ಸ್ಪರ್ಧಿಸಲಿಚ್ಚಿಸಿದ ಎರಡು ಕ್ಷೇತ್ರದಲ್ಲಿ ಸಿಎಂಗೆ ಸೋಲುವ ಭೀತಿ ಎಂದರೇ ಅವರ ಆಡಳಿತ ವೈಖರಿ ಎಂಥಾದ್ದು..!
ಸಿಎಂ ಸಿದ್ದರಾಮಯ್ಯ ಪ್ರಸ್ತುತ ದಕ್ಷಿಣ ಭಾರತದ ಮುಖ್ಯಮಂತ್ರಿಗಳಲ್ಲಿ ಬಹು ಚರ್ಚಿತ, ಇಡೀ ದೇಶದಲ್ಲಿ ಕಾಂಗ್ರೆಸ್ ಮುಕ್ತವಾದರೂ ಕೈ ಪಡೆಗೆ ಆಸರೆ ನೀಡುತ್ತಿರುವ ವ್ಯಕ್ತಿ. ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ವಹಿಸಿಕೊಂಡ ಕ್ಷಣದಿಂದ ಅವಕಾಶವಾದಿ ರಾಜಕಾರಣ ಮಾಡುತ್ತಲೇ ಬಂದರು. ಅದಕ್ಕೂ ಮೊದಲು ಅವರು ಪರಮೇಶ್ವರ ಅವರನ್ನು ಹಿಂಬಾಗಿಲ ಮೂಲಕ ಸೋಲಿಸಿದರು. ಅದಕ್ಕಿಂತ ಮೊದಲು ದೇವೇಗೌಡರಿಗೆ ಅನ್ಯಾಯ ಮಾಡಿದರು. ಅದೆಲ್ಲವನ್ನು ಸಹಿಸಿಕೊಂಡಿದ್ದ, ಜನ ಸಿದ್ದರಾಮಯ್ಯ ಕೈಗೆ ಅಧಿಕಾರ ನೀಡಿದರು.
ಇದೀಗ ಸಿದ್ದರಾಮಯ್ಯ ಐದು ವರ್ಷ ಪೂರ್ಣಗೊಳಿಸಿದ್ದಾರೆ. ಆಡಳಿತಾಂಗವನ್ನು ಅಧೋಗತಿಗೆ ಇಳಿಸುವ ಎಲ್ಲ ಪ್ರಯತ್ನಗಳನ್ನು ಸಿಎಂ ಸಿದ್ದರಾಮಯ್ಯ ಮತ್ತು ತಂಡ ಯಶಸ್ವಿಯಾಗಿ ಮಾಡಿತ್ತು. ಅದಕ್ಕೆ ಮುನ್ನುಡಿ ಬರೆದಿದ್ದು ಲೋಕಾಯುಕ್ತಕ್ಕೆ ಕೊನೆ ಮೊಳೆ ಹೊಡೆದಿದ್ದು. ಯಾವಾ ಭ್ರಷ್ಟ್ರರಿಗೆ ಸಿಂಹ ಸ್ವಪ್ನವಾಗಿದ್ದ ಲೋಕಾಯುಕ್ತ ಮುಚ್ಚಿಸಿದರೋ ಆಗಲೇ ಸಿಎಂ ಅಂತ್ಯ ಆರಂಭವಾಯಿತು ಎಂದರೆ ಅಚ್ಚರಿಯಿಲ್ಲ.
ಇಡೀ ಐದು ವರ್ಷದಲ್ಲಿ ಅತ್ತ ಸಮಾಜವಾದಿಯೂ ಅಲ್ಲ, ಜಾತ್ಯಾತೀತವಾದಿಯೂ ಅಲ್ಲ ಎಂಬತೆ ತಮ್ಮ ವರ್ತನೆಯಲ್ಲಿ ತೋರಿದ್ದರು. ಆದರೆ ನಂತರ ತಾವು ಒಬ್ಬ ಪಕ್ಕ ಎಡಬಿಡಂಗಿ ಎಂಬುದನ್ನು ಸಾಬೀತುಪಡಿಸಿದರು. ಐದು ವರ್ಷ ಅಧಿಕಾರಕ್ಕೆ ಬಂದ ತಕ್ಷಣ ಪರಿಸ್ಥಿತಿ ಹದಗೆಡಲು ಆರಂಭವಾಯಿತು. ಸಿದ್ದರಾಮಯ್ಯನ ತಮ್ಮ ಸಲಹೆಗಾರರು ಮತ್ತು ಎಡಬಿಡಂಗಿಗಳ ಸಲಹೆಯೊಂದಿಗೆ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿದರು. ಜನರ ಮಧ್ಯೆ ಧರ್ಮ ಒಡೆಯುವ ವಿಷ ಬೀಜ ಬಿತ್ತಿದ್ದರು. ಅದರ ಪರಿಣಾಮ ಇದೀಗ ಸಿಎಂ ಸಿದ್ದರಾಮಯ್ಯ ಎದುರಿಸುತ್ತಿದ್ದಾರೆ. ಸಿದ್ದರಾಮಯ್ಯಗೆ ಸೂಕ್ತ ನೆಲೆ ದೊರಕದೇ ದಿನಕ್ಕೊಂದು ಕ್ಷೇತ್ರವನ್ನು ಹುಡುಕಾಡುತ್ತಾ ಓಡಾಡುತ್ತಿದ್ದಾರೆ.
ಸಿದ್ದರಾಮಯ್ಯ ಬಾದಾಮಿ ಮತ್ತು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು, ತನ್ನದೇ ಗುಪ್ತಚರ ಇಲಾಖೆ ವರದಿಯಂತೆ ಜನ ಕೈ ಎತ್ತಿದ್ದಾರೆ. ಚಾಮುಂಡೇಶ್ವರಿಯಲ್ಲಿ ಒಕ್ಕಲಿಗ ಸಮುದಾಯದವರೂ ಬಲಿಷ್ಠರಾಗಿದ್ದರೇ, ಇತ್ತ ಬಾದಾಮಿ ವೀರಶೈವ ಲಿಂಗಾಯತರ ಪ್ರಮುಖ ನೆಲೆಯಾಗಿದೆ. ಎರಡು ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಮತಗಳು ತಕ್ಕಮಟ್ಟಿಗೆ ಇವೆ. ಆದರೆ ಚಾಮುಂಡೇಶ್ವರಿಯಲ್ಲಿ ಒಕ್ಕಲಿಗ ಮತ್ತು ಬಾದಾಮಿಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಅತಿ ಹೆಚ್ಚು ಇದೆ. ಈ ಎರಡು ಅಂಶಗಳು ಸಿದ್ದರಾಮಯ್ಯಗೆ ಮಾರಕವಾಗಲಿದ್ದು, ಸಿದ್ದರಾಮಯ್ಯಗೆ ಕಾರ್ಯವೈಖರಿಗೆ ಜನ ಬೇಸತ್ತಿದ್ದಾರೆ. ಆದ್ದರಿಂದ ಎರಡು ಕ್ಷೇತ್ರದಲ್ಲಿ ಸಿಎಂ ಸೋಲು ಭಾಗಶಃ ಖಚಿವಾಗುತ್ತಿದೆ.
Leave A Reply