ಪಾಕಿಸ್ತಾನದ ಕರಾಳ ಮುಖ ಬಯಲು ಮಾಡಿದ ಮಾಜಿ ಪ್ರಧಾನಿ ನವಾಜ್ ಷರೀಪ್
ಇಸ್ಲಾಮಾಬಾದ್: ಭಾರತದ ಸಾಂಪ್ರದಾಯಿಕ ಎದುರಾಳಿ, ದೇಶಕ್ಕೆ ಮಗ್ಗುಲ ಮುಳ್ಳಾಗಿರುವ ನೆರೆಯ ವಿರೋಧಿ ದೇಶ ಪಾಕಿಸ್ತಾನದ ಭಾರತಕ್ಕೆ ಸದಾ ಕಿಟಲೆ ಕೊಡುತ್ತಲೇ ಬರುತ್ತಿದೆ. ಭಾರತದಲ್ಲಿ ನಡೆಯುವ ಅದೆಷ್ಟೋ ದಾಳಿಗಳಲ್ಲಿ ಪಾಕಿಸ್ತಾನದ ಕುಮ್ಮಕ್ಕು ಇರುವುದು ಸಾಬೀತಾಗಿದೆ. ಇದೀಗ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ 26/11 ರ ಮುಂಬೈ ದಾಳಿಗೆ ಪ್ರೋತ್ಸಾಹ ನೀಡಿರುವುದು ಪಾಕಿಸ್ತಾನ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಳ್ಳುವ ಮೂಲಕ ಪಾಕಿಸ್ತಾನದ ಕರಾಳ ಮುಖ ಬಯಲು ಮಾಡಿದ್ದಾರೆ.
ಪಾಕಿಸ್ತಾನದ ಪ್ರಮುಖ ಪತ್ರಿಕೆ ಡಾನ್ ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನ ಸರ್ಕಾರ, ಸೈನ್ಯದ ನೀತಿಗಳನ್ನು ಟೀಕಿಸುವ ಆವೇಗದಲ್ಲಿ ಮುಂಬೈ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇತ್ತು ಎಂಬುದನ್ನು ಒಪ್ಪಿಕೊಂಡಿದ್ದಾರೆ.
26/11ರ ದಾಳಿ ಪ್ರಕರಣವನ್ನು ಪಾಕಿಸ್ತಾನ ಏಕೆ ಪೂರ್ಣಗೊಳಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಷರೀಫ್ ‘ಪಾಕಿಸ್ತಾನದಲ್ಲಿ ಎರಡು ಮೂರು ಪರ್ಯಾಯ ಸರ್ಕಾರಗಳು ಆಡಳಿತ ನಡೆಸುವ ವ್ಯವಸ್ಥೆ ಸ್ಥಗಿತವಾಗಬೇಕು. ಇನ್ನು ಸರ್ಕಾರದಲ್ಲಿ ಉಗ್ರ ಸಂಘಟನೆಗಳು ಸಕ್ರೀಯವಾಗಿವೆ. ಆದರೂ ಉಗ್ರ ಸಂಘಟನೆಗಳನ್ನು ಭಾರತದ ಗಡಿ ದಾಟಿಸಿ ಮುಂಬೈನಲ್ಲಿ ದಾಳಿ ನಡೆಸಲು ಬಿಡಬೇಕಾಗಿತ್ತೇ ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿಯೇ ಈ ರೀತಿಯ ಹೇಳಿಕೆ ನೀಡಿರುವುದು ಪಾಕಿಸ್ತಾನ ಮತ್ತು ಸೈನ್ಯಕ್ಕೆ ಭಾರಿ ಮುಜುಗರ ಉಂಟು ಮಾಡಿದ್ದು, ವಿಶ್ವದ ಎದುರು ಪಾಕಿಸ್ತಾನ ಮತ್ತೊಮ್ಮೆ ತಲೆತಗ್ಗಿಸುವಂತೆ ಮಾಡಿದೆ.
Leave A Reply