ಕಾಶ್ಮೀರದಲ್ಲಿ ಉಗ್ರ ವಾನಿ ಮತ್ತು ಪಾಕ್ ಧ್ವಜದ ಭಾವಚಿತ್ರದ ಟೀ ಶರ್ಟ್
ಶ್ರೀನಗರ: ಕಾಶ್ಮೀರದ ಕಣಿವೆಯಲ್ಲಿ ಪ್ರತ್ಯೇಕವಾದಿಗಳು ಮತ್ತು ಪಾಕ್ ಪೋಷಿತ ಭಯೋತ್ಪಾದಕ ಉಪಟಳ ಮಿರಿ ಮೀರಿದ್ದು, ಅದನ್ನು ತಡೆಯಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಇದೆಲ್ಲದರ ಮಧ್ಯೆ ಕಂಗೆಟ್ಟಿರುವ ಪ್ರತ್ಯೇಕವಾದಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರವೃತ್ತಿ ಮುಂದುವರಿಸಿದ್ದು, ಯುವಕರ ತಲೆ ಕೆಡಿಸಿ ದ್ವೇಷದ ಬೀಜ ಬಿತ್ತುತ್ತಿದ್ದಾರೆ. ಇತ್ತೀಚೆಗೆ ಉಗ್ರರ ದಾಳಿಯ ವೇಳೆ ನಾಗರೀಕ ಮೃತಪಟ್ಟಿದ್ದನ್ನೇ ನೆಪವಾಗಿಟ್ಟುಕೊಂಡು ಕಲ್ಲು ತೂರಾಟ ಆರಂಭಿಸಿರುವ ಪ್ರತ್ಯೇಕವಾದಿಗಳ ಪ್ರೇರಿತರು ಇದೀಗ ಮತ್ತೊಮ್ಮೆ ದೇಶವಿರೋಧಿ ವರ್ತನೆಯನ್ನು ಬಹಿರಂಗವಾಗಿ ತೋರಿದ್ದಾರೆ.
ಕಳೆದ ವರ್ಷ ಭಾರತೀಯ ಸೈನಿಕರ ಗುಂಡಿಗೆ ಬಲಿಯಾಗಿದ್ದ ಭಯೋತ್ಪಾದಕ ಬುರ್ಹಾನ್ ವನಿಯನ್ನು ಆರಾಧಿಸುವ ಚಾಳಿಯನ್ನು ಪ್ರತ್ಯೇಕವಾದಿಗಳು ಮುಂದುವರಿಸಿದ್ದಾರೆ. ಕೆಲ ದಿನಗಳಿಂದ ನಡೆಯುತ್ತಿರುವ ಕಲ್ಲು ತೂರಾಟದ ವೇಳೆಯಲ್ಲಿ ಕೆಲವು ಭಯೋತ್ಪಾದಕರ ಬೆಂಬಲಿಗರು ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಸದಸ್ಯ, ಉಗ್ರ ಬುರ್ಹಾನ್ ವಾನಿ ಮತ್ತು ಪಾಕಿಸ್ತಾನದ ಭಾವಚಿತ್ರವಿರುವ ಟೀ ಶರ್ಟ್ ಗಳನ್ನು ಧರಿಸಿ, ಕಲ್ಲು ತೂರಾಟದಲ್ಲಿ ಭಾಗಿಯಾಗಿರುವ ಚಿತ್ರಗಳು ರಾಷ್ಟ್ರೀಯ ವಾಹಿನಿಯೊಂದಕ್ಕೆ ದೊರಕಿವೆ.
ಈ ಮೂಲಕ ಕಾಶ್ಮೀರದ ಕಣಿವೆಯಲ್ಲಿ ಭಯೋತ್ಪಾದಕ ಬುರ್ಹಾನ್ ವಾನಿಯನ್ನು ಮಹಾನ್ ಹೋರಾಟಗಾರನೆಂಬಂತೆ ಬಿಂಬಿಸಿ, ಯುವಕರನ್ನು ಸೆಳೆಯಲು ಪಾಕ್ ಮೂಲಕ ಭಯೋತ್ಪಾದಕ ಸಂಘಟನೆಗಳು ಮತ್ತು ಪ್ರತ್ಯೇಕವಾದದ ಹೆಸರಲ್ಲಿ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಪ್ರತ್ಯೇಕವಾದಿಗಳು ಪ್ರಯತ್ನಿಸುತ್ತಿರುವ ಅಂಶ ಸಾಭೀತಾಗಿದೆ.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೇರಿದ ನಂತರ ಕಣಿವೆ ರಾಜ್ಯಗಳಲ್ಲಿ ಉಂಟಾಗುತ್ತಿರುವ ನಿರಂತರ ಗಲಭೆ, ಕಲ್ಲು ತೂರಾಟಗಳನ್ನು ನಿಯಂತ್ರಿಸಲು ನಿರಂತರವಾಗಿ ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ಅಲ್ಲದೇ ನೋಟ್ಯಂತರ, ತೆರಿಗೆ ಇಲಾಖೆ ದಾಳಿಯಿಂದ ಪ್ರತ್ಯೇಕವಾದಿಗಳಿಗೆ ಹಣದ ಅಭಾವ ಉಂಟಾಗಿತ್ತು. ಕೇಂದ್ರದ ನಿರ್ಧಾರಗಳಿಂದ ವಿಚಲಿತವಾಗಿರುವ ಪ್ರತ್ಯೇಕವಾದಿಗಳು ಹಲವು ಅಡ್ಡ ಮಾರ್ಗಗಳನ್ನು ಹಿಡಿದು, ಹಿಂಸೆಗೆ ಪ್ರಚೋಧನೆ ನೀಡುತ್ತಿರುವುದು ಈ ಮೂಲಕ ಸಾಬೀತಾಗುತ್ತಿದೆ.
Leave A Reply