ಕಾಂಗ್ರೆಸ್ ಅಭಿಯಾನಕ್ಕಿಲ್ಲ ಕಿಂಚಿತ್ತೂ ಕಿಮ್ಮತ್ತು, ನಮೋ ಆ್ಯಪ್ ಡೌನ್ ಲೋಡ್ ಸಂಖ್ಯೆ ಏರಿಕೆಯಾಯ್ತು!
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಜನರು ಎಷ್ಟು ನಂಬಿಕೆ ಇಟ್ಟಿದ್ದಾರೆ, ದೇಶಕ್ಕಾಗಿ ಹಗಲಿರುಳೂ ದುಡಿಯುವ ಹೆಮ್ಮೆಯ ಪ್ರಧಾನಿ ಮೇಲೆ ಅದೆಷ್ಟು ವಿಶ್ವಾಸ ಇಟ್ಟಿದ್ದಾರೆ ಎಂದರೆ ಇತ್ತೀಚೆಗೆ ಪ್ರತಿಪಕ್ಷವೂ ಆಗಲು ಲಾಯಕ್ಕಲ್ಲದ ಕಾಂಗ್ರೆಸ್ ಎಷ್ಟೇ ಆರೋಪ ಮಾಡಲಿ, ಕುತಂತ್ರ ಮಾಡಲಿ, ಭಾರತೀಯರು ಮಾತ್ರ ನಂಬೋದು ನರೇಂದ್ರ ಮೋದಿ ಅವರನ್ನೇ.
ಅಷ್ಟಕ್ಕೂ ಒಬ್ಬ ಜನಪರ ನಾಯಕನನ್ನು, ಹಗಲಿರುಳು ದುಡಿಯುವ ರಾಜಕಾರಣಿಯನ್ನು ಇಡೀ ದೇಶದ ಜನ ಒಪ್ಪುವುದು, ಇವ ನಮ್ಮವ ಎಂದು ಅಪ್ಪಿಕೊಳ್ಳುವುದು ಪ್ರಜಾಪ್ರಭುತ್ವದ ಹೆಮ್ಮೆಯೇ ಸರಿ.
ಈಗ, ಇಂತಹ ಮಾತಿಗೆ ಮತ್ತೊಂದು ಉದಾಹರಣೆ ಸಿಕ್ಕಿದ್ದು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸುಳ್ಳು ಅಭಿಯಾನ ಆರಂಭಿಸಿದ್ದ ಕಾಂಗ್ರೆಸ್ಸಿಗೆ ಮುಖಭಂಗವಾಗಿದೆ. ಹೀಗನ್ನುವುದಕ್ಕಿಂತ, ದೇಶದ ಜನರೇ ಮುಖಭಂಗ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರ “ನಮೋ” ಆ್ಯಪ್ ವಿರುದ್ಧ ಸುಖಾಸುಮ್ಮನೆ ಆರೋಪಿಸಿದ್ದ ರಾಹುಲ್ ಗಾಂಧಿ, ಈ ಆ್ಯಪ್ ನಿಂದ ಅಮೆರಿಕದ ಕಂಪನಿಗಳಿಗೆ ಮಾಹಿತಿ ಸೋರಿಕೆಯಾಗುತ್ತಿದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ, ಕರ್ನಾಟಕದ ರಾಹುಲ್ ಗಾಂಧಿ ಎಂದೇ ಖ್ಯಾತಿಯಾಗಿರುವ ಮಾಜಿ ನಟಿ, ಸಂಸದೆ ರಮ್ಯಾ ಅವರಂತೂ, ಯಾರೂ ನಮೋ ಆ್ಯಪ್ ಡೌನ್ ಲೋಡ್ ಮಾಡಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಫರ್ಮಾನು ಹೊರಡಿಸಿದ್ದರು.
ಆದರೆ, ಜನರಿಗೆ ಮಾತ್ರ ಈ ಕಾಂಗ್ರೆಸ್ಸಿಗರ ಮೇಲೆ ನಂಬಿಕೆಯೇ ಇಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಆರಂಭಿಸಿದ್ದ ಡಿಲೀಟ್ ನಮೋ ಆ್ಯಪ್ ಅಭಿಯಾನ ವಿಫಲವಾಗಿದ್ದು, ಕಾಂಗ್ರೆಸ್ ಅಭಿಯಾನ ಆರಂಭಿಸಿದ ಬಳಿಕ ನಮೋ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಗ್ರಾಫ್ ಮೂಲಕವೇ ಪ್ರತ್ಯುತ್ತರ ನೀಡಿದ್ದು, ಕಾಂಗ್ರೆಸ್ ಮಗುಮ್ಮಾಗಿ ಕುಳಿತಿದೆ.
Leave A Reply