ಪಶ್ಚಿಮ ಬಂಗಾಳದಲ್ಲೂ ಅರಳಲಿದೆ ಕಮಲ: ಇಲ್ಲಿದೆ ರಾಜಕೀಯ ವಿಶ್ಲೇಷಕರ ಅದ್ಭುತ ವಿಶ್ಲೇಷಣೆ
ಕೊಲ್ಕತ್ತ: ಭಾರತೀಯ ಜನತಾ ಪಕ್ಷದ ಕಾಂಗ್ರೆಸ್ ಮುಕ್ತ ಭಾರತ ಕನಸು ಭಾಗಶಃ ಸಾಕಾರವಾಗಿದ್ದು, ಇದೀಗ ದೇಶದ ಕೆಲ ರಾಜ್ಯಗಳಲ್ಲಿ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಆಡಳಿತ ನಡೆಸುತ್ತಿರುವ ಪಕ್ಷಗಳನ್ನು ಅಧಿಕಾರದಿಂದ ಕೆಳಗಿಳಿಸಿ, ಸುಭದ್ರ ಆಡಳಿತ ನೀಡುತ್ತಿದೆ. ಅದರ ಫಲವಾಗಿ ನಿರಂತರವಾಗಿ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ವಿಜಯ ದುಂಧುಬಿ ಭಾರಿಸುತ್ತಿದೆ. 25 ವರ್ಷ ಕಮ್ಯುನಿಸ್ಟರ್ ಆಡಳಿತದ ಕಪಿಮುಷ್ಠಿಯಲ್ಲಿದ್ದ ತ್ರಿಪುರಾ ಬಿಜೆಪಿಯ ತೆಕ್ಕೆಗೆ ಬಂದ ನಂತರ ಬಿಜೆಪಿ ಉತ್ಸಾಹ ಇಮ್ಮಡಿಯಾಗಿದೆ. ಈ ಉತ್ಸಾಹ ಪಶ್ಚಿಮ ಬಂಗಾಳದ ಚುನಾವಣೆಯಲ್ಲೂ ಕಾರ್ಯ ನಿರ್ವಹಿಸಲಿದ್ದು, ಬಿಜೆಪಿ ವಿಜಯ ಸಾಧಿಸಲಿದೆ ಎಂಬುದು ರಾಜಕೀಯ ವಿಶ್ಲೇಷಣೆ.
ಒಂದೆಡೇ ಬಲಿಷ್ಠ ಸಂಘಟನೆ, ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಜನಪರ ಯೋಜನೆಗಳು ಜನರಲ್ಲಿ ಹೊಸ ಭರವಸೆ ಮೂಡಿಸಿವೆ. ಆದ್ದರಿಂದಲೇ ಪಶ್ಚಿಮ ಬಂಗಾಳದಲ್ಲೂ ಬಿಜೆಪಿಯ ವಿಜಯಯಾತ್ರೆ ಮುಂದುವರಿಯುವ ಸೂಚನೆಗಳು ಗೋಚರಿಸಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಅವರ ಮಿತಿ ಮೀರಿದ ಮುಸ್ಲಿಂ ತುಷ್ಟೀಕರಣ, ಹಿಂದೂಗಳ ಹತ್ತಿಕ್ಕುವ ಕಾರ್ಯ ತಳಮಟ್ಟದ ಜನರನ್ನು ಮಮತಾ ಸರ್ಕಾರದ ಮೇಲೆ ಹೇಸಿಗೆ ಮೂಡಿಸಿದೆ ಎನ್ನುವುದು ಅಭಿಪ್ರಾಯ.
ಮಮತಾ ಆಡಳಿತದಲ್ಲಿ ಎಲ್ಲವೂ ಸುಸೂತ್ರವಾಗಿದೆ ಎಂದಾದರೂ ಕೆಲವು ಸಚಿವರ ಮಿತಿ ಮೀರಿದ ವರ್ತನೆ, ರಾಷ್ಟ್ರಮಟ್ಟದ ವಿಷಯದಲ್ಲಿ ಮಮತಾ ಸರ್ಕಾರ ತೋರುತ್ತಿರುವ ಅನಗತ್ಯ ಕಿರಿಕಿರಿ ಜನರನ್ನು ತೃಣಮೂಲ ಕಾಂಗ್ರೆಸ್ ಮೇಲೆ ಸಾತ್ವಿಕ ಆಕ್ರೋಶ ಮೂಡಿಸಿದೆ. ಇದು ಭವಿಷ್ಯದಲ್ಲಿ ಹೆಚ್ಚುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಇತ್ತೀಚೆಗೆ ನಡೆದ ಶ್ರೀರಾಮ ಜಯಂತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ಲಕ್ಷಾಂತರ ಜನರ ಭಾಗವಹಿಸಿದ್ದು, ಹೊಸ ಅಲೆಯ ಸೂಚನೆ ಮೂಡಿಸಿದೆ.
ಕೆಲದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದ್ದು, ತೃಣಮೂಲ ಕಾಂಗ್ರೆಸ್ ಗೆ ಭಾರಿ ಭಯ ಮೂಡಿಸಿದೆ. ಬಿಜೆಪಿಗೆ ಭದ್ರ ನೆಲೆಯೇ ಇಲ್ಲದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬಗ್ಗೆ ಅಧಿಕಾರದಲ್ಲಿರೂವ ಪಕ್ಷಕ್ಕೆ ಭಯ ಮೂಡಿಸುವ ಮಟ್ಟಿಗೆ ಬಿಜೆಪಿ ಬಲಿಷ್ಠವಾಗಿದೆ.
ಇಲ್ಲೊಂದಿಷ್ಟು ಕಾರಣಗಳು
- ಪಶ್ಚಿಮ ಬಂಗಾಳದಲ್ಲಿ ಬಲಿಷ್ಠವಾಗಿದ್ದ ಕಮ್ಯುನಿಸ್ಟ್ ಪಕ್ಷದ ಅವನತಿ
- ಕೇಂದ್ರದ ಜೊತೆ ಮಮತಾ ಅನಗತ್ಯ ಕಿರಿಕಿರಿ ಜನರಿಗೆ ಬೇಸರ
- ಸಂಘ ಪರಿವಾರದ ಬಲಿಷ್ಠ ಹಿಡಿತ ಸಾಧನೆ, ಬಿಜೆಪಿ ತಳಮಟ್ಟದ ಸಂಘಟನೆ
- ಹಿಂದೂ ವಿರೋಧಿ ಮಮತಾ ಆಡಳಿತ
- ಮಿತಿ ಮೀರಿದ ಮುಸ್ಲಿಂ ತುಷ್ಟೀಕರಣ ನೀತಿಗಳು
- ಹೇಳ ಹೆಸರೇ ಇಲ್ಲದ ಪಕ್ಷವೇ ಇದೀಗ ಪ್ರತಿ ಪಕ್ಷವಾಗಿರುವುದು.
- ಪ್ರಧಾನಿ ನರೇಂದ್ರ ಮೋದಿ ಅವರ ಅಲೆ, ಆಡಳಿತದ ಪರಿಣಾಮ ಪಶ್ಚಿಮ ಬಂಗಾಳದ ಮೇಲೂ ಪರಿಣಾಮ ಬೀರಲಿದೆ.
- ಅಭಿವೃದ್ಧಿ ಮರೆತ ಮಮತಾ ಬಗ್ಗೆ ಜನರಿಗೆ ಬೇಸರ
- ದೇಶಾದ್ಯಂತ ಬಿಜೆಪಿ ಗೆಲುವು ಹೊಸ ಅಲೆಯನ್ನು ಸೃಷ್ಟಿಸಿದೆ.
- ತೃಣಮೂಲ ಕಾಂಗ್ರೆಸ್ ನ ಕೆಲವು ಹಿರಿಯ ನಾಯಕರು ಬಿಜೆಪಿ ಸೇರ್ಪಡೆಯಾಗಿರುವುದು.
Leave A Reply