ವಿಶ್ವದ ಎಲ್ಲೆ ಹಿಂದೂಗಳು ಸಂಕಷ್ಟದಲ್ಲಿದ್ದರೂ ಭಾರತದಲ್ಲಿ ಆಶ್ರಯ: ಭಾಗವತ್ ಜೀ
ಅಗರ್ತಲಾ: ವಿಶ್ವದೆಲ್ಲೆಡೆ ವ್ಯಾಪಿಸಿರುವ ಹಿಂದೂಗಳಿಗೆ ತಾವಿರುವ ರಾಷ್ಟ್ರದಲ್ಲಿ ತೊಂದರೆ, ಹಿಂಸೆ, ಕಿರುಕುಳ ನೀಡುವುದು ಸೇರಿ ಯಾವುದೇ ಸಮಸ್ಯೆಗಳಿದ್ದರೇ ಭಾರತದಲ್ಲಿ ಬಂದು ಆಶ್ರಯ ಪಡೆಯಬಹುದು. ಭಾರತ ಹಿಂದೂಗಳ ರಕ್ಷಣೆಗೆ ಸದಾ ಸಿದ್ಧವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಂಸಂಘಚಾಲಕ ಮೋಹನ್ ಭಾಗವತ್ ಜೀ ಹೇಳಿದ್ದಾರೆ.
ತ್ರಿಪುರಾದ ಅಗರ್ತಲಾದ ವಿವೇಕಾನಂದ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊಮ್ಮಾತ್ ರ್ಯಾಲಿಯಲ್ಲಿ ಮಾತನಾಡಿದ ಅವರ ಈ ಹೇಳಿಕೆ ತೀವ್ರ ಮಹತ್ವ ಪಡೆದುಕೊಂಡಿದ್ದು, ಇಡೀ ವಿಶ್ವವೇ ಭಾರತವನ್ನು ಎಚ್ಚರಿಕೆಯ ಕಣ್ಣಿನಿಂದ ನೋಡುವಂತಾಗಿದೆ.
ಭಾರತ ಹಿಂದೂಗಳ ಪುಣ್ಯಭೂಮಿ. ಅವರಿಗೆ ಆಶ್ರಯವನ್ನು ಭಾರತ ನೀಡಬೇಕು. ವಿಶ್ವದ ಯಾವುದೇ ಮೂಲೆಯಲ್ಲೂ ಹಿಂದೂಗಳು ಸಂಕಷ್ಟಕ್ಕೀಡಾದರೇ ಅವರು ಭಾರತದಲ್ಲಿ ಆಶ್ರಯ ಪಡೆಯಬೇಕು. ಹಿಂದೂಗಳು ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.
ಹಿಂದುತ್ವವು ಹಿಂದೂ ಧರ್ಮಕ್ಕಿಂತ ಭಿನ್ನವಾಗಿದ್ದು, ಪಶ್ಚಿಮದ ಜನರು ಭಾರತದ ಹಿಂದೂ ಧರ್ಮ ಹಾಗೂ ಸಿದ್ಧಾಂತದ ಬಗ್ಗೆ ಆಸಕ್ತಿ ಹೊಂದಿವೆ. ಪಶ್ವಿಮ ಜಗತ್ತು ಶಾಪ ಮುಕ್ತವಾಗಲು ಬಯಸಿದೆ. ಆದ್ದರಿಂದ ಅವರ ನಿರೀಕ್ಷೆಗಳನ್ನು ಈಡೇರಿಸಬೇಕು ಎಂದು ತಿಳಿಸಿದ್ದಾರೆ.
ಹಿಂದೂಗಳು ದುಷ್ಟಶಕ್ತಿಗಳ ವಿರುದ್ಧವಾಗಿ ಸಂಘಟಿತರಾಗಬೇಕು. ಅಪಘಾನಿಸ್ತಾನದಿಂದ ಬರ್ಮಾದವರೆಗೂ ಹಿಂದೂಗಳಿಗೆ ಅನುಯಾಯಿಗಳಿದ್ದರು. ಹಿಂದೂಗಳನ್ನು ಮತಾಂತರ ನಡೆಸುತ್ತಿದೆ. ಆದರೆ ಹಿಂದೂಗಳಿಂದ ಇತರ ಮತಗಳಿಗೆ ಬೆದರಿಕೆ ಒಡ್ಡಿಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ ಸೇರಿ ನಾನಾ ದೇಶಗಳಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿರುವುದು, ಸಾಮೂಹಿಕ ಒತ್ತಾಯದ ಮತಾಂತರ, ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿರುವ ವೇಳೆಯಲ್ಲೇ ಭಾಗವತ್ ಜೀ ಈ ಹೇಳಿಕೆ ಗಮನ ಸೆಳೆದಿದೆ. ವಿಶ್ವದ ನಾನಾ ಕಡೆ ಸಂಕಷ್ಟದಲ್ಲಿರುವ ಹಿಂದೂಗಳನ್ನು ಒಗ್ಗೂಡಿಸುವ ಮತ್ತು ಹಿಂದೂ ಗಳ ತಾಕತ್ತು ತೋರಿಸುವ ಬೇಡಿಕೆಗೆ ಈ ಹೇಳಿಕೆ ತೀವ್ರ ಮಹತ್ವ ಪಡೆದಿದೆ.
Leave A Reply