ತಮಿಳುನಾಡಿನಲ್ಲಿ ಬಿಜೆಪಿ ಕಚೇರಿ ಮೇಲೆ ದಾಳಿ ಮಾಡಿದ್ದ ಟಿಪಿಡಿಕೆ ಪಕ್ಷದ ಮೂವರ ಬಂಧನ
Posted On March 26, 2018

ಚೆನ್ನೈ: ಕೇರಳ, ತ್ರಿಪುರಾ ಸೇರಿ ಇತ್ತೀಚೆಗೆ ಬಿಜೆಪಿ ಕಚೇರಿಗಳ ಮೇಲೆ ಅನ್ಯ ಪಕ್ಷಗಳ ಗೂಂಡಾಗಿರಿ ಮಾಡುವವರು ದಾಳಿ ಮಾಡುತ್ತಿರುವ ಸುದ್ದಿಯ ಬೆನ್ನಲ್ಲೇ, ಮಾರ್ಚ್ 7ರಂದು ಕೊಯಿಮತ್ತೂರಿನಲ್ಲಿ ಬಿಜೆಪಿ ಕಚೇರಿ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು.
ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡಿದ ಆರೋಪದಲ್ಲಿ ತಂತಾಯಿ ಪೆರಿಯಾರ್ ದ್ರಾವಿಡ ಕಜಗಂ (ಟಿಪಿಡಿಕೆ) ಪಕ್ಷದ ಮೂವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಗೋಪಾಲ್, ಗೌತಮ್ ಹಾಗೂ ಜೀವ ಎಂಬುವವರನ್ನು ಬಂಧಿಸಲಾಗಿದ್ದು, ಕೊಮಿಮತ್ತೂರಿನ ಕೇಂದ್ರೀಯ ಜೈಲಿನಲ್ಲಿ ಇರಿಸಲಾಗಿದೆ ಎಂದು ಕೊಯಿಮತ್ತೂರು ಪೊಲೀಸ್ ಕಮಿಷನರ್ ಕೆ.ಪೆರಿಯಯ್ಯ ತಿಳಿಸಿದ್ದಾರೆ. ಇವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಕೇರಳ ಹಾಗೂ ತ್ರಿಪುರಾದಲ್ಲೂ ಇತ್ತೀಚೆಗೆ ಬಿಜೆಪಿ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು.
- Advertisement -
Leave A Reply