ಅಮೇಥಿಯನ್ನು ಪ್ಯಾರಿಸ್ ಮಾಡುವ ರಾಹುಲ್ ಗಾಂಧಿ ಹಾಗೂ ಆತನ ಪಕ್ಷಕ್ಕೊಂದಿಷ್ಟು ಪ್ರಶ್ನೆಗಳು!
ಈ ರಾಹುಲ್ ಗಾಂಧಿಯವರು ವಾಸ್ತವವನ್ನು ಅರಿಯದೇಯೇ ಮಾತನಾಡುವುದು, ಚುನಾವಣೆ ಬಂದಾಗ ಮಾತ್ರ ಅಭಿವೃದ್ಧಿ ಕುರಿತು ಪ್ರಸ್ತಾಪಿಸುವುದು, ಇಲ್ಲದಿದ್ದರೆ ಬರೀ ಉಪದ್ವ್ಯಾಪದಲ್ಲೇ ಕಾಲ ಕಳೆಯುವುದು, ಚುನಾವಣೆಯಲ್ಲಿ ಸೋತ ಬಳಿಕ ವಿದೇಶಕ್ಕೆ ಹೋಗಿ ಮಜಾ ಮಾಡಿ ಬರುವುದು, ಅಸಂಬದ್ಧ ಹೇಳಿಕೆ ನೀಡುವುದು ಕರಗತವಾಗಿದೆಯೇ ಎಂಬ ಅನುಮಾನ ಕಾಡುವಷ್ಟರ ಮಟ್ಟಿಗೆ ಅವರು ಹೇಳಿಕೆ ನೀಡುತ್ತಾರೆ ಹಾಗೂ ಅದನ್ನು ಆಗಾಗ ಸಾಬೀತುಪಡಿಸುತ್ತಾರೆ.
ಇಂತಹ ಹಿನ್ನೆಲೆಯುಳ್ಳ ರಾಹುಲ್ ಗಾಂಧಿ ಈಗ ಹೊಸದೊಂದು ಹೇಳಿಕೆ ನೀಡಿದ್ದು, ಜನರಲ್ಲಿ ನಗಬೇಕೋ, ಅಳಬೇಕೋ ಎಂಬ ಜಿಗುಪ್ಸೆ ಮೂಡಿಸಿದ್ದಾರೆ. ಹೌದು, ಇತ್ತೀಚೆಗಷ್ಟೇ ತಮ್ಮ ಸಂಸತ್ ಕ್ಷೇತ್ರ ಅಮೇಥಿಗೆ ತೆರಳಿದ್ದ ರಾಹುಲ್ ಗಾಂಧಿ ಮುಂದಿನ 15 ವರ್ಷ ಅಮೇಥಿ ಕೊಡಿ, ಇದನ್ನು ಪ್ಯಾರಿಸ್ ಹಾಗೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಹಾಗಾದರೆ, ಮದುವೆಯಾಗಿ ನಾಲ್ಕಾರು ವರ್ಷಗಳ ಬಳಿಕ ತವರು ಮನೆಯ ಆಸೆ ಬಿಟ್ಟ ಮಹಿಳೆಯೊಬ್ಬಳು ಆಗಾಗ ತವರು ಮನೆಗೆ ಭೇಟಿ ನೀಡುವಂತೆ ಅಮೇಥಿಗೆ ಭೇಟಿ ನೀಡುವ ರಾಹುಲ್ ಗಾಂಧಿ ಹೇಳಿಕೆಯಲ್ಲಿ ಯಾವ ಉತ್ಪ್ರೇಕ್ಷೆಯಿದೆ? ಅವರು ನೀಡಿರುವ ಹೇಳಿಕೆ ಹೇಗೆ ತಪ್ಪಿನಿಂದ ಕೂಡಿದೆ? ಅಷ್ಟಕ್ಕೂ 15 ವರ್ಷ ಅಮೇಥಿಯನ್ನು ರಾಹುಲ್ ಗಾಂಧಿಗೆ ನೀಡಿದರೆ ಅದನ್ನು ಖಂಡಿತವಾಗಿಯೂ ಪ್ಯಾರಿಸ್ ಹಾಗೆ ಮಾಡುತ್ತಾರೆಯೇ?
ಈ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಎಂತಹ ಬಾಲಿಶತನದಿಂದ ಕೂಡಿದೆ ನೋಡಿ. ಕಳೆದ 14 ವರ್ಷದಿಂದ, ಅಂದರೆ 2004ರಿಂದಲೂ ರಾಹುಲ್ ಗಾಂಧಿ ಅಮೇಥಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿ ಬರುತ್ತಿದ್ದಾರೆ. ಅಂದರೆ ಅಮೇಥಿ ರಾಹುಲ್ ಸುಪರ್ದಿಗೆ ಬಂದು ಬರೋಬ್ಬರಿ 14 ವರ್ಷಗಳಾಗಿವೆ. ಹಾಗಾದರೆ 14 ವರ್ಷ ಅಮೇಥಿಯನ್ನು ರಾಹುಲ್ ಗಾಂಧಿ ಆಳಿದ್ದಾರೆ ಎಂದರೆ ಅಮೇಥಿ ಇಷ್ಟೊತ್ತಿಗಾಗಲೇ ಪ್ಯಾರಿಸ್ ಹಾಗೆ ಇರಬೇಕಿತ್ತಲ್ಲವೇ?
ಹೇಳಿ ರಾಹುಲ್ ಗಾಂಧಿಯವರೇ, 14 ವರ್ಷ ಅಮೇಥಿಯ ಸಂಸದರಾಗಿರುವ ನೀವು ಅಮೇಥಿಗೆ ನೀಡಿರುವ ಕೊಡುಗೆ ಏನು? ಇಷ್ಟು ವರ್ಷ ಅಮೇಥಿಯಲ್ಲಿ ಆಳ್ವಿಕೆ ನಡೆಸಿದರೂ ಅಮೇಥಿ ಏಕೆ ಪ್ಯಾರಿಸ್ ರೇಂಜಿಗೆ ಬೆಳೆದಿಲ್ಲ? ಪ್ಯಾರಿಸ್ ಬಿಡಿ, ಕನಿಷ್ಠ ಭಾರತದಲ್ಲೇ ಅಭಿವೃದ್ಧಿ ವಿಷಯವಾಗಿ ಅಮೇಥಿ ಏಕೆ ಚರ್ಚಿತವಾಗಿವಲ್ಲ? ಮುಂದಿನ ವರ್ಷ ಚುನಾವಣೆ ಇರುವುದರಿಂದ ಜನರಲ್ಲಿ ಇಂತಹ ಹುಸಿ ಕಲ್ಪನೆ ಬಿತ್ತುವ ಯಾವ ಹಕ್ಕು ನಿಮಗಿದೆ? 14 ವರ್ಷ ಕಡೆದು ಕಟ್ಟೆ ಹಾಕದ ನಿಮಗೆ ಮತ್ತೆ 15 ವರ್ಷ ಬೇಕೆ? ನಾಚಿಕೆಯಾಗುವುದಿಲ್ಲವೇ ನಿಮಗೆ?
ಇನ್ನು ಉತ್ತರ ಪ್ರದೇಶದ ರಾಯ್ ಬರೇಲಿ, ಅಮೇಥಿ ವಿಷಯಕ್ಕೆ ಬರುವುದಾದರೆ ಸ್ವಾತಂತ್ರ್ಯದ ನಂತರ ಈ ಕ್ಷೇತ್ರಗಳು ಕಾಂಗ್ರೆಸ್ ವಂಶಾಡಳಿತದ ಅಧಿಪತಿಗಳ ಸ್ವತ್ತೇ ಎಂಬಂತಾಗಿದೆ. ಅಂದರೆ ಕಾಂಗ್ರೆಸ್ ಸುಮಾರು 60 ವರ್ಷಗಳಿಂದ ಈ ಕ್ಷೇತ್ರಗಳನ್ನು ಆಳ್ವಿಕೆ ಮಾಡುತ್ತಿದೆ. ಆದರೂ ಈ ಕ್ಷೇತ್ರಗಳು ಪ್ಯಾರಿಸ್ ಬಿಡಿ, ಭಾರತದಲ್ಲೇ ಗುರುತಿಸುವ ಹಾಗೆ ಅಭಿವೃದ್ಧಿ ಹೊಂದಿಲ್ಲ ಅಂದರೆ, ಕಾಂಗ್ರೆಸ್ ಎಷ್ಟರಮಟ್ಟಿಗೆ ಈ ಕ್ಷೇತ್ರಗಳನ್ನು ದುರುಪಯೋಗಪಡಿಸಿಕೊಂಡಿರಬಹುದು ಯೋಚಿಸಿ. ರಾಹುಲ್ ಗಾಂಧಿಯ ಕುತಂತ್ರದ ಬಗ್ಗೆಯೂ ಜಾಗೃತರಾಗಿರಿ.
Leave A Reply