ಜಮ್ಮು ಕಾಶ್ಮೀರದಲ್ಲಿ ಆನ್ ಲೈನ್ ಭಯೋತ್ಪಾದಕರ ಅಟ್ಟಹಾಸ ತೀವ್ರ
ಶ್ರೀನಗರ: ಕಾಶ್ಮೀರದ ಪ್ರತ್ಯೇಕತವಾದ ಹೆಸರಲ್ಲಿ ಮುಗ್ದ ಯುವಕರನ್ನು ಬಹಿರಂಗ ಸಭೆ, ಸಮಾರಂಭಗಳ ಮೂಲಕ ಭಯೋತ್ಪಾದನೆಯ ಕೂಪಕ್ಕೆ ತಳುತ್ತಿದ್ದ ಪ್ರತ್ಯೇಕವಾದಿಗಳ ಅಟ್ಟಹಾಸಕ್ಕೆ ಕೇಂದ್ರ ಸರ್ಕಾರ ಕೊನೆ ಹಾಡಿರುವ ಮಧ್ಯೆಯೇ ಆನ್ ಲೈನ್ ಭಯೋತ್ಪಾದನೆ ಕಾಶ್ಮೀರದಲ್ಲಿ ತೀವ್ರಗೊಂಡಿದೆ. ಮದ್ದು, ಗುಂಡುಗಳನಿಟ್ಟು ನೇರವಾಗಿ ಸೈನ್ಯವನ್ನು, ಜನರನ್ನು ಎದುರಿಸುವ ಬದಲು ಮುಗ್ದ ಯುವಕರನ್ನು ಧರ್ಮದ ಹೆಸರಲ್ಲಿ, ಜಿಹಾದ್ ನೆಪದಲ್ಲಿ ಭಯೋತ್ಪಾದನೆಗೆ ತಳ್ಳಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಟ್ವಿಟರ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ಸೇರಿ ನಾನಾ ರೀತಿಯ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಯುವಕರಲ್ಲಿ ಧರ್ಮದ ವಿಷ ಬೀಜ ಬಿತ್ತುವ, ಎಲ್ಲ ಕಾರ್ಯಕ್ರಮಗಳಿಗೆ ಧರ್ಮದ ಬಣ್ಣ ಬಳಿದು, ಹಿಂಸೆಗೆ ಪ್ರಚೋಧಿಸುವ ಕಾರ್ಯವನ್ನು ಕಿಪ್ಯಾಡ್ ಜಿಹಾದಿಗಳು ಗುಂಪು ಮಾಡುತ್ತಿದೆ. ಸರ್ಕಾರದ ವಿರುದ್ಧ ಮುಗ್ದ ಯುವಕರನ್ನು ಧರ್ಮದ ಹೆಸರಲ್ಲಿ ಪ್ರಚೋದಿಸುತ್ತಿರುವವರನ್ನು ಮಟ್ಟಹಾಕಲು ಪೊಲೀಸ್ ಇಲಾಖೆಯ ಸೈಬರ್ ಅಪರಾಧ ವಿಭಾಗ ಕಾರ್ಯಪವೃತವಾಗಿವೆ.
ಇತ್ತೀಚಿಗೆ ಕಾಶ್ಮೀರ ಮತ್ತು ಜಮ್ಮುವಿನಲ್ಲಿ ‘ಕೀಪ್ಯಾಡ್ ಜಿಹಾದಿ’ ಗುಂಪುಗಳು ಸಕ್ರಿಯವಾಗಿದ್ದು, ಕಾಶ್ಮೀರ ಪ್ರತ್ಯೇಕತಾವಾದಿಗಳು ಕೀಪ್ಯಾಡ್ ಜಿಹಾದಿಗಳನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅಡಗುತಾಣಗಳಲ್ಲಿ ಕುಳಿತು ಕಂಪ್ಯೂಟರ್, ಸ್ಮಾರ್ಟ್‌ಫೋನ್ ಮೂಲಕ ಕಣಿವೆ ಹಾಗೂ ಹೊರ ರಾಜ್ಯಗಳಲ್ಲೂ ಧರ್ಮಯುದ್ಧ ಸಾರುತ್ತಿದ್ದಾರೆ. ಇದು ಅಮರನಾಥ ಯಾತ್ರೆಯ ಮೇಲೂ ಆತಂಕದ ಛಾಯೇ ಮೂಡಿಸಿದೆ.
ವಿಷ ಬೀಜ ಬಿತ್ತಿ, ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದ ಐದು ನಕಲಿ ಟ್ವಿಟರ್ ಖಾತೆಗಳನ್ನು ಪತ್ತೆ ಹಚ್ಚಲಾಗಿದೆ. ಆನ್ ಲೈನ್ ಭಯೋತ್ಪಾದಕ ಗುಂಪುಗಳನ್ನು ಮಟ್ಟಹಾಕಲು ಪತ್ತೆ ಹಚ್ಚಿದ ನಕಲಿ ಟ್ವಿಟರ್, ಫೇಸ್‌ಬುಕ್ ಖಾತೆಗಳ ಮಾಹಿತಿ ಕಲೆಹಾಕಿ ಅದನ್ನು ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್-ಇಂಡಿಯಾ ತಂಡಕ್ಕೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Leave A Reply