ಮಾತನಾಡದೆಯೇ ಮಾಡಿ ತೋರಿಸುವ ನರೇಂದ್ರ ಮೋದಿಗೆ ಮಾತಾಡಿ ಮಾತಾಡಿ ಎಂದು ಘೀಳಿಡುವುದೇಕೆ?
ಈ ಕಾಂಗ್ರೆಸ್ಸಿಗರೇ ಹಾಗೆ. ದೇಶವನ್ನು 60 ವರ್ಷ ಆಳುವ ಜತೆಗೆ ಹಾಳೂ ಮಾಡಿ ಈಗ ಸುಬಗರಂತೆ ಮಾತನಾಡುತ್ತಾರೆ. ಈ ದೇಶದ ಪ್ರಧಾನಿಯೊಬ್ಬರು 10 ವರ್ಷ ಮಾತೇ ಆಡದೆ ಆಳ್ವಿಕೆ ನಡೆಸಿದರೂ, ದೇಶದಲ್ಲಿ ಲಕ್ಷಾಂತರ ಕೋಟಿ ರೂ. ಹಗರಣ ನಡೆದರೂ, ನಿರ್ಭಯಾ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ನಡೆದರೂ ಪ್ರಧಾನಿಯೊಬ್ಬರು ಬಾಯಿಗೆ ಫೆವಿಕಾಲ್ ಹಾಕಿಕೊಂಡಂತೆ ಕೂತಿದ್ದರೂ ಕಾಂಗ್ರೆಸ್ಸಿಗರು ಸೊಲ್ಲೆತ್ತಲಿಲ್ಲ.
ಆದರೆ ಈಗ ನೋಡಿ, ದೇಶದ ಯಾವ ರಾಜ್ಯದಲ್ಲಿ ಅನಾಹುತ ನಡೆದರೂ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬಂತೆ ಬೊಬ್ಬೆ ಹೊಡೆಯುತ್ತಾರೆ. ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯ ವೈಫಲ್ಯದಿಂದ ಡಾ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯಾದರೂ, ಮೋದಿ ಅವರ ವಿರುದ್ಧವೇ ಆರೋಪಿಸುವ ಮೂಲಕ ಕಾಂಗ್ರೆಸ್ ತಾನೆಂತ ಕುತ್ಸಿತ ಮನಸ್ಸಿನ ಪಕ್ಷ ಎಂಬುದು ಸಾಬೀತುಪಡಿಸುತ್ತದೆ.
ಈಗಲೂ ಅಷ್ಟೇ, ಉನ್ನಾವೋ, ಕಥುವಾ ಎಂಬಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಆರೋಪಿಗಳಿಗೆ ಶಿಕ್ಷೆ ವಿಧಿಸದೇ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೇ ಹೇಳಿದ್ದಾರೆ. ಹೀಗಿದ್ದರೂ, ಕಾಂಗ್ರೆಸ್ಸಿಗರು, ಕೆಲವು ಸೋ ಕಾಲ್ಡ್ ಬುದ್ಧಿಜೀವಿಗಳು ಮಾತ್ರ ಮೋದಿ ಈ ಕುರಿತು ಮಾತನಾಡುತ್ತಿಲ್ಲ, ಬಾಯಿಯೇ ಬಿಡುತ್ತಿಲ್ಲ ಎಂದು ಬೊಬ್ಬೆ ಹಾಕಿದರು.
ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯಾವ ಮೂಲೆಯಲ್ಲಿ ಅನಾಹುತ ನಡೆದರೂ, ಏನೇ ಆದರೂ ಮೊದಲು ಪ್ರತಿಕ್ರಿಯಿಸಬೇಕೆ? ಆಗೋ ಅನಿಷ್ಠಕ್ಕೆಲ್ಲ ಅವರೇ ಕಾರಣವೇ? ಅಥವಾ ಅವರ ಮೇಲೆಯೇ ಎಲ್ಲ ಹೊಣೆ ಇದೆಯೇ? ಮೋದಿ ಅವರೇ ಎಲ್ಲದಕ್ಕೂಉತ್ತರಿಸಬೇಕು ಎಂದು ಆಯಾ ರಾಜ್ಯ ಸರ್ಕಾರಗಳು ಇರುವುದು ಏಕೆ? ಅಷ್ಟಕ್ಕೂ ಮೋದಿ ಅವರು ಮಾತನಾಡದೆಯೇ ಎಲ್ಲ ಕೆಲಸ ಮಾಡುತ್ತಿದ್ದಾರಲ್ಲ, ಅದಕ್ಕೇನೆನ್ನುತ್ತಾರೆ ಈ ಕಾಂಗ್ರೆಸ್ಸಿಗರು?
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಹಾಗೇ ಯೋಚನೆ ಮಾಡಿ ನೋಡಿ. 60 ವರ್ಷ ದೇಶವನ್ನು ಆಳಿದರೂ ಕಾಂಗ್ರೆಸ್ ಸ್ವಚ್ಛತೆ ಮಾಡುವುದು ಬಿಡಿ, ಆ ಕುರಿತು ಸಣ್ಣ ಜಾಗೃತಿ ಸಹ ಮೂಡಿಸಿರಲಿಲ್ಲ. ಭ್ರಷ್ಟಾಚಾರದ ಬೇರುಗಳು ದೇಶದ ಆಳಕ್ಕೆ ಹೋಗಿದ್ದವು. ತೆರಿಗೆ ವ್ಯವಸ್ಥೆ ದಲ್ಲಾಳಿಗಳಿಂದ ನಲುಗುತ್ತಿತ್ತು.
ಅದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗುತ್ತಲೇ ಮೊದಲು ಕೈಗೊಂಡ ಪ್ರಮುಖ ನಿರ್ಧಾರವೇ ಸ್ವಚ್ಛ ಭಾರತ್ ಅಭಿಯಾನ. ಅದರ ಪರಿಣಾಮವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಶೌಚಾಲಯ ನಿರ್ಮಿಸಲಾಗಿದೆ. ಇನ್ನು ನೋಟು ನಿಷೇಧಗೊಳಿಸಿ ಭ್ರಷ್ಟರನ್ನು ಹೆಡೆಮುರಿಕಟ್ಟಿದ್ದು ಇದೇ ನರೇಂದ್ರ ಮೋದಿ. ಸರಕು ಮತ್ತು ಸೇವಾ ತೆರಿಗೆ ಮೂಲಕ ದೇಶದ ತೆರಿಗೆ ವ್ಯವಸ್ಥೆಯನ್ನು ಸುಧಾರಣೆಯತ್ತ ಕೊಂಡೊಯ್ಯುತ್ತಿರುವುದು ಇದೇ ಮೋದಿ ಅವರೇ.
ಮಾತನಾಡದೆಯೇ ದೇಶದ ಹಿತಕ್ಕಾಗಿ ಇಷ್ಟೆಲ್ಲ ಮಾಡುತ್ತಿರುವ ನರೇಂದ್ರ ಮೋದಿ ಅವರು, ಯಾವುದೇ ಅವಾಂತರ ಸಹ ಸಹಿಸಿಕೊಳ್ಳುವುದಿಲ್ಲ. ಮಾತನಾಡದೆಯೇ ಕ್ರಮ ಕೈಗೊಂಡು ಬಿಡುತ್ತಾರೆ.
ಇದಕ್ಕೆ ಜಮ್ಮು ಕಾಶ್ಮೀರದಲ್ಲಿ ಉಪಟಳ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲಕ ತಿರುಗೇಟು ನೀಡಿದ್ದು, ಡೋಕ್ಲಾಂ ಬಿಕ್ಕಟ್ಟು ಸೃಷ್ಟಿಸಿದ್ದ ಚೀನಾಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಿದ್ದು ಇದಕ್ಕೆ ಪ್ರಮುಖ ಉದಾಹರಣೆ.
ಇನ್ನು ತೀರಾ ಇತ್ತೀಚೆಗೆ ಬ್ಯಾಂಕುಗಳಿಗೆ ಮೋಸ ಮಾಡಿ ವಿದೇಶಕ್ಕೆ ಹಾರುವವರಿಗೂ ಮೋದಿ ಅವರು ಇದೇ ಗತಿ ಕಾಣಿಸಿದ್ದಾರೆ. ಅದಕ್ಕೆ ನೀರವ್ ಮೋದಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದೇ ನಿದರ್ಶನ. ಹೇಳಿ ಮಾತನಾಡದೆಯೇ ಮೋದಿ ಇಷ್ಟೆಲ್ಲ ಮಾಡಲಿಲ್ಲವೇ?
ಸಂಸತ್ ಅಧಿವೇಶನಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ನರೇಂದ್ರ ಮೋದಿ ಅವರು ಉಪವಾಸ ಮಾಡಿ ಕಾಂಗ್ರೆಸ್ಸಿಗರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದು, ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ಉನ್ನಾವೋ, ಕಥಾವೋ ಅತ್ಯಾಚಾರ ಪ್ರಕರಣದ ಕುರಿತು ಮೋದಿ ಮಾತಾಡಿಲ್ಲ ಮಾತಾಡಿಲ್ಲ ಎಂದು ಬೊಬ್ಬೆ ಹಾಕಿತು. ಕೊನೆಗೂ ಅಪರಾಧಿಗಳಿಗೆ ಶಿಕ್ಷೆ ವಿಧಿಸದೆ ಬಿಡುವುದಿಲ್ಲ ಎಂದು ಮೋದಿ ಅವರು ತಿಳಿಸಿದ್ದಾರೆ. ಈಗ ಕಾಂಗ್ರೆಸ್ ಬಾಯಿ ಮುಚ್ಚಿಕೊಂಡು ತೆಪ್ಪಗಾಗಿದೆ.
Leave A Reply