ಬಯಲಾಯ್ತು ಕೆಂಪು ಉಗ್ರರ ಅಸಲಿ ಮುಖ: ಕೋಟ್ಯಧಿಪತಿ ನಕ್ಸಲ್ ಮುಖಂಡರು
ದೆಹಲಿ: ದೇಶದಲ್ಲಿ ಬಡವರ ಹೋರಾಡುತ್ತೇವೆ, ಸಂಕಷ್ಟದಲ್ಲಿರುವವರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಬೊಗಳೆ ಬಿಡುತ್ತಾ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ನಕ್ಸಲ್ ಮುಖಂಡರ ಅಸಲಿ ಮುಖ ಬಯಲಾಗಿದೆ. ಬಡವರ ಹೆಸರಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಹಾರ ಮತ್ತು ಜಾರ್ಖಂಡ್ ರಾಜ್ಯದ ನಕ್ಸಲ್ ಮುಖಂಡರು, ಮುಗ್ದರ ಮಕ್ಕಳನ್ನು ಹೋರಾಟಕ್ಕಿಳಿಸಿ, ಅವರ ಜೀವ ಪಣಕ್ಕಿಟ್ಟು ತಮ್ಮ ಮಕ್ಕಳನ್ನು ಮಾತ್ರ ಲಕ್ಷಾಂತರ ರೂಪಾಯಿ ನೀಡಿ ಶಾಲೆಗೆ ಕಳುಹಿಸುತ್ತಿರುವ ಅಚ್ಚರಿದಾಯಕ ವಿಷಯ ಹೊರ ಬಿದ್ದಿದೆ.
ಮುಗ್ದ ಜನರನ್ನು ಸರ್ಕಾರದ ವಿರುದ್ಧ ಎತ್ತಿ ಕಟ್ಟಿ, ರಣರಂಗಕ್ಕೆ ದೂಡುವ ನಕ್ಸಲ್ ಮುಖಂಡರು ತಮ್ಮ ಮಕ್ಕಳನ್ನು ನಗರ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ನೀಡಿ, ಶಾಲೆಗೆ ಕಳುಹಿಸುತ್ತಿರುವ ಜೊತೆಗೆ, ರಿಯಲ್ ಎಸ್ಟೇಟ್ ನಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ್ದಾರೆ ಎನ್ನುವ ಮಾಹಿತಿ ಕೇಂದ್ರ ಗೃಹ ಸಚಿವಾಲಯದ ತನಿಖೆಯಿಂದ ಬಹಿರಂಗವಾಗಿದೆ.
ಇನ್ನು ಈ ಕುರಿತು ಕೆಂಪು ಉಗ್ರ ಸಂದೀಪ್ ಯಾದವ್ ಎನ್ನುವವನ ಮನೆಯಿಂದ ಈಗಾಗಲೇ ಜಾರಿ ನಿರ್ದೇಶನಾಲಯ 1.45 ಕೋಟಿ ಹಣ, 32 ಎಕರೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿರುವ ದಾಖಲೆಯನ್ನು ವಶಕ್ಕೆ ಪಡೆದಿದೆ. ಅದೇ ರೀತಿ ಎರಡು ಬಸ್, 11 ಕಾರು ಹಾಗೂ 2 ಟ್ರ್ಯಾಕ್ಟರ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಕೇಂದ್ರದಿಂದ ಕೆಂಪು ಉಗ್ರರಿಗೆ ಭರ್ಜರಿ ಹೊಡೆತ: ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಕ್ಸಲರ ವಿರುದ್ಧ ನಿರಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದು, ಕೆಂಪು ಉಗ್ರರ ಉಪಟಳ ನಿಯಂತ್ರಣಕ್ಕೆ ಬಂದಿದೆ. ನಕ್ಸಲ್ ಪೀಡಿತ ರಾಜ್ಯಗಳಲ್ಲಿ ತನಿಖೆಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖಾ ಸಂಸ್ಥೆಗಳು, ಸೇನೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಹೊಂದಿರುವ ತಂಡ ರಚಿಸಿದ್ದು, ನಕ್ಸಲ್ ರಿಗೆ ನುಂಗಲಾರದ ತುತ್ತಾಗಿದೆ.
Leave A Reply