ಹಿಂದೂ ಧರ್ಮದ ಬಗ್ಗೆ ಅವನಹೇಳನಕಾರಿಯಾಗಿ ಮಾತನಾಡಿದ ಮುಸ್ಲಿಂ ಯುವಕ ಈಗ ಜೈಲು ಪಾಲು!
ಡಿಸ್ಪುರ: ಮೊದಲಿನಿಂದಲೂ ಹಾಗೆಯೇ. ಹಿಂದೂ ಧರ್ಮ ಹಲವರ ದಾಳಿಗೆ, ಅವಹೇಳನಕಾರಿ ಹೇಳಿಕೆಗೆ ಒಳಗಾಗಿದೆ, ಈಗಲೂ ಒಳಗಾಗುತ್ತಿದೆ. ಅದಕ್ಕಾಗಿಯೇ ಕೆಲವರು ಭಗವದ್ಗೀತೆಯನ್ನು ಸುಟ್ಟು ಹಾಕುತ್ತೇವೆ ಎನ್ನುತ್ತಾರೆ, ರಾಮನೇ ಇಲ್ಲ ಎಂದು ಬೊಬ್ಬೆ ಹಾಕುತ್ತಾರೆ. ನಾವು ಹಿಂದೂಗಳೂ ಇಂತಹ ಕುತ್ಸಿತ ಮನಸ್ಸಿನವರನ್ನು ತಿರಸ್ಕರಿಸಿ ಸುಮ್ಮನಾಗುತ್ತೇವೆ. ಇದಕ್ಕೆ ಯಾರು ಏನೇ ಅಂದರೂ ಹಿಂದೂ ಧರ್ಮಕ್ಕೆ ಏನೂ ಮಾಡಲಾಗುವುದಿಲ್ಲ ಎಂಬ ಆತ್ಮವಿಶ್ವಾಸವೂ ಇದ್ದರೂ ಇರಬಹುದು.
ಆದರೆ ಈ ಬಾರಿ ಹಾಗೆ ಆಗಿಲ್ಲ. ಹಿಂದೂ ಧರ್ಮದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದವನಿಗೆ, ಹಿಂದೂ ಧರ್ಮೀಯರನ್ನು ಕೀಳಾಗಿ ಕಂಡ ಮುಸ್ಲಿಂ ಯುವಕನಿಗೆ ತಕ್ಕ ಶಾಸ್ತಿಯಾಗಿದ್ದು, ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಹೌದು, ಎರಡು ವಾರಗಳ ಹಿಂದೆ ಅಸ್ಸಾಂನ ಕರೀಂ ಗಂಜ್ ಜಿಲ್ಲೆಯ ಕಲಿಗಂಜ್ ಪ್ರದೇಶದಲ್ಲಿ ಶಾಹಿನ್ ಅಹ್ಮದ್ ಎಂಬ ಮುಸ್ಲಿಂ ಯುವಕ ಫೇಸ್ ಬುಕ್ಕಿನಲ್ಲಿ ಲೈವ್ ಬಂದು ಹಿಂದೂ ಧರ್ಮ ಹಾಗೂ ಹಿಂದೂಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಎಂದು ತಿಳಿದುಬಂದಿದೆ.
ಇದರಿಂದ ಕುಪಿತರಾಗಿದ್ದ ಯುವ ಸಂಘಟನೆಯೊಂದರ ಮುಖಂಡ ದೇವ್ ದುಲಾಲ್ ದಾಸ್ ಎಂಬುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಜರಂಗದಳ ಹಿಂದೂ ಸಂಘಟನೆಯ ಮುಖಂಡರು ಸಹ ಹಲವೆಡೆ ಪ್ರತಿಭಟನೆ ಮಾಡಿದ್ದರು. ಕೊನೆಗೆ ಒತ್ತಡ ಜಾಸ್ತಿಯಾದ ಬಳಿಕ ಪ್ರಕರಣ ದಾಖಲಾಗಿ 15 ದಿನಗಳ ನಂತರ ಆರೋಪಿಯನ್ನು ಬಂಧಿಸಿದ್ದಾರೆ.
ಯಾವುದೇ ಧರ್ಮವಾಗಲಿ ಬೇರೊಂದು ಧರ್ಮ, ಸಮುದಾಯ ಹಾಗೂ ವ್ಯಕ್ತಿಗಳನ್ನು ಕೀಳಾಗಿ ಕಾಣಿ, ಅವರನ್ನು ಹೀಯಾಳಿಸಿ, ಮನನೋಯಿಸಿ ಎಂದು ಹೇಳುವುದಿಲ್ಲ. ಆದರೆ ಇಸ್ಲಾಮಿನ ಕೆಲವು ಮೂಲಭೂತವಾದಿಗಳು ಹಿಂದೂ ಧರ್ಮೀಯರನ್ನು ಮತಾಂತರಗೊಳಿಸುವುದು, ಹೀಯಾಳಿಸುವುದು ಮಾಡುತ್ತಾರೆ. ಅಂತಹವರಿಗೆ ಈ ಮುಸ್ಲಿಂ ಯುವಕನಿಗೆ ಆದ ಗತಿಯೇ ಆದಾಗ ಮಾತ್ರ ಹಿಂದೂ ಧರ್ಮವನ್ನು ಕೆಣಕುವುದು ನಿಲ್ಲುತ್ತದೆ. ಹಾಗೆನಿಸುವುದಿಲ್ಲವೇ?
Leave A Reply