ಯೋಗಿ ಆದಿತ್ಯನಾಥರಿಂದ ಮತ್ತೊಂದು ದಿಟ್ಟ ನಿರ್ಧಾರ, ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಮಾಜಿ ಸಿಎಂಗಳಿಗೆ ನೋಟಿಸ್!

ಲಖನೌ: ಯೋಗಿ ಆದಿತ್ಯನಾಥರೆಂದರೇನೆ ಹಾಗೆ. ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಹಲವು ದಿಟ್ಟ ನಿರ್ಧಾರ, ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಗಮನವನ್ನು ಸೆಳೆದವರು. ಆಡಳಿತಕ್ಕೆ ಬರುತ್ತಲೇ ರೋಡ್ ರೋಮಿಯೋಗಳ ನಿಗ್ರಹಕ್ಕಾಗಿ ಆ್ಯಂಟಿ ರೋಮಿಯೋ ಸ್ಕ್ವಾಡ್ ರಚಿಸಿದರು, ರೈತರ ಸಾಲ ಮನ್ನಾ ಮಾಡಿದರು, ಅಕ್ರಮ ಕಸಾಯಿಖಾನೆಗಳ ನಿರ್ನಾಮ ಮಾಡಿದರು, ರೌಡಿಗಳನ್ನು ಮಟ್ಟಹಾಕುವ ಮೂಲಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದರು.
ಇಂತಹ ಯೋಗಿ ಆದಿತ್ಯನಾಥರು ಈಗ ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಅಧಿಕಾರಾವಧಿ ಮುಗಿದರೂ ಸರ್ಕಾರಿ ಬಂಗಲೆಯಲ್ಲಿ ತಿಂದುಂಡು ತಿರುಗಾಡುತ್ತಿದ್ದ ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮ ಕಚೇರಿ ಖಾಲಿ ಮಾಡುವಂತೆ ಆದೇಶಿಸಿ ಹೊರಡಿಸಿ ನೋಟಿಸ್ ಕಳುಹಿಸಿದ್ದಾರೆ.
ಆರು ಮುಖ್ಯಮಂತ್ರಿಗಳಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್, ಬಹುಜನ ಸಮಾಜವಾದ ಪಕ್ಷದ ಮುಖ್ಯಸ್ಥೆ ಮಾಯಾವತಿ, ರಾಜನಾಥ ಸಿಂಗ್, ನಾರಾಯಣ ದತ್ ತಿವಾರಿ, ಅಖಿಲೇಶ್ ಯಾದವ್ ಅವರಂತ ಘಟಾನುಘಟಿಗಳಿದ್ದು, ಇವರೆಲ್ಲರಿಗೂ ಹದಿನೈದು ದಿನದಲ್ಲಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ.
ಹಾಗಂತ ವೈಯಕ್ತಿಕ ದ್ವೇಷದಿಂದ ಯೋಗಿ ಆದಿತ್ಯನಾಥರು ಈ ಕ್ರಮ ಕೈಗೊಂಡಿಲ್ಲ. ಯಾವುದೇ ಮುಖ್ಯಮಂತ್ರಿಗಳು ತಮ್ಮ ಅವಧಿ ಮುಗಿದ ಬಳಿಕ ಯಾವುದೇ ಕಾರಣಕ್ಕೂ ಸರ್ಕಾರಿ ಬಂಗಲೆಯಲ್ಲಿ ವಾಸ ಮಾಡಬಾರದು ಎಂದು ಆದೇಶ ಹೊರಡಿಸಿತ್ತು. ಅದರಂತೆ ಯೋಗಿ ಆದಿತ್ಯನಾಥರು ನೋಟಿಸ್ ಜಾರಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಹರಿಯಾಣದ ಬಿಜೆಪಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಸರ್ಕಾರಿ ಜಾಗದಲ್ಲಿ ನಿರ್ಮಿಸಿದ್ದ ಪಕ್ಷದ ಕಚೇರಿ ತೆರವುಗೊಳಿಸಬೇಕು ಎಂದು ಆದೇಶ ಹೊರಡಿಸಿ ದೇಶಾದ್ಯಂತ ಸುದ್ದಿಯಾಗಿದ್ದರು.
Leave A Reply