ಪಶ್ಚಿಮ ಬಂಗಾಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ 850 ಮುಸ್ಲಿಮರಿಗೆ ಟಿಕೆಟ್ ನೀಡಿದರೂ ಅಲ್ಪಸಂಖ್ಯಾತ ವಿರೋಧಿ ಎನ್ನುತ್ತೀರಾ?

ಕೋಲ್ಕತ್ತಾ: ಕೋಮುವಾದಿ, ಅಲ್ಪಸಂಖ್ಯಾತವಿರೋಧಿ, ಅನ್ಯ ಧರ್ಮದ ಸೈರಣೆ ಇಲ್ಲದಿರುವುದು, ಬ್ರಾಹ್ಮಣರ ಪಕ್ಷ. ಬಿಜೆಪಿ ಎಂದ ತಕ್ಷಣ ವಿರೋಧಿಗಳು ಹೀಗೆ ಆಳಿಗೊಂದು ಕಲ್ಲು ಎಸೆಯುತ್ತಾರೆ. ಆದರೂ ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಎಲ್ಲ ಧರ್ಮೀಯರ ಅಭಿವೃದ್ಧಿ ಮಾಡುವ ಮೂಲಕ ಮುಸ್ಲಿಮರು ಸೇರಿ ಎಲ್ಲರ ವಿಶ್ವಾಸ ಗಳಿಸಿದೆ.
ಇದರ ಮುಂದುವರೆದ ಭಾಗವಾಗಿ ಪಶ್ಚಿಮ ಬಂಗಾಳದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಸುಮಾರು 850ಕ್ಕೂ ಮುಸ್ಲಿಮರಿಗೆ ಸ್ಪರ್ಧೆಗೆ ಅವಕಾಶ ನೀಡುವ ಮೂಲಕ ತಾನು ಒಂದೇ ಸಮುದಾಯಕ್ಕೆ ಸೇರಿದ ಹಾಗೂ ಒಂದೇ ಸಮುದಾಯವನ್ನು ಬೆಂಬಲಿಸುವ ಪಕ್ಷವಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಈ ಕುರಿತು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಮಾಹಿತಿ ನೀಡಿದ್ದು, ಸುಮಾರು 2000 ಸಾವಿರ ಮುಸ್ಲಿಮರಿಗೆ ಸ್ಪರ್ಧಿಸುವ ಅವಕಾಶ ನೀಡುವ ಚಿಂತನೆ ಇತ್ತು. ಆದರೂ ಈ ಬಾರಿ 850 ಮುಸ್ಲಿಮರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬಿಜೆಪಿ ದೇಶದ 20ಕ್ಕೂ ಅಧಿಕ ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಏರಿದೆ. ಎಲ್ಲ ವರ್ಗಗಳ ಏಳಿಗೆಗೆ ಶ್ರಮಿಸುವ ಮೂಲಕ ಎಲ್ಲ ವರ್ಗದವರ ಬೆಂಬಲ ಸಹ ಪಡೆದಿದೆ. ಹಾಗಾಗಿಯೇ ದೇಶದಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಶಾಂತಿಯುತವಾಗಿ ಜೀವನ ನಡೆಸುತ್ತಿದ್ದಾರೆ. ಇದೇ ದಿಸೆಯಲ್ಲಿ ಬಿಜೆಪಿ 850ಕ್ಕೂ ಅಧಿಕ ಮುಸ್ಲಿಮರಿಗೆ ಸ್ಪರ್ಧಿಸುವ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮೇ 14ರಂದು ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ.
Leave A Reply