ಎಂಥಾ ವ್ಯತ್ಯಾಸ: 25 ವರ್ಷದ ನಂತರ ತ್ರಿಪುರಾ ಸಿಎಂ ಕಚೇರಿಯಲ್ಲಿ ಹಾರಿತು ತ್ರಿವರ್ಣ ಧ್ವಜ

ಅಗರ್ತಲಾ: ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟ್ ಆಡಳಿತಕ್ಕೆ ಅಂತ್ಯ ಹಾಡಿದ ಬಿಜೆಪಿ ಕ್ರಾಂತಿಕ್ರಾರಿ ನಿರ್ಧಾರಗಳ ಮೂಲಕ ಗಮನ ಸೆಳೆಯುತ್ತಿದೆ. ರಾಜ್ಯದಲ್ಲಿ ಹೊಸ ಹೊಸ ಬದಲಾವಣೆಗಳನ್ನು ಜಾರಿಗೆ ತರುತ್ತದೆ. ಜೊತೆ ಜೊತೆ ದೇಶ ಭಕ್ತಿಯನ್ನು, ರಾಷ್ಟ್ರಪ್ರೇಮವನ್ನು ಬಿತ್ತುವಲ್ಲಿ ತ್ರಿಪುರಾ ಸಿಎಂ ಮೊದಲ ಸಾಲಿನಲ್ಲಿ ನಿಂತಿದ್ದು, ಅಭಿವೃದ್ಧಿಯ ಜೊತೆಗೆ ರಾಷ್ಟ್ರಪ್ರೇಮವನ್ನು ಬಿತ್ತುತ್ತಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ನಿಂತಿರುವುದು 25 ವರ್ಷದ ನಂತರ ತ್ರಿಪುರಾ ಸಿಎಂ ಕಚೇರಿಯಲ್ಲಿ ತ್ರಿವರ್ಣ ಧ್ವಜ ಅಳವಡಿಸಿರುವುದು.
ತ್ರಿಪುರಾದಲ್ಲಿ 25 ವರ್ಷ ಆಡಳಿತ ನಡೆಸಿದ ಕಮ್ಯುನಿಸ್ಟರು ರಾಷ್ಟ್ರಪ್ರೇಮಕ್ಕಿಂತ ತನ್ನ ಪಕ್ಷದ ಪ್ರೇಮವೇ ಹೆಚ್ಚು ಎಂಬಂತೆ ವರ್ತಿಸಿದ್ದರು. ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಕಮ್ಯುನಿಸ್ಟರು ಗೌರವ ನೀಡುವುದು, ಸೂಕ್ತ ಸ್ಥಾನ ಮಾನ ನೀಡಿದ್ದು ಕಡಿಮೆಯೇ. ಇದೀಗ ತ್ರಿಪುರಾದಲ್ಲಿ ರಾಷ್ಟ್ರಪ್ರೇಮಿ ಪಕ್ಷ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ತ್ರಿಪುರಾದ ಚಿತ್ರಣವೇ ಬದಲಾಯಿಸುವತ್ತ ಚಿತ್ತ ಇಟ್ಟಿರುವುದು ಗಮನಾರ್ಹ.
ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಸಿಎಂ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಅಳವಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೇ ಕಮ್ಯುನಿಸ್ಟರು 25 ವರ್ಷದಿಂದ ರಾಷ್ಟ್ರಧ್ವಜಕ್ಕೆ ನೀಡಿದ ಗೌರವ ಎಂಥಾದ್ದು ಎಂಬುದನ್ನು ಸೂಚ್ಯವಾಗಿ ಸಾರಿದ್ದಾರೆ.
ಕಮ್ಯುನಿಸ್ಟರಿಂದ ದೇಶದ್ರೋಹದ ಆರೋಪ
ಚೀನಾ ಪ್ರಭಾವಕ್ಕೆ ಒಳಗಾಗಿರುವ ಭಾರತದ ಕಮ್ಯುನಿಸ್ಟ್ ಪಕ್ಷ ಬಹುತೇಕ ಬಾರಿ ದೇಶವಿರೋಧಿ ನಿಲುವುಗಳಿಗೆ ಬೆಂಬಲ ನೀಡುತ್ತಲೇ ಬಂದಿದೆ. ಅಲ್ಲದೇ ಚೀನಾ ಜೊತೆಗೆ ಸಂಬಂಧವಿಟ್ಟುಕೊಂಡು, ದೇಶದ್ರೋಹಿ ಚಟುವಟಿಕೆಗೆ ಪರೋಕ್ಷ ಪ್ರೇರಣೆ ನೀಡುತ್ತಿದೆ. ಅಲ್ಲದೇ 1946ರಲ್ಲಿ ಭಾರತದ ಕಮ್ಯುನಿಸ್ಟ್ ಪಕ್ಷ ಪಾಕಿಸ್ತಾನ ವಿಭಜನೆಗೆ ಬೆಂಬಲ ನೀಡಿತ್ತು. ಇದು ಕಮ್ಯುನಿಸ್ಟರ್ ದೇಶ ವಿರೋಧಿ ನೀತಿಗೆ ಪ್ರಮುಖ ಸಾಕ್ಷಿಯಾಗಿ ನಿಲ್ಲುತ್ತದೆ.
Leave A Reply