ಭಯೋತ್ಪಾದಕ ಬುರ್ಹಾನ ವಾನಿ ಬಂಟರೆಲ್ಲರೂ ಖಲ್ಲಾಸ್
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಯನ್ನು ಬಲಿಷ್ಠಗೊಳಿಸಿ, ತನ್ನದೇ ತಂಡವನ್ನು ಕಟ್ಟಿಕೊಂಡು ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಭಯೋತ್ಪಾದಕ ಬುರ್ಹಾನ ವಾನಿಯನ್ನು ನಮ್ಮ ಸೇನೆ ಹೊಡೆದುರುಳಿಸಿತು. ನಂತರ ವಾನಿ ಬಂಟರೆಲ್ಲ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದರು. ವಾನಿ ಮೃತನಾದ ನಂತರ ಕೆರಳಿದ ಇವರನ್ನು ಸದೆಬಡೆಯುವ ಕೆಲಸವನ್ನು ನಮ್ಮ ಸೈನ್ಯ ನಿರಂತರವಾಗಿ ಮಾಡುತ್ತಿದೆ. ಅದಕ್ಕೆ ಸಾಕ್ಷಿ ಭಾನುವಾರ ನಡೆದ ಭಯೋತ್ಪಾದಕ ಮೇಲಿನ ಯಶಸ್ವಿ ದಾಳಿ ಮತ್ತು ದಾಳಿಯಲ್ಲಿ ವಾನಿ ಬಂಟ ಪದ್ದರ ಹತ್ಯೆ ನಂತರ ವಾನಿಯ ಎಲ್ಲ ಸಂಘಡಿಗರ ಅಂತ್ಯವಾದಂತಾಗಿದೆ.
ಯಶಸ್ವಿ ಕಾರ್ಯಾಚರಣೆ ನಡೆಸಿರುವ ಸೈನಿಕರು ಮತ್ತು ಜಮ್ಮು ಕಾಶ್ಮೀರ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಾನಿ ಮತ್ತು ಆತನ ಸಂಗಡಿಗರ ಗುಂಪುಳ್ಳ ಭಾವಚಿತ್ರದಲ್ಲಿರುವ ಎಲ್ಲ ಭಯೋತ್ಪಾದಕರನ್ನು ಭಾರತೀಯ ಸೈನ್ಯ ಯಶಸ್ವಿಯಾಗಿ ಮುಗಿಸುತ್ತಾ ಬಂದಿದ್ದು, ಇದೀಗ ಶನಿವಾರ, ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಬುರ್ಹಾನ ವಾನಿಯ ಇಡೀ ತಂಡ ಸರ್ವನಾಶ ವಾಗಿರುವ ಶುಭ ಸುದ್ಧಿ ಬೆಳಕಿಗೆ ಬಂದಿದೆ.
ಭಾನುವಾರ ಅಂತ್ಯವಾದ ಕಾರ್ಯಾಚರಣೆಯಲ್ಲಿ ಹೊರ ಬಿದ್ದ ಮಾಹಿತಿ ಪ್ರಕಾರ ಬುರ್ಹಾನ ವಾನಿಯ 11 ಜನರ ತಂಡದ ಎಲ್ಲ ಸದಸ್ಯರ ಅಂತ್ಯವಾಗಿರುವ ಮಾಹಿತಿ ಹೊರ ಬಿದ್ದಿದೆ. ವಾನಿ ಜೊತೆ ಉತ್ತಮ ಸಂಬಂಧ ಹೊಂದಿದ್ದ ಪದ್ದರ ಎಂಬಾತನೂ ಕೂಡ ಕಾರ್ಯಾಚರಣೆಯಲ್ಲಿ ಹತನಾಗಿದ್ದಾನೆ. ಭಾಗಶಃ ವಾನಿ ತಂಡ 11 ಜನರಲ್ಲಿ 10 ಜನರ ಅಂತ್ಯವಾಗಿದೆ. ಇನ್ನೊಬ್ಬ ಜೈಲಿನಲ್ಲಿದ್ದಾನೆ.
ಆದಿಲ್ ಖಂಡೆ, ನಿಸ್ಸಾರ್ ಪಂಡಿತ್, ಅಫಾಕ್ ಭಟ್, ಸಬ್ಜಾರ್ ಭಟ್, ಅನೀಸ್, ಇಷ್ಫಾಕ್ ಧರ್, ವಾಸೀಮ್ ಮಲ್ಹಾ ಮತ್ತು ವಾಸೀಮ್ ಶಾ ಅಂತ್ಯವಾಗಿದ್ದು, ತಾರೀಖ್ ಪಂಡಿತ್ ಜೈಲಿನಲ್ಲಿದ್ದಾನೆ. ಭಾನುವಾರ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಐದು ಉಗ್ರರು ಹತರಾಗಿದ್ದರು. ಅದರಲ್ಲಿ ವಾನಿ ಸಹಚರರು ಇದ್ದರು. ಇದೀಗ ವಾನಿಯ ಇಡೀ ತಂಡ ಸರ್ವನಾಶವಾಗಿದೆ.
Leave A Reply