ಮಹಿಳಾ ಸಬಲೀಕರಣದ ಪರ ಮಾತನಾಡುವ ಕಾಂಗ್ರೆಸ್ ತಮ್ಮದೇ ಪಕ್ಷದ ಮಹಿಳೆಯನ್ನು ಹೇಗೆ ನಡೆಸಿಕೊಂಡಿದೆ ನೋಡಿ!
ಮಂಗಳೂರು: ಸೋನಿಯಾ ಗಾಂಧಿಯಿಂದ ಹಿಡಿದು, ರಾಹುಲ್ ಗಾಂಧಿವರೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಹಿಡಿದು ಪರಮೇಶ್ವರ್ ವರೆಗೆ ಕಾಂಗ್ರೆಸ್ಸಿನ ಎಲ್ಲ ನಾಯಕರು ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಮಹಿಳೆಯರಿಗೆ ಆ ಸ್ವಾತಂತ್ರ್ಯ ನೀಡಬೇಕು, ಸಮಾನ ಅವಕಾಶ ನೀಡಬೇಕು ಎಂದೆಲ್ಲ ಭಾಷಣ ಬಿಗಿಯುತ್ತಾರೆ.
ಆದರೆ ಇದೇ ಕಾಂಗ್ರೆಸ್, ತಮ್ಮದೇ ಪಕ್ಷದ ಮಹಿಳೆಯೊಬ್ಬರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ನೋಡಿದರೆ ಎಂತಹವರಿಗೂ ಬೇಸರವಾಗುತ್ತದೆ. ಕಾಂಗ್ರೆಸ್ ಮೇಲೆ ಒಂದಿಡಿ ಕೋಪ ಬರುತ್ತದೆ. ಇದು ಮಹಿಳೆಯನ್ನು ನಡೆಸಿಕೊಳ್ಳುವ ಪರಿಯಾ ಎಂಬ ಆಕ್ರೋಶ ಕಾಡುತ್ತದೆ.
ಹೌದು, ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆಯಾಗಿರುವ ಪ್ರತಿಭಾ ಕುಳಾಯಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಶೋಕಾಸ್ ನೋಡಿದೆ. ಒಂದು ವಾರದಲ್ಲಿ ಉತ್ತರ ನೀಡಬೇಕು ಎಂದು ಆದೇಶಿಸಿದೆ.
ಆಗಿದ್ದಿಷ್ಟೇ, ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಕಿರುಕುಳ ನೀಡಿದ್ದಾನೆ ಎಂದು ಪ್ರತಿಭಾ ಕುಳಾಯಿ ಆರೋಪಿಸಿದ್ದರು. ಈ ಕುರಿತು ರಾಷ್ಟ್ರೀಯ ಸುದ್ದಿವಾಹಿನಿಯಲ್ಲಿ ಮಾತನಾಡಿದ್ದರು.
ಆದರೆ ಮಹಿಳೆಗೆ ನ್ಯಾಯ ಒದಗಿಸಬೇಕಾಗಿದ್ದ ಜಿಲ್ಲಾ ಕಾಂಗ್ರೆಸ್ ಈಗ ಕಾಂಗ್ರೆಸ್ ಪರ ನಿಂತಿದ್ದು, ಅನುಮತಿಯಿಲ್ಲದೆ ಟಿವಿ ಚಾನೆಲ್ ನಲ್ಲಿ ಭಾಗವಹಿಸಿದ್ದಕ್ಕೆ ಉತ್ತರಿಸಿ ಎಂದು ನೋಟಿಸ್ ನೀಡಲಾಗಿದೆ. ಆದ ಅನ್ಯಾಯದ ಕುರಿತು ಮಾಧ್ಯಮದಲ್ಲಿ ಮಾತನಾಡುವುದೇ ತಪ್ಪು ಎಂಬಂತೆ ಕಾಂಗ್ರೆಸ್ ವರ್ತಿಸಿದೆ. ಹೇಳುವುದು ಆಚಾರ, ತಿನ್ನುವುದು ಬದನೆಕಾಯಿ ಎಂದು ಪ್ರಾಯಶಃ ಕಾಂಗ್ರೆಸ್ಸನ್ನು ನೋಡಿಯೇ ಹೇಳಿದ್ದಾರೇನೋ?
Leave A Reply