ಯೋಗಿ ಆದಿತ್ಯನಾಥರೆಂಬ ಮುಖ್ಯಮಂತ್ರಿ, ಪಿಎಂ ಅಭ್ಯರ್ಥಿ ರಾಹುಲ್ ಗಾಂಧಿಯನ್ನು ಸೋಲಿಸಿಬಿಟ್ಟರಲ್ಲ!
ಕರ್ನಾಟದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ನಾನಾ ಕಾರಣಗಳಿಗಾಗಿ ರಂಗೇರಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಆಡಳಿತದ ವಿರೋಧಿ ಅಲೆ, ನರೇಂದ್ರ ಮೋದಿ ಅವರ ವರ್ಚಸ್ಸು, ಯಡಿಯೂರಪ್ಪನವರ ನಾಯಕತ್ವ ಸೇರಿ ಹಲವು ವಿಷಯಗಳು ಗಮನ ಸೆಳೆದಿದ್ದವು.
ಇದರ ನಡುವೆಯೇ ರಾಹುಲ್ ಗಾಂಧಿಯವರು ರಾಜ್ಯಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿದರು. ಇವನರ್ವ ಇವನರ್ವ ಎಂದು ಬಸವಣ್ಣರ ವಚನವನ್ನೂ ವಿರೂಪಗೊಳಿಸಿದರು. ಅಂದಹಾಗೆ ರಾಹುಲ್ ಗಾಂಧಿಯವರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಾದ್ಯಂತ 32 ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಅತ್ತ ಬಿಜೆಪಿಯೇನೂ ಕಡಿಮೆ ಇರಲಿಲ್ಲ. ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿ ಎಂದೇ ಖ್ಯಾತಿಯಾದ ಯೋಗಿ ಆದಿತ್ಯನಾಥರು ಕರೆಸಿ ಸಮಾವೇಶ ಮಾಡಿಸಿದರು. ಯೋಗಿ ಆದಿತ್ಯನಾಥರೂ ಜಿದ್ದಿಗೆ ಬಿದ್ದಹಾಗೆ 35 ರ್ಯಾಲಿಗಳಲ್ಲಿ ಭಾಗವಹಿಸಿ ಕಾಂಗ್ರೆಸ್ಸಿನ ಮುಖವಾಡ ಬಯಲು ಮಾಡಿದರು.
ಹಾಗಾದರೆ ಈ ಇಬ್ಬರೂ ನಾಯಕರು ರ್ಯಾಲಿ ಮಾಡಿದ ಕ್ಷೇತ್ರಗಳಲ್ಲಿ ಇವರ ಪಕ್ಷದ ಅಭ್ಯರ್ಥಿಗಳೇ ಗೆದ್ದಿದ್ದಾರಾ? ಗೆದ್ದಿದ್ದಾರೆ ಎಂದರೆ ಎಷ್ಟು ಅಭ್ಯರ್ಥಿಗಳು ಗೆದ್ದಿದ್ದಾರೆ? ಯಾವ ನಾಯಕರು ಭಾಷಣ ಮಾಡಿದ ಕ್ಷೇತ್ರದಲ್ಲಿ ಯಾರು ಜಾಸ್ತಿ ಗೆದ್ದಿದ್ದಾರೆ? ಇಂಥಾದ್ದೊಂದು ಕುತೂಹಲ ಮೂಡಿದ್ದರೆ, ಅದಕ್ಕೆ ಆರ್ಗನೈಸರ್ ಸಂಸ್ಥೆ ಉತ್ತರ ನೀಡಿದೆ.
ಹೌದು, ಹೀಗೆ ಸಾಲು ಸಾಲು ಕ್ಷೇತ್ರಗಳಲ್ಲಿ ಸಮಾವೇಶ ಮಾಡಿದವರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೇ ಮುನ್ನಡೆ ಯಾಗಿದೆ. ರಾಹುಲ್ ಗಾಂದಿ ಮಾಡಿದ 32 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿನ 17 ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದ್ದಾರೆ. ಆದರೆ 32 ರ್ಯಾಲಿಗಳನ್ನು ಯೋಗಿ ಆದಿತ್ಯನಾಥರು ಮಾಡಿದ್ದು, ಅದರಲ್ಲಿ 23 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.
ಅಲ್ಲಿಗೆ ಅನುಪಾತದ ಪ್ರಕಾರ ಯೋಗಿ ಆದಿತ್ಯನಾಥರೇ ಮುನ್ನಡೆ ಸಾಧಿಸಿದ್ದಾರೆ. ಒಬ್ಬ ಮುಖ್ಯಮಂತ್ರಿಯಾದವರು ಪ್ರಧಾನಿ ಅಭ್ಯರ್ಥಿಯನ್ನೇ ಹಿಂದಿಕ್ಕಿದ್ದನ್ನು ನೋಡಿದರೆ, ರಾಹುಲ್ ಗಾಂಧಿಯವರ ನಾಯಕತ್ವವನ್ನೇ ಪ್ರಶ್ನಿಸುವಂತಿದೆ.
Leave A Reply