಗಳಿವೆ. ಇದನ್ನು ತಪ್ಪಿಸುವುದು ಹೇಗೆ? ಪತ್ತೆ ಹಚ್ಚುವುದು ಹೇಗೆ?

ಹೇಗೆ ನಾವು ಮೊಬೈಲ್ ಸೀಮ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎಂದು ಕೇಂದ್ರ ಸರಕಾರ ಸೂಚನೆ ಕೊಟ್ಟಿದ್ದೆಯೋ ಹಾಗೆ ದ್ವಿಚಕ್ರ ಅಥವಾ ಕಾರು ಖರೀದಿಸುವಾಗಲೇ ಅದಕ್ಕೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಆದೇಶ ಕೊಡಬೇಕು. ಹಾಗೆ ಈಗಾಗಲೇ ದ್ವಿಚಕ್ರ ವಾಹನಗಳು, ಕಾರುಗೀರು ಇದ್ದವರಿಗೂ ಹೀಗೆ ಮಾಡಿದರೆ ಡೋಂಗಿಗಳು ಸಿಕ್ಕಿ ಬೀಳುತ್ತಾರೆ. ಅಲ್ಲಿಯ ತನಕ ತಳ್ಳುಗಾಡಿಯಲ್ಲಿ ಬಿಪಿಎಲ್ ಕಾರ್ಡ್ ಇಟ್ಟು ” ಬಿಪಿಎಲ್ ಕಾರ್ಡ್ ಬೇಕಾ, ಬಿಪಿಎಲ್ ಕಾರ್ಡ್” ಎಂದು ಕೂಗುತ್ತಾ ಶಾಸಕ ಲೋಬೋ, ಸಚಿವ ಯುಟಿ ಖಾದರ್ ಬೀದಿ ಬೀದಿ ಸುತ್ತುತ್ತಲೇ ಇರುತ್ತಾರೆ!

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
Hanumantha Kamath September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Hanumantha Kamath September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search