ಬರೀ ಮತದಾರರು ಮಾತ್ರವಲ್ಲ, ಹಣವಂತರೂ ಕಾಂಗ್ರೆಸ್ಸನ್ನು ತರಿಸ್ಕರಿಸುತ್ತಿದ್ದಾರೆ, ಹೇಗೆ ಗೊತ್ತಾ?
ಇತ್ತೀಚೆಗೆ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ, ದಿನೇದಿನೆ ತನ್ನ ಪ್ರಭಾವವನ್ನು ಕ್ಷೀಣಿಸಿಕೊಳ್ಳುತ್ತಿದೆ, ಜನರ ನಂಬಿಕೆ ಕಳೆದುಕೊಳ್ಳುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಕಳೆದ ನಾಲ್ಕಾರು ವರ್ಷಗಳಲ್ಲಿ ದೇಶಾದ್ಯಂತ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಸಾಲು ಸಾಲು ಸೋಲುಂಡಿದ್ದು, 22 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ನಿದರ್ಶನ. ಅಷ್ಟೇ ಏಕೆ, ಮೇ 10ರಂದು ನಡೆದ ಚುನಾವಣೆಯಲ್ಲಿ 120ರಿಂದ 78 ಸೀಟುಗಳಿಗೆ ಇಳಿದಿದ್ದು ಕಾಂಗ್ರೆಸ್ಸಿನ ಇಳಿಮುಖವಾಗುತ್ತಿರುವುದೇ ಸಾಕ್ಷಿಯಾಗಿದೆ.
ಹಾಗಂತ ಕಾಂಗ್ರೆಸ್ ಎಂಬ ರಾಷ್ಟ್ರೀಯ ಪಕ್ಷ ಬರೀ ಮತದಾರರ ವಿಶ್ವಾಸವನ್ನಷ್ಟೇ ಕಳೆದುಕೊಳ್ಳುತ್ತಿದೆ ಎಂದು ಭಾವಿಸಬೇಡಿ. ಉದ್ಯಮಿಗಳ, ದಾನಿಗಳ, ಹಣವಂತರ ವಿಶ್ವಾಸವನ್ನೂ ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಸಾಕ್ಷ್ಯ ಸಿಕ್ಕಿದೆ.
ಹೌದು, ಯಾವುದೇ ಒಂದು ಪಕ್ಷ ದಾನಿಗಳ, ಉದ್ಯಮಿಗಳ, ಹಣವಂತರ, ಕೊಡುಗೈ ವೀರರ ಕೃಪಾಕಟಾಕ್ಷದಿಂದ ನಡೆಯುತ್ತದೆ. ಅದೇ ಹಣದಿಂದ ಚುನಾವಣೆ, ರ್ಯಾಲಿ, ಸಮಾವೇಶಗಳನ್ನು ಆಯಾ ಪಕ್ಷಗಳು ಏರ್ಪಡಿಸುತ್ತವೆ. ದೇಣಿಗೆ ಮೂಲಕ ಹಣ ಪಡೆದು ಪಕ್ಷವನ್ನು ನಡೆಸುತ್ತವೆ.
ಆದರೆ, ಅದಕ್ಕೆ ನಂಬಿಕೆ. ಆ ಪಕ್ಷದ ವಿಶ್ವಾಸಾರ್ಹತೆ ಬೇಕು. ಕಾಂಗ್ರೆಸ್ ಇದನ್ನೇ ಕಳೆದುಕೊಂಡಿದ್ದು, ಇತ್ತೀಚೆಗೆ ಕಾಂಗ್ರೆಸ್ಸಿಗೆ ದೇಣಿಗೆ ನೀಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ತಿಳಿದುಬಂದಿದ್ದು, ಕಾಂಗ್ರೆಸ್ 2019ರ ಲೋಕಸಭೆ ಚುನಾವಣೆ ಎದುರಿಸಲು ಸಹ ದುಡ್ಡಿಲ್ಲ ಎನ್ನಲಾಗುತ್ತಿದೆ.
2017ರಲ್ಲಿ ಪಕ್ಷಗಳು ಇತ್ತೀಚೆಗೆ ತಮಗೆ ಬರುವ ಆದಾಯ ಘೋಷಿಸಿದ್ದು, ಬಿಜೆಪಿಗೆ 10 ಶತಕೋಟಿ ಅಮೆರಿಕನ್ ಡಾಲರ್ ದೇಣಿಗೆ ಬಂದರೆ. ಕಾಂಗ್ರೆಸ್ಸಿಗೆ ಕೇವಲ 2.25 ಶತಕೋಟಿ ಹಣ ದೇಣಿಗೆ ರೂಪದಲ್ಲಿ ಲಭಿಸಿದೆ. ಇದು ಬಿಜೆಪಿಗೆ ಶೇ.81ರಷ್ಟು ಹಣದ ಪ್ರಮಾಣದಲ್ಲಿ ಏರಿಕೆಯಾದರೆ, 2016ಕ್ಕೆ ಹೋಲಿಸಿದರೆ ಕಾಂಗ್ರೆಸ್ಸಿನ ಆದಾಯದಲ್ಲಿ ಶೇ.14ರಷ್ಟು ಕುಸಿತ ಕಂಡಿದೆ ಎಂದು ತಿಳಿದುಬಂದಿದೆ.
ಇದೇ ಕಾರಣಕ್ಕಾಗಿ ಕಾಂಗ್ರೆಸ್ 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು, ಪಕ್ಷದ ಪ್ರಚಾರಕ್ಕಾಗಿ ಹಣ ಬಳಸಲು, ಸಮಾವೇಶ, ರ್ಯಾಲಿ, ನಾಯಕರ ತಿರುಗಾಟದ ಖರ್ಚು ಭರಿಸಲು ಒದ್ದಾಡುವ ಪರಿಸ್ಥಿತಿ ಎದುರಾಗಿದೆ ಎಂದು ತಿಳಿದುಬಂದಿದೆ. ಜನರ ಜತೆಗೆ ಉದ್ಯಮಿಗಳೂ ಒಂದು ಪಕ್ಷದ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದರೆ ಆ ಪಕ್ಷ ಹೇಗೆ ವರ್ತಿಸುತ್ತಿದೆ ಎಂಬುದಕ್ಕೆ ಕನ್ನಡಿ ಹಿಡಿದ ಹಾಗೆ. ಹಾಗಾದರೆ ಕಾಂಗ್ರೆಸ್ ಎಚ್ಚೆತ್ತುಕೊಳ್ಳುತ್ತದಾ?
Leave A Reply