ಭಾರತೀಯ ಸಂಸ್ಕೃತಿ ಎತ್ತಿಹಿಡಿದ ಬಿಜೆಪಿ ಸರ್ಕಾರ, ಮಧ್ಯಪ್ರದೇಶದಲ್ಲಿ ಪ್ರೇಮಿಗಳ ದಿನ ಇನ್ನು ಮಾತೃ-ಪಿತೃ ದಿನವಾಗಿ ಆಚರಣೆ!
ಭೋಪಾಲ್: ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿ, ಸಂಪ್ರದಾಯ ಎಂದರೆ ಅಗಾಧವಾದ ಶ್ರೀಮಂತಿಕೆ ಇದೆ. ಇಡೀ ವಿಶ್ವವೇ ಭಾರತೀಯ ಸಂಸ್ಕೃತಿಯೆಂದರೆ ಹೆಮ್ಮೆಪಡುತ್ತದೆ. ಆದರೆ ಇತ್ತೀಚೆಗೆ ವಿದೇಶಿ ಸಂಸ್ಕೃತಿಗೆ ಮಾರುಹೋಗಿರುವ ನಮ್ಮ ಯುವಜನತೆ ಪ್ರೇಮಿಗಳ ದಿನದಂದು ಪಾರ್ಕ್, ಪಬ್ ಅಂತ ಹುಡುಗಿಯ ಜತೆ ಸುತ್ತಾಡುತ್ತಾರೆ ಹಾಗೂ ಹೀಗೆ ಮಾಡುವುದನ್ನೇ ನಿಜವಾದ ಪ್ರೇಮಿಯ ಲಕ್ಷಣ ಎಂದು ಭಾವಿಸಿದ್ದಾರೆ.
ಆದರೆ ಇದನ್ನು ತೊಲಗಿಸಲು ಮಧ್ಯಪ್ರದೇಶ ಬಿಜೆಪಿ ಸರ್ಕಾರ ನಿರ್ಧರಿಸಿದ್ದು, ಮುಂದಿನ ವರ್ಷದಿಂದ, ಅಂದರೆ 2019ರ ಫೆಬ್ರವರಿ 14ರಿಂದ ಪ್ರೇಮಿಗಳ ದಿನಾಚರಣೆಯನ್ನು ಮಾತೃ-ಪಿತೃಗಳ ಪೂಜಾ ದಿನವಾಗಿ ಆಚರಿಸಲು ನಿರ್ಧರಿಸಿದೆ.
ರಾಜ್ಯ ಶಿಕ್ಷಣ ಇಲಾಖೆ ಈ ಮಹತ್ತರ ನಿರ್ಣಯ ಕೈಗೊಂಡಿದ್ದು, ಏಪ್ರಿಲ್ 23ರಂದು ಸರ್ಕಾರ ಪ್ರಕಟಿಸಿರುವ ವಾರ್ಷಿಕ ಕ್ಯಾಲೆಂಡರ್ ಹಾಗೂ ಶಿರ್ವಿ ಪಂಜಾಂಗದಲ್ಲಿ ಫೆಬ್ರವರಿ 14ರಂದು ಮಾತೃ-ಪಿತೃಗಳ ಪೂಜಾ ದಿನ ಎಂದು ಸೇರಿಸುವ ಮೂಲಕ ಪ್ರೇಮಿಗಳ ದಿನಾಚರಣೆ ಹೆಸರಲ್ಲಿ ವಿದೇಶಿ ಸಂಸ್ಕೃತಿ ಅನಸರಿಸುತ್ತಿದ್ದ ಯುವಜನತೆಗೆ ಪಾಠ ಕಲಿಸಲು ಮುಂದಾಗಿದೆ.
ವಿದ್ಯಾರ್ಥಿಗಳು ಹರೆಯದ ಆಕರ್ಷಣೆ ಹಾಗೂ ವಿದೇಶಿ ಸಂಸ್ಕೃತಿಗೆ ಮಾರು ಹೋಗದೆ, ಹೆತ್ತ ತಂದೆ-ತಾಯಿ ಮೇಲೆ ಜಾಸ್ತಿ ಪ್ರೀತಿ ಹುಟ್ಟುಹಾಕಲು ಹಾಗೂ ಅವರ ಮಹತ್ವ ಅರಿಯುವ ದಿಸೆಯಲ್ಲಿ ಪ್ರೇಮಿಗಳ ದಿನವನ್ನು ಮಾತೃ-ಪಿತೃಗಳ ದಿನ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಧ್ಯಪ್ರದೇಶ್ ಶಿಕ್ಷಣ ಸಚಿವ ವಾಸುದೇವ್ ದೇವಾನಿ ತಿಳಿಸಿದ್ದಾರೆ.
ಆದಾಗ್ಯೂ ಬಿಜೆಪಿ ಸರ್ಕಾರ ಆಡಳಿತದಲ್ಲಿರುವ ಛತ್ತೀಸ್ ಗಡದಲ್ಲೂ ಸಹ ಫೆಬ್ರವರಿ 14ನ್ನು ಪ್ರೇಮಿಗಳ ದಿನದ ಬದಲಾಗಿ ಮಾತೃ-ಪಿತೃಗಳ ಜನ್ಮದಿನ ಎಂದು ಆಚರಿಸಲಾಗುತ್ತಿದೆ. ಒಟ್ಟಿನಲ್ಲಿ ಹರೆಯದ ಆಕರ್ಷಣೆಗೆ ವಿರಾಮ ನೀಡಿ, ವೃದ್ಧಾಶ್ರಮ ಹೆಚ್ಚಾಗುತ್ತಿರುವ ಇಂದಿನ ಕಾಲಮಾನದಲ್ಲಿ ಸರ್ಕಾರವೇ ಮಾತೃ-ಪಿತೃಗಳ ದಿನ ಆಚರಿಸಲು ಮುಂದಾಗಿರುವುದು ಸಂತಸದ ಸಂಗತಿಯಾಗಿದೆ.
Leave A Reply