ನೀರಿನ ಸಮಸ್ಯೆ ಎದುರಿಸುತ್ತಿರುವ ಜಗತ್ತಿನ ನಗರಗಳಲ್ಲಿ ಬೆಂಗಳೂರು ಸಹ ಒಂದು, ಏನು ಮಾಡುತ್ತಿದ್ದೀರಿ ಸಿದ್ದರಾಮಯ್ಯ?
ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇನ್ನೂ ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿ ಮರ್ಯಾದೆ ಕಳೆಯಬೇಕು ಎಂದಿದ್ದಾರೋ? ಮೊದಲು ಕಸ ವಿಲೇವಾರಿಗಾಗಿ ಬೆಂಗಳೂರು ಸುದ್ದಿಯಾಯಿತು. ಬಳಿಕ ಬೆಂಗಳೂರಿನ ಗುಂಡಿಗಳು, ಮ್ಯಾನ್ ಹೋಲ್ ಗಳು ಬೆಂಗಳೂರಿನ ಮಾನ ಹರಾಜು ಹಾಕಿದವು.
ಈಗ ಪರಿಸರ ಮತ್ತು ವಿಜ್ಞಾನ ಕೇಂದ್ರ ಎಂಬ ಸಂಸ್ಥೆಯ ಡೌನ್ ಟು ಅರ್ಥ್ ಎಂಬ ನಿಯತಕಾಲಿಕೆ ಸಮೀಕ್ಷೆ ನಡೆಸಿದ್ದು, ಜಗತ್ತಿನಲ್ಲಿ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ 200 ನಗರಗಳಲ್ಲಿ ಬೆಂಗಳೂರು ಸಹ ಒಂದು ಎಂದು ಗುರುತಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಶೂನ್ಯ ದಿನ ಅಂದರೇ ಬೆಂಗಳೂರು ನೀರು ರಹಿತ ನಗರವಾಗುವತ್ತ ದಾಪುಗಾಲು ಇಡುತ್ತಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.
ಬೆಂಗಳೂರು ದಕ್ಷಿಣ ಆಫ್ರಿಕಾದ ಕೇಪ್ ಟೌನ್ ಸಾಗುತ್ತಿರುವ ನೀರಿನ ಸಮಸ್ಯೆಯ ಹಾದಿಯಲ್ಲಿ ಸಾಗುತ್ತಿದೆ. ಪ್ರಸ್ತುತ ಕೇಪ್ ಟೌನ್, ಒಂದು ವರ್ಷದಲ್ಲಿ, ತಿಂಗಳಲ್ಲಿ ಬರಿದಾಗುವ ಸಾಧ್ಯತೆ ಇದೆ. ಇದೇ ರೀತಿ ಬೆಂಗಳೂರು ಸಹ ಬರಿದಾಗುವ ದಿನ ಬಹುದೂರವಿಲ್ಲ ಎಂದು ಸಮೀಕ್ಷೆಯಲ್ಲಿ ಎಚ್ಚರಿಸಲಾಗಿದೆ.
ಬೆಂಗಳೂರಿನಲ್ಲಿ ದಿನೇದಿನೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಕಳೆದ 30 ವರ್ಷಗಳಲ್ಲಿ ಬೆಂಗಳೂರಿನಲ್ಲಿ 4.5 ಲಕ್ಷ ಇದ್ದ ಕೆರೆ, ಬಾವಿಗಳ ಸಂಖ್ಯೆ ಪ್ರಸ್ತುತ 5 ಸಾವಿರಕ್ಕೆ ಇಳಿದಿದೆ. ಇದು ಹೀಗೆಯೇ ಮುಂದುವರಿದರೆ ಬೆಂಗಳೂರು ಗಂಭೀರವಾಗಿ ನೀರಿನ ಸಮಸ್ಯೆ ಎದುರಿಸುತ್ತದೆ ಎಂದು ತಿಳಿದುಬಂದಿದೆ.
ಅದರಲ್ಲೂ ಗಂಭೀರ ಸಮಸ್ಯೆ ಎದುರಿಸುತ್ತಿರುವ ಜಗತ್ತಿನ ಹತ್ತು ಮಹಾನಗರಗಳನ್ನು ಪಟ್ಟಿ ಮಾಡಿದ್ದು, ಇದರಲ್ಲಿ ಬೆಂಗಳೂರು ಸಹ ಸೇರಿದೆ. ಚೀನಾದ ಬೀಜಿಂಗ್, ಮೆಕ್ಸಿಕೋದ ಮೆಕ್ಸಿಕೋ ಸಿಟಿ, ಯೆಮೆನ್ ನ ಸನಾ, ಕೀನ್ಯಾದ ನೈರೋಬಿ, ಟರ್ಕಿಯ ಇಸ್ತಾನ್ ಬುಲ್, ಬ್ರೆಜಿಲ್ ನ ಸಾವೋ ಪೌಲೋ, ಪಾಕಿಸ್ತಾನದ ಕರಾಚಿ ಸೇರಿ ಹಲವು ರಾಷ್ಟ್ರಗಳು ಸೇರಿವೆ.
ಕಳೆದ ನಾಲ್ಕೈದು ವರ್ಷದಿಂದ ಬೆಳ್ಳಂದೂರು ಕೆರೆ ನೊರೆ, ಬೆಂಕಿ ಸೇರಿ ಹಲವು ಕಾರಣಗಳಿಂದಾಗಿ ಸುದ್ದಿಯಾಗುತ್ತಿದೆ. ಹಲವು ಕೆರೆಗಳನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ. ಇಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಮಸ್ಯೆಯೇ ಪರಿವೇ ಇಲ್ಲದೆ ಸುಮ್ಮನಾಗಿದ್ದಾರೆ. ಪರಿಣಾಮ ಬೆಂಗಳೂರು ಶೂನ್ಯದಿನದತ್ತ ಸಾಗುತ್ತಿದೆ.
Leave A Reply