ಅಸ್ಸಾಮಿನಲ್ಲಿ ಐಸಿಸ್ ಎಂತಹ ಭೀತಿ ತಂದೊಡ್ಡಿದೆ ಗೊತ್ತಾ?

ಡಿಸ್ಪುರ: ಈಗಾಗಲೇ ಜಮ್ಮು-ಕಾಶ್ಮೀರದಲ್ಲಿ ಐಸಿಸ್ ಉಗ್ರರ ಭೀತಿ ಎದುರಾಗಿದ್ದು, ಹಲವು ಉಗ್ರರ ದಾಳಿಗಳ ಹಿಂದೆ ಐಸಿಸ್ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗುತ್ತಿವೆ. ಆದರೆ ಇದರ ಬೆನ್ನಲ್ಲೇ ಅಸ್ಸಾಮಿನಲ್ಲೂ ಐಸಿಸ್ ತಳವೂರಿರುವ ಕುರಿತು ಹಲವು ಲಕ್ಷಣಗಳು ಗೋಚರಿಸಿದ್ದುಘ, ಜನರನ್ನು ದಿಗ್ಭ್ರಮೆಗೊಳಿಸಿದೆ.
ಅಸ್ಸಾಂ ರಾಜ್ಯದ ಗೋಲ್ಪಾರ ಜಿಲ್ಲೆಯಲ್ಲಿ ಮರವೊಂದಕ್ಕೆ ಐಸಿಸ್ ಧ್ವಜ ನೇತು ಹಾಕಿದ್ದುಘ, ಧ್ವಜದಲ್ಲಿ ಐಸಿಸ್ ಸೇರಿ ಎಂಬ ಒಕ್ಕಣೆ ಇರುವುದು ಜನರಲ್ಲಿ ಭೀತಿ ಹುಟ್ಟಿಸಿದೆ.
ಒಂದು ವಾರದ ಹಿಂದಷ್ಟೇ ಜಾಯ್ನ್ ಐಸಿಸ್ ಎಂಬ ಒಕ್ಕಣೆ ಇರುವ ಧ್ವಜವನ್ನು ಮರವೊಂದಕ್ಕೆ ಕಟ್ಟಿದ ಬೆನ್ನಲ್ಲೇ ಮತ್ತೊಂದು ಧ್ವಜ ಕಂಡಿದ್ದುಘ, ಇದರಿಂದ ಭಯಭೀತರಾದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಧ್ವಜ ತೆರವುಗೊಳಿಸಿದ್ದಾರೆ.
ಆದರೆ ಒಂದೇ ವಾರದಲ್ಲಿ ಎರಡು ಮರಕ್ಕೆ ಐಸಿಸ್ ಸೇರಿ ಎಂಬ ಧ್ವಜ ಕಂಡು ಬಂದಿರುವುದು ಹಲವು ಅನುಮಾನಗಳಿಗೆ ಈಡು ಮಾಡಿದೆ.
ಅಸ್ಸಾಮಿನಲ್ಲಿ ಐಸಿಸ್ ಎಷ್ಟರಮಟ್ಟಿಗೆ ತಳವೂರಿದೆ? ಇದಕ್ಕೆ ಸ್ಥಳೀಯವಾಗಿ ಬೆಂಬಲ ನೀಡುತ್ತಿಿರುವವರು ಯಾರು? ಎಷ್ಟು ಉಗ್ರರು ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ? ರಾಜ್ಯದ ಯುವಕರು ಐಸಿಸ್ ಸೇರಿದ್ದಾರಾ? ಎಂಬ ಕುರಿತು ಹಲವು ಅನುಮಾನ ಮೂಡಿವೆ. ಈ ಕುರಿತು ಕ್ಷಿಪ್ರಗತಿಯಲ್ಲಿ ತನಿಖೆಯಾಗಬೇಕು ಎಂಬುದು ಜನರ ಒತ್ತಾಸೆಯಾಗಿದೆ.
Leave A Reply