ಗನ್, ದಂಡದಿಂದ ಬಿಜೆಪಿ ಓಡಿಸುತ್ತೇವೆ: ಕಾಂಗ್ರೆಸ್ ಶಾಸಕನ ದ್ವೇಷ ಭಾಷಣ
ಕೋರ್ಬಾ: ದೇಶಾದ್ಯಂತ ಬಿಜೆಪಿ ಅಲೆಯ ಪರಿಣಾಮದಿಂದ ಕಾಂಗ್ರೆಸ್ ನಾಮಾವಶೇಷವಾಗುತ್ತಿದೆ. ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತ ಘೋಷಣೆಯೊಂದಿಗೆ ನಿರಂತರವಾಗಿ ಎಲ್ಲ ಚುನಾವಣೆಗಳಲ್ಲಿ ಭರ್ಜರಿ ವಿಜಯ ದುಂಧುಬಿ ಭಾರಿಸುತ್ತಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು, ಜನರ ಮಧ್ಯೆ ದ್ವೇಷ ಬಿತ್ತುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಸಲು ಹರಸಾಹಸ ಪಡುತ್ತಿದ್ದಾರೆ. ಅಧಿಕಾರಕ್ಕಾಗಿ ಯಾವುದೇ ಹೀನ ಸ್ಥಾನಕ್ಕೆ ಇಳಿಯುತ್ತೇವೆ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಅದಕ್ಕೆ ಛತ್ತೀಸಘಡ್ ಕಾಂಗ್ರೆಸ್ ಶಾಸಕರೊಬ್ಬರು ಹಿಂಸಾತ್ಮಕ, ಪ್ರಚೋಧಾತ್ಮಕ ಹೇಳಿಕೆ ನೀಡಿ, ಧ್ವೇಷ ಬಿತ್ತಿದ್ದಾರೆ.
ಬುಲೆಟ್ ಮತ್ತು ಕೋಲು ಬಳಸಿಯಾದರೂ ಬಿಜೆಪಿಯನ್ನು ಛತ್ತೀಸಘಡ್ ದ ಅಧಿಕಾರದಿಂದ ಕಿತ್ತೊಗೆಯಲಾಗುವುದು ಎಂಬ ಹೇಳಿಕ ಮೂಲಕ ಕಾಂಗ್ರೆಸ್ ಶಾಸಕ ರಾಮ್ದಾಯ್ ಉಕೆ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಛತ್ತೀಸಘಡ್ ದ ಕೋರ್ಬಾ ಜಿಲ್ಲೆಯ ಸೆಂಥಿಯಾ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ‘ಶತಾಯಗತಾಯ ಬಿಜೆಪಿಯನ್ನು ರಾಜ್ಯದಿಂದ ಹೊಡೆದೋಡಿಸಬೇಕಿದೆ. ಅದಕ್ಕೆ ಕಾರ್ಯಕರ್ತರು ಯಾವುದೇ ಮಾರ್ಗವಿಡಿದರೂ ಸರಿ ಎಂಬರ್ಥದಲ್ಲಿ ಭಾಷಣ ಬಿಗಿದಿದ್ದಾರೆ.
ಅದೇ ಕಾರ್ಯಕ್ರಮದಲ್ಲಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಛತ್ತೀಸಘಡ್ ಉಸ್ತುವಾರಿ ಪಿಎಲ್ ಪುನಿಯಾ ಶಾಸಕರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಕಾಂಗ್ರೆಸ್ ನ ಮುಖಂಡರ ಹಿಂಸಾಪ್ರಚೋಧಕ ಮನಸ್ಥಿತಿಯನ್ನು ಹೊರಹಾಕಿದ್ದಾರೆ. ಶೀಘ್ರದಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗಲಿದ್ದು, 2013ರಲ್ಲಿ ಸೋತು ಕಂಗೆಟ್ಟಿರುವ ಕಾಂಗ್ರೆಸ್ ನಾಯಕರು ಈ ರೀತಿ ಪ್ರಚೋಧನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಲೇವಡಿ ಮಾಡಿದ್ದಾರೆ.
Leave A Reply