ತ್ರಿವಳಿ ತಲಾಖ್ ನಿಷೇಧಿಸಿದೆ, ನಾನ್ಯಾಕೆ ಮತ್ತೆ ನನ್ನ ಗಂಡನನ್ನು ಮದುವೆಯಾಗಬೇಕು? ಕೇಳಿ ಮುಸ್ಲಿಂ ಮಹಿಳೆಯ ಕಣ್ಣೀರ ಕತೆಯಾ…
ಕೋಲ್ಕತ್ತಾ: ದೇಶದಲ್ಲಿ ದಿನೇದಿನೆ ಮುಸ್ಲಿಂ ಮಹಿಳೆಯರ ಮೇಲೆ ಅವರ ಪತಿಯರು ನಡೆಸುತ್ತಿರುವ ದೌರ್ಜನ್ಯದಿಂದ ಮುಕ್ತಿಗೊಳಿಸಲು ಕೇಂದ್ರ ಸರ್ಕಾರವೇ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಮುಂದಾಗಿದ್ದರೂ, ತ್ರಿವಳಿ ತಲಾಖ್ ಹಾಗೂ ಅದರ ನಂತರದ ಸಮಸ್ಯೆಯಿಂದ ಮಾತ್ರ ಹೊರಬರಲು ಸಾಧ್ಯವಾಗುತ್ತಿಲ್ಲ.
ಇದಕ್ಕೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ನಿದರ್ಶನವೊಂದು ಸಿಕ್ಕಿದ್ದು, ಮಹಿಳೆಯ ಗೋಳನ್ನು ಮುಸ್ಲಿಂ ಗುರುಗಳು ಸಹ ಕೇಳದಂತಾಗಿರುವುದು, ನಮ್ಮ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಕುರಿತು ಯೋಚಿಸುವ ಹಾಗೆ ಮಾಡಿದೆ.
ನಸೀಮಾ ಆ ದುರದೃಷ್ಟವಂತೆಯಾಗಿದ್ದು, ಗಂಡನ ಕಿರುಕುಳದಿಂದ ಬೇಸತ್ತು ಹೋಗಿದ್ದಾರೆ. ಈ ಹಿಂದೆ ತಾನು ಮನೆಯಲ್ಲಿ ಇಲ್ಲದಿರುವಾಗ ಗಂಡ ರಬೀವುಲ್ ಮೂರು ಬಾರಿ ತಲಾಖ್ ತಲಾಖ್ ತಲಾಖ್ ಎಂದು ತ್ರಿವಳಿ ತಲಾಖ್ ನೀಡಿದ್ದಾನೆ. ಇದು ನಸೀಮಾಗೆ ಅಕ್ಕಪಕ್ಕದ ಮನೆಯವರಿಂದ ತಿಳಿದುಬಂದಿದೆ.
ತ್ರಿವಳಿ ತಲಾಖ್ ಶೋಷಣೆಗೆ ಬಲಿಯಾದ ಆಕೆ ತನ್ನ ಇಬ್ಬರ ಮಕ್ಕಳೊಂದಿಗೆ ತವರಿಗೆ ತೆರಳಿದ್ದಾಳೆ. ಆದರೆ ಈಗ ಮನಸ್ಸು ಬದಲಿಸಿರುವ ರಬೀವುಲ್ ನನಗೆ ನನ್ನ ಹೆಂಡತಿ ಬೇಕು ಎಂದು ಎನ್ನುತ್ತಿದ್ದಾನೆ.
ಆದರೆ, ಆಕೆ ಮತ್ತೆ ನನ್ನ ಮನೆಗೆ, ಮನಕ್ಕೆ ಬರಬೇಕಾದರೆ ಮತ್ತೆ ನನ್ನ ಜತೆ ಮದುವೆಯಾಗಬೇಕು ಎಂದು ಹಠ ಹಿಡಿದಿದ್ದಾನೆ. ಮುಸ್ಲಿಂ ಮೌಲ್ವಿಗಳ ಮೂಲಕ ಷರತ್ತು ವಿಧಿಸಿದ್ದಾನೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ, ನಸೀಮಾ, “ಸುಪ್ರೀಂ ಕೋರ್ಟೇ ತ್ರಿವಳಿ ತಲಾಖ್ ನಿಷೇಧಿಸಿದೆ. ಅಷ್ಟಕ್ಕೂ ನನ್ನ ಗಂಡ ತಲಾಖ್ ತಲಾಖ್ ತಲಾಖ್ ಎಂದಿದ್ದೇ ನನಗೆ ಕೇಳಿಲ್ಲ. ನಮ್ಮ ವಿಚ್ಛೇದನ ಅಸಾಂವಿಧಾನಿಕವಾಗಿದೆ. ನಾನ್ಯಾಕೆ ನನ್ನ ಗಂಡನನ್ನು ಮರು ಮದುವೆಯಾಗಲಿ” ಎಂದು ಪ್ರಶ್ನಿಸಿದ್ದಾಳೆ.
ನಸೀಮಾ ಹೇಳುವ ಅಂಶಗಳಲ್ಲೂ ಸತ್ಯಾಂಶವಿದೆ. ಆದರೆ ಆಕೆಯ ಮಾತನ್ನು ಧರ್ಮ ಗುರುಗಳು, ಪತಿ ಕೇಳಬೇಕಲ್ಲ. ಯಾವ ಮಹಿಳಾ ಪರ ಹೋರಾಟಗಾರರು, ಬುದ್ಧಿಜೀವಿಗಳು, ಪ್ರಗತಿಪರರು, ಜೀವಪರರು ಈಗ ಎಲ್ಲಿ ಅವಿತು ಕುಳಿತಿದ್ದಾರೋ? ಬುದ್ಧಿಯನ್ನು ಯಾರ ಕೈಗೆ ಕೊಟ್ಟಿದ್ದಾರೋ? ಖಂಡಿಸುವ ತಾಕತ್ತನ್ನು ಯಾರಿಗೆ ಅಡ ಇಟ್ಟಿದ್ದಾರೋ?
Leave A Reply