ಎಂ.ಬಿ.ಪಾಟೀಲರೇ, ನೀವು ಸಮಾಜದ ಉದ್ಧಾರಕ್ಕಾಗಿ ರಾಜಕಾರಣ ಮಾಡುತ್ತಿದ್ದೀರೋ ಅಥವಾ ಒಡೆಯಲೋ?
ಈ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರ ತಲೆಯಲ್ಲಿ ಬುದ್ಧಿ ತುಂಬಿದೆಯೋ ಅಥವಾ ಲದ್ದಿ ತುಂಬಿದೆಯೋ? ಇವರೇನು ಜನ ಸೇವೆಗಾಗಿ ರಾಜಕಾರಣದಲ್ಲಿದ್ದಾರೋ, ಅಥವಾ ಮತಗಳಿಗಾಗಿ ಸಮಾಜವನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಲಸು ರಾಜಕಾರಣ ಮಾಡುತ್ತಿದ್ದಾರೋ? ಬಸವಣ್ಣ ಬಸವಣ್ಣ ಅಂತ ಇವರು ವಿಷಣ್ಣನಾಗಿ ಕುಳಿತಿರುವುದೇಕೆ? ನಾಚಿಕೆ ಎಂಬುದೇ ಆಗುವುದಿಲ್ಲವೇ ಎಂ.ಬಿ.ಪಾಟೀಲರೇ ನಿಮಗೆ?
ಹೌದು, ಸಚಿವರೂ ಎಂಬುದನ್ನೂ ನೋಡದೆ, ಬೌದ್ಧಿಕವಾಗಿ ಶೂನ್ಯಸ್ಥಾನಕ್ಕೆ ಇಳಿದಿರುವ ಎಂ.ಬಿ.ಪಾಟೀಲರಿಗೆ ಹೀಗೆ ಕೇಳಲೇಬೇಕಾಗಿದೆ. ಅದೂ ಧರ್ಮದ ವಿಚಾರದಲ್ಲಿ ಹೀನಾತಿಹೀನವಾಗಿ ವರ್ತಿಸುವ ಇವರಿಗೆ ಹೀಗೆ ಕೇಳುವುದರಲ್ಲಿ ಯಾವ ತಪ್ಪೂ ಇಲ್ಲ.
ನೀವೇ ಯೋಚನೆ ಮಾಡಿ ನೋಡಿ, ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಮೊದಲಿನಿಂದ ಇದ್ದರೂ, ಅದಕ್ಕೆ ರಾಜಕೀಯ ಬಣ್ಣ ಸಿಕ್ಕಿರಲಿಲ್ಲ. ಆದರೆ, ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿರುವ ಎಂ.ಬಿ.ಪಾಟೀಲ್, ಈ ಬಾರಿಯ ಚುನಾವಣೆಯಲ್ಲಿ ಸೋಲುವ ಭಯದಿಂದ, ಲಿಂಗಾಯತ ಪ್ರತ್ಯೇಕ ಧರ್ಮದ ಪರ ನಿಂತರು.
ಕೋಟಿ, ಕೋಟಿ ದುಡ್ಡು ಖರ್ಚು ಮಾಡಿ ಲಿಂಗಾಯತರ ಸಮಾವೇಶ ಮಾಡಿದರು. ರಾಜಕಾರಣಿಗಳು ಎಳೆದು ತಂದು, ಸಮಾಜ ಒಡೆಯಲು ಮುಂದಾದರು. ಕೆಲವು ಕುತ್ಸಿತ ಮನಸ್ಸಿನ ಸ್ವಾಮೀಜಿಗಳನ್ನು ವೇದಿಕೆಗೆ ತಂದು, ಅದೆಲ್ಲಿಂದಲೋ ದಾಖಲೆ ಅಂತ ಸಂಗ್ರಹಿಸಿ, ಈಗ ತಮ್ಮದೇ ಮುಖ್ಯಮಂತ್ರಿ ಮೂಲಕ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಿಸಿದ್ದಾರೆ. ಹೇಳಿ ಒಬ್ಬ ರಾಜಕಾರಣಿಯಾದವನು ಸಮಾಜವನ್ನು ಒಗ್ಗೂಡಿಸಿ, ಮುನ್ನಡೆಯಬೇಕೋ, ಅಥವಾ ಸಮಾಜ ಒಡೆಯಬೇಕೋ? ಇವರ್ಯಾವ ಸೀಮೆ ನಾಯಕ ಸ್ವಾಮಿ?
ಇಂತಹ ಕುತ್ಸಿತ ಮನಸ್ಸಿನ ಎಂ.ಬಿ.ಪಾಟೀಲ್ ಈಗ, ಮತ್ತೊಂದು ವರಸೆ ತೆಗೆದಿದ್ದಾರೆ. ಬ್ರಾಹ್ಮಣರು ಸಹ ತಾವು ಹಿಂದೂ ಧರ್ಮದಿಂದ ಹೇಗೆ ಭಿನ್ನ ಎಂದು ತೋರಿಸಿದರೆ, ಅವರಿಗೂ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು ಎಂದು ಬೊಗಳೆ ಬಿಟ್ಟಿದ್ದಾರೆ. ನಾಚಿಕೆಯಾಗುವುದಿಲ್ಲವೇ ಸಚಿವರೇ ನಿಮಗೆ? ಹೊಟ್ಟೆಗೆ ಅನ್ನ ತಿನ್ನುವ ಹಾಗೆ, ಮಿದುಳಿಗೆ ವಿಚಾರಗಳೆಂಬ ಅನ್ನ ತುಂಬಿಸಿಲ್ಲವೆ? ನಿಮ್ಮನ್ನು ನೋಡಿದರೆ ಹಾಗೆ ಕಾಣಿಸುವುದಿಲ್ಲ.
ಎಂ.ಬಿ.ಪಾಟೀಲರೇ ಹೇಳುವ ಹಾಗೆ, ಬ್ರಾಹ್ಮಣರು ಯಾವುದೋ ದಾಖಲೆ ಸಂಗ್ರಹಿಸಿ ಅವರಿಗೂ ಪ್ರತ್ಯೇಕ ಧರ್ಮ ನೀಡಿ. ಮುಂದೊಂದು ದಿನ ಸಮುದಾಯದ ಆಧಾರದಲ್ಲಿ ಜಾಸ್ತಿ ಜನಸಂಖ್ಯೆಯಿರುವ ಒಕ್ಕಲಿಗರು, ಕುರುಬರು, ಗಾಣಿಗರು, ಕಬ್ಬಲಿಗರು, ರೆಡ್ಡಿಗಳೆಲ್ಲ ತಮಗೂ ಒಂದು ಧರ್ಮ ಬೇಕು ಎಂದರೆ, ಎಲ್ಲರಿಗೂ ಒಂದೊಂದು ಧರ್ಮ ನೀಡುತ್ತೀರಾ?
ಹೀಗೆ ಗಲ್ಲಿಗೊಂದು, ಬೀದಿಗೊಂದು ಧರ್ಮ ಮಾಡಿದರೆ ಸಮಾಜಕ್ಕೆ ಆಗುವ ಅನಾಹುತದ ಬಗ್ಗೆ ಲೆಕ್ಕವಿದೆಯೇ ನಿಮಗೆ? ನಿಮಗೆ ತಾಕತ್ತಿದ್ದರೆ, ಜನರ ದುಡ್ಡಲ್ಲೇ ಮೆರೆಯುತ್ತಿದ್ದೇನೆ ಎಂಬ ಯೋಚನೆಯಿದ್ದರೆ, ಅಭಿವೃದ್ಧಿ ಮಾಡಿ ಚುನಾವಣೆ ಗೆಲ್ಲಿ ಸ್ವಾಮಿ, ಹೀಗೆ ಸಮಾಜ ಒಡೆದು ರಾಜಕಾರಣ ಮಾಡುವ ಹೊಲಸು ಪ್ರವೃತ್ತಿ ಏಕೆ ನಿಮಗೆ?
ಈಗ ಇರುವ ಮೂರು ಮತ್ತೊಂದು ಧರ್ಮಗಳೇ ಹಿಂದೂ ಧರ್ಮಕ್ಕೆ ಕಂಟಕವಾಗಿವೆ. ನೀವೂ ಕಂಟಕವಾಗಲು ಹೊರಟಿದ್ದೀರಿ. ಒಬ್ಬ ರಾಜಕಾರಣಿ ಹೇಗಿರಬೇಕು ಎಂಬುದಕ್ಕೆ ವಿರುದ್ಧ ಪದವಾಗಿ ಕಾಣುತ್ತಿದ್ದೀರಿ ನೀವು. ಆತ್ಮಸಾಕ್ಷಿಯನ್ನು ಮಾರಿಕೊಂಡಿರುವ ನೀವು ಬಾಯಿಯೊಳಗೆ ನಾಲಗೆ ಇಟ್ಟುಕೊಂಡು ಸುಮ್ಮನಿರಿ, ಬಾಯಿ ಮೂಲಕವೇ ಹೊಲಸು ಕಾರಿ, ಚೆನ್ನಾಗಿರುವ ಸಮಾಜ ಒಡೆಯಬೇಡಿ. ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತದಂತೆ, ಹಾಗಾಯಿತು ನಿಮ್ಮ ಕತೆ. ಥೂ.
Leave A Reply