ಮತ್ತೆ ವಿದ್ಯಾರ್ಥಿನಿಯ ಪ್ರಶ್ನೆಗೆ ಪಿಗ್ಗಿಬಿದ್ದ ರಾಹುಲ್ ಗಾಂಧಿ, ಪ್ರಶ್ನೆ ಸಿದ್ದರಾಮಯ್ಯನವರಿಗೆ ವಗಾವಣೆ!
ದಾವಣಗೆರೆ: ಈ ರಾಹುಲ್ ಗಾಂಧಿಯವರೇ ಹೀಗೇನಾ ಎಂಬ ಅನುಮಾನ ಕಾಡುತ್ತದೆ. ಈ ಹಿಂದೆ ಬೆಂಗಳೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಿಗೆ ಮೋದಿ ಅವರ ಕುರಿತು ಟೀಕೆ ಮಾಡಲು ಹೋಗಿ ಅವಮಾನ ಅನುಭವಿಸಿದ್ದು, ಇತ್ತೀಚೆಗೆ ಮೈಸೂರಿನಲ್ಲಿ ವಿದ್ಯಾರ್ಥಿನಿಯೊಬ್ಬರು ಎನ್ ಸಿಸಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದು ಜಾರಿಕೊಂಡಿದ್ದನ್ನು ನೋಡಿದರೆ, ಇವರೂ ಏನೂ ಬಾರದ ಮುಗ್ಧ ನಾಯಕರಾ ಎಂಬ ಅನುಮಾನ ಮೂಡುತ್ತದೆ.
ಇಂತಹುದೇ ಅನುಮಾನಕ್ಕೆ ಸ್ವತಃ ರಾಹುಲ್ ಗಾಂಧಿಯವರೇ ನೀರೆರೆದಿದ್ದು, ದಾವಣಗೆರೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಕೇಳಿದ ಸರಳ ಪ್ರಶ್ನೆಗೆ ಉತ್ತರಿಸಲಾಗದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮೈಕ್ ವರ್ಗಾವಣೆ ಮಾಡುವ ಮೂಲಕ ನುಸುಳಿಕೊಂಡಿದ್ದಾರೆ.
ಹೌದು, ದಾವಣಗೆರೆಯಲ್ಲಿ ಬುಧವಾರ ವಿದ್ಯಾರ್ಥಿಗಳು ಹಾಗೂ ರೈತರೊಂದಿಗೆ ಸಂವಾದ ಏರ್ಪಡಿಸಿದ್ದು, ವಿದ್ಯಾರ್ಥಿನಿಯೊಬ್ಬರು ಎದ್ದುನಿಂತು, ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಕುರಿತು ನಿಮ್ಮ ಅಭಿಪ್ರಾಯವೇನು ಅಂತ ವಿದ್ಯಾರ್ಥಿನಿ ರಾಹುಲ್ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.
ಆದರೆ ಎಂಜಿನಿಯರಿಂಗ್ ಓದುವ ವಿದ್ಯಾರ್ಥಿನಿ ಕೇಳಿದ ಈ ಸರಳ ಪ್ರಶ್ನೆಗೆ ಉತ್ತರಿಸಲಾಗದ ರಾಹುಲ್ ಗಾಂಧಿಯವರು, ಈ ಪ್ರಶ್ನೆ ಕರ್ನಾಟಕಕ್ಕೆ ಸಂಬಂಧಪಟ್ಟಿರುವುದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಇದಕ್ಕೆ ಉತ್ತರಿಸುವುದು ಸೂಕ್ತ ಎಂದು ಮೈಕ್ ವರ್ಗಾವಣೆ ಮಾಡಿ ಜಾಣತನದಿಂದಲೇ ನುಸುಳಿಕೊಂಡಿದ್ದಾರೆ.
ಆದರೆ ಚುನಾವಣೆ ಹಿನ್ನೆಲೆಯಲ್ಲಿ ಮೇಲಿಂದ ಮೇಲೆ ಕರ್ನಾಟಕಕ್ಕೆ ಬಂದು ಮೋದಿ ಅವರನ್ನು ತೆಗಳು ರಾಹುಲ್ ಗಾಂಧಿ ಅವರಿಗೆ ರಾಜ್ಯ ಸರ್ಕಾರ ಏಕೆ ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದರು? ಈ ಕುರಿತು ರಾಹುಲ್ ಗಾಂಧಿ ಅವರೇಕೆ ಉತ್ತರ ನೀಡಲಿಲ್ಲ? ಅವರಿಗೆ ಈ ಕುರಿತು ಗೊತ್ತಿಲ್ಲವೇ? ಉತ್ತರಿಸಲು ಉತ್ತರವೇ ಅವರ ಮಿದುಳಿನಲ್ಲಿಲ್ಲವೇ? ರಾಹುಲ್ ಗಾಂಧಿಯವರೇಕೆ ವಿದ್ಯಾರ್ಥಿಗಳು ಕೇಳುವ ಸಣ್ಣ ಪ್ರಶ್ನೆಗಳಿಗೂ ಉತ್ತರಿಸಲ್ಲ? ಈ ಎಲ್ಲ ಪ್ರಶ್ನೆಗಳಿಗೂ ರಾಹುಲ್ ಗಾಂಧಿಯವರೇ ಉತ್ತರಿಸಬೇಕು.
Leave A Reply