ರೋಹಿಂಗ್ಯಾಗಳ ಹಿಂದೂ ವಿರೋಧಿತನಕ್ಕೆ ಮತ್ತೊಂದು ನಿದರ್ಶನ, ಮ್ಯಾನ್ಮಾರ್ ನಲ್ಲಿ ಹಿಂದೂಗಳ ಹತ್ಯೆ
ಯಾಂಗೂನ್: ಭಾರತದಲ್ಲಿ ಹಾಗೇನೆ. ಮುಸ್ಲಿಮರು ಎಂದ ಕೂಡಲೇ ಅವರು ಎಷ್ಟೇ ಅಪಾಯಕಾರಿಯಾದರೂ ನಮ್ಮವರು ಎಂಬ ಭಾವನೆ ಇಲ್ಲಿನ ಮುಸ್ಲಿಂ ಮುಖಂಡರಿಗೆ, ರಾಜಕಾರಣಿಗಳಿಗೆ, ಕಾಂಗ್ರೆಸ್ಸಿಗರಿಗೆ ಕರಳು ಚುರುಕ್ ಅನ್ನುತ್ತದೆ. ಈ ಮಾತಿಗೆ ನಿದರ್ಶನವಾಗಿ ವಿಶ್ವಕ್ಕೇ ತಲೆನೋವಾಗುವ ಲಕ್ಷಣ ಇರುವ, ಭಾರತದಲ್ಲಿ ಬಂದು ನೆಲೆಸಿರುವ ರೋಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂಬ ವಾದವೇ ಇವರ ಆಂತರ್ಯಕ್ಕೆ ಕನ್ನಡಿ ಹಿಡಿಯುತ್ತದೆ.
ಆದರೆ ಈ ರೋಹಿಂಗ್ಯಾ ಮುಸ್ಲಿಮರು ಮಾತ್ರ ತಾವು ಮಾನವ ವಿರೋಧಿಗಳು, ಅದರಲ್ಲೂ ಹಿಂದೂಗಳನ್ನು ಕಂಡರೆ ಆಗದು ಎಂಬ ಉದ್ದೇಶಕ್ಕೆ ಮ್ಯಾನ್ಮಾರ್ ನಲ್ಲೇ ಉತ್ತಮ ನಿದರ್ಶನ ಸಿಕ್ಕಿದ್ದು, ಕಳೆದ ವರ್ಷದ ಆಗಸ್ಟ್ ನಲ್ಲಿ ರೋಹಿಂಗ್ಯಾ ಮುಸ್ಲಿಮರ ತಂಡವೊಂದು ಸುಮಾರು 99ಕ್ಕೂ ಹೆಚ್ಚು ಹಿಂದೂಗಳನ್ನು ಕೊಂದಿದೆ ಎಂದು ತಿಳಿದುಬಂದಿರುವುದು ಆತಂಕ ಮೂಡಿಸಿದೆ.
ಹೌದು, ಈ ಕುರಿತು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಎಂಬ ಸಂಸ್ಥೆ ವರದಿ ಬಿಡುಗಡೆ ಮಾಡಿದ್ದು, ಪೂರ್ವ ಮ್ಯಾನ್ಮಾರ್ ನಲ್ಲಿ ಕಳೆದ ವರ್ಷ 99ಕ್ಕೂ ಹಿಂದೂಗಳನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಹಿಂದೂಗಳನ್ನು ಭಯಭೀತಗೊಳಿಸಿದೆ.
ಆಸ್ರಾ ಎಂಬ ರೋಹಿಂಗ್ಯಾಗಳ ತಂಡವೊಂದು ಈ ಕೃತ್ಯ ಎಸಗಿದ್ದು, ಹಿಂದೂಗಳ ಮಹಿಳೆಯರು, ಮಕ್ಕಳು ಹಾಗೂ ಪುರುಷರು ಸೇರಿ 99ಕ್ಕೂ ಅಧಿಕ ಜನರನ್ನು ಕೊಂದಿದೆ. ಇದರಲ್ಲಿ ಸುಮಾರು 53 ಜನರನ್ನು ಕೊಲೆ ಮಾಡುವ ಮುನ್ನ ಬಲವಂತವಾಗಿ ಇಸ್ಲಾಮಿಗೆ ಮತಾಂತರ ಸಹ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಮ್ಯಾನ್ಮಾರ್ ನಲ್ಲಿ ಬೌದ್ಧರ ವಿರುದ್ಧ ಸಮರ ಸಾರಿರುವ ರೋಹಿಂಗ್ಯಾ ಮುಸ್ಲಿಮರು ಈಗ ಹಿಂದೂಗಳ ವಿರುದ್ಧವೂ ಕಿಡಿಕಾರುತ್ತಿದ್ದಾರೆ. ಗ್ರಾಮದಲ್ಲಿರುವ ಹಿಂದೂಗಳು ಏಕಾಏಕಿ ಕಾಣೆಯಾಗುತ್ತಿದ್ದಾರೆ. ಸುಮಾರು 70 ಸಾವಿರಕ್ಕೂ ಅಧಿಕ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ವಲಸೆ ಹೋಗಿ ಅಲ್ಲೂ ತಲೆನೋವಾಗುತ್ತಿದ್ದಾರೆ. ಆದರೆ ಭಾರತದಲ್ಲಿ ಮಾತ್ರ ಇಂತಹವರಿಗೆ ಪೋಷಣೆ ಮಾಡಬೇಕು ಎನ್ನುತ್ತಾರೆ. ಬುದ್ಧಿ ಬೇಡವೇ ಇವರಿಗೆ!
Leave A Reply