ಮೆಕ್ ಇನ್ ಇಂಡಿಯಾ ಎಫೆಕ್ಟ್: ಭಾರತವಾಗಲಿದೆ ಯುದ್ಧ ವಿಮಾನಗಳ ರಫ್ತು ಮಾಡುವ ಮಳಿಗೆ
ವಾಷಿಂಗಟನ್: ಒಂದು ಕಾಲದಲ್ಲಿ ಯುದ್ಧ ವಿಮಾನಗಳು, ಯುದ್ಧಾಸ್ತ್ರಗಳಿಗಾಗಿ ವಿದೇಶಗಳನ್ನು ಅವಲಂಭಿಸಿದ ಭಾರತ ಇದೀಗ ಯುದ್ಧಾಸ್ತ್ರಗಳಲ್ಲಿ ಸ್ವಾವಲಂಭಿಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ, ಸ್ವದೇಶಿ ಕಲ್ಪನೆ ದೇಶವನ್ನು ಸ್ವಾವಲಂಭಿಯಾಗುವತ್ತ ಕರೆದ್ಯೊಯುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಅಮೆರಿಕದ ಲೋಕ್ ಹಿಡ್ ಸಂಸ್ಥೆ ಭಾರತದ ಬಗ್ಗೆ ಹೊಗಳಿಕೆಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಎಫ್ -16 ಜೆಟ್ ಯುದ್ಧ ವಿಮಾನಗಳನ್ನು ಸ್ವದೇಶಿಯವಾಗಿ ಸಿದ್ಧಪಡಿಸುವ ಮೂಲಕ ಭಾರತದ ವಿಶ್ವದ ನಾನಾ ದೇಶಗಳಿಗೆ ಯುದ್ಧ ವಿಮಾನಗಳನ್ನು ರಫ್ತು ಮಾಡುವ ಮಳಿಗೆಯಾಗಿ ಪರಿವರ್ತನೆಯಾಗಲಿದೆ ಎಂದು ಜನಪ್ರಿಯ ಜಾಗತಿಕ ಎರೋಸ್ಪೇಸ್ ಸಂಸ್ಥೆ ಲೋಕ್ ಹೀಡ್ ಸಂಸ್ಥೆ ಶ್ಲಾಘನೆ ವ್ಯಕ್ತಪಡಿಸಿದೆ. ಭಾರತ ಈ ಮೂಲಕ ಲಾಭದಾಯಕ ಮಾರುಕಟ್ಟೆಯಾಗಿ ಪರಿವರ್ತನೆಯಾಗಲಿದ್ದು, ವಿಶ್ವಕ್ಕೆ ಜೆಟ್ ಏರ್ ವೇಸ್ ವಿಮಾನಗಳನ್ನು ಪೂರೈಸುವ ಕೇಂದ್ರ ಸ್ಥಾನವಾಗಲಿದೆ. ಇದಕ್ಕೆ ಮೆಕ್ ಇನ್ ಇಂಡಿಯಾ ಕಲ್ಪನೆ ಪೂರಕವಾಗಲಿದೆ ಎಂದು ಲೋಕ್ ಹೀಡ್ ಸಂಸ್ಥೆ ತಿಳಿಸಿದೆ.
ಭಾರತದ ನೂತನ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದುವ ಮೂಲಕ ವಿಶ್ವಾಸಾರ್ಹ ಸಾಧನೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಬೆಳೆಸಿಕೊಂಡಿದೆ. ಭಾರತಕ್ಕೆ ಎಫ್ -16 ಯುದ್ಧ ವಿಮಾನಗಳನ್ನು ಸಿದ್ಧಪಡಿಸುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಇತರ ರಾಷ್ಟ್ರಗಳು ಭಾರತದಿಂದ ಎಫ್ -16 ಯುದ್ಧ ವಿಮಾನ ಖರೀದಿಗೆ ಮುಂದಾಗುತ್ತಿವೆ ಎಂದು ಲೋಕ್ ಹೀಡ್ ಸಂಸ್ಥೆ ಉಪಾಧ್ಯಕ್ಷ ವಿವೇಕ್ ಲಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವಾದ್ಯಂತ ಎಫ್-16 ಯುದ್ಧ ವಿಮಾನಗಳಿಗೆ ಭಾರಿ ಬೇಡಿಕೆಯಿದ್ದು, ಭಾರತ ಎಲ್ಲ ರಾಷ್ಟ್ರಗಳ ಬೇಡಿಕೆಯನ್ನು ಪೂರೈಸುವ ತಾಕತ್ತು ಹೊಂದಿದೆ. ಅಲ್ಲದೇ ಅತ್ಯಾಧುನಿಕ ಫೈಟರ್ ರಾಡಾರ್ ತಂತ್ರಜ್ಞಾನ, ಎಫ್ -22, ಎಫ್ 35 ಎಇಎಸ್ ಎ ಸರಣಿಯ ಮಟ್ಟದ ಉನ್ನತ ತಂತ್ರಜ್ಞಾನವನ್ನು ಹೊಂದಿದೆ. ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ಯುದ್ಧ ವಿಮಾನಗಳು ವಿಶೇಷ ಸಾಮರ್ಥ್ಯವನ್ನು ಹೊಂದಿವೆ ಎಂದು ಲಾಲ್ ತಿಳಿಸಿದ್ದಾರೆ. ಇದು ಭವಿಷ್ಯದಲ್ಲಿ ಭಾರತಕ್ಕೆ ಭಾರಿ ಆದಾಯ ತಂದು ಕೊಡುವ ಉದ್ಯಮವಾಗಲಿದೆ.
Leave A Reply