500 ಯುವತಿಯರ ಅತ್ಯಾಚಾರ ಪ್ರಕರಣ, ಮುಸ್ಲಿಂ ದೇವಮಾನವನ ಬಂಧನ
ಶ್ರೀನಗರ: ದೇಶದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರ, ಲವ್ ಜಿಹಾದ್ ಮೂಲಕ ಮತಾಂತರಗೊಳಿಸುತ್ತಿರುವ ಮೂಲಭೂತವಾದಿಗಳ ಅಟ್ಟಹಾಸದ ಸುದ್ದಿಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಂ ದೇವಮಾನವನೊಬ್ಬನ ಭಯಂಕರ ಕೃತ್ಯವೊಂದು ಸುದ್ದಿಯಾಗಿದೆ.
ಸುಮಾರು 500ಕ್ಕೂ ಹೆಚ್ಚು ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಂ ಸ್ವಯಂ ಘೊಷಿತ ದೇವಮಾನವನೊಬ್ಬನನ್ನು ಪೊಲೀಸರು ಬಂಧಿಸಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.
ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಖಾನ್ ಸಾಹಿಬ್ ಎಂಬಲ್ಲಿ ಧಾರ್ಮಿಕ ಕೇಂದ್ರವೊಂದನ್ನು ನಡೆಸುತ್ತಿರುವ ಸೈಯದ್ ಗುಲ್ಜಾರ್ ನನ್ನು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. ಅಪಾರ ಹಣ ಹೊಂದಿರುವ ಈತ ತಾನು ದೇವಮಾನವ ಎಂದು ಸ್ಥಳೀಯ ಸುದ್ದಿಪತ್ರಿಕೆ ಹಾಗೂ ಚಾನೆಲ್ ಗಳಲ್ಲಿ ಜಾಹೀರಾತು ನೀಡಿ ಯುವತಿಯರನ್ನು ಧಾರ್ಮಿಕ ಕೇಂದ್ರದತ್ತ ಸೆಳೆಯುತ್ತಿದ್ದ ಎಂದು ತಿಳಿದುಬಂದಿದೆ.
ಧಾರ್ಮಿಕ ಕೇಂದ್ರದಲ್ಲಿ ಧರ್ಮ ಬೋಧಿಸುವ ಬದಲು ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಆಮೇಲೆ ಅವರಿಗೆ ಬೆದರಿಕೆ ಹಾಕಿ ಬಾಯಿಬಿಡದಂತೆ ಮಾಡುತ್ತಿದ್ದ. ಆದರೆ ಈತನ ಕಾಮದೌರ್ಜನ್ಯವನ್ನು ಇಮ್ತಿಯಾಜ್ ಅಹ್ಮದ್ ಅಹ್ಮದ್ ಎಂಬುವವರು ಯುವತಿಗೆ ಲೈಂಗಿಕ ಕಿರುಕುಳ ನೀಡುವುದನ್ನು ಕಂಡು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಈತನನ್ನು ಬಂಧಿಸಿದ್ದಾರೆ.
Leave A Reply