• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಾಗಪುರದಲ್ಲಿ 600 ಸ್ವಯಂ ಸೇವಕರನ್ನುದ್ದೇಶಿಸಿ ಮಾತಾಡಲಿದ್ದಾರೆ ಪ್ರಣಬ್ ಮುಖರ್ಜಿ: ಆರ್ ಎಸ್ಎಸ್ ಅಧಿಕೃತ ಮಾಹಿತಿ

TNN Correspondent Posted On May 28, 2018
0


0
Shares
  • Share On Facebook
  • Tweet It

ದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವೆ, ಧ್ಯೇಯಕ್ಕೆ ಮೆಚ್ಚದವರೇ ಇಲ್ಲ. ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಹಿಡಿದು ಪ್ರಸ್ತುತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ವರೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯ ವೈಖರಿಗೆ ಮೆಚ್ಚುವವರೇ ಎಲ್ಲ. ಇದೀಗ ಆರ್ ಎಸ್ ಎಸ್ ವಿರುದ್ಧ ಸದಾ ಮಾತನಾಡುವ ಕಾಂಗ್ರೆಸ್ ನಿಂದಲೇ ರಾಜಕೀಯ ಜೀವನ ಪಡೆದು, ರಾಷ್ಟ್ರಪತಿ ಹುದ್ದೇಗೆ ಏರಿರುವ ಪ್ರಣಬ್ ಮುಖರ್ಜಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮಾರಂಭವೊಂದರಲ್ಲಿ ಭಾಗವಹಿಸಿ, ಸಂಘದ ಸೇವಕರನ್ನು ಉದ್ದೇಶಿಸಿ ಮಾತನಾಡಲಿರುವ ಸುದ್ದಿಯನ್ನು ಆರ್ ಎಸ್ ಎಸ್ ಖಚಿತ ಪಡಿಸಿದೆ.

ಜೂನ್ .7 ರಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಗಪುರದಲ್ಲಿ ನಡೆಯುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಕ್ಷಾ ವರ್ಗದಲ್ಲಿ ಭಾಗವಹಿಸಿ, ಮಾತನಾಡಲಿದ್ದಾರೆ. ನಾವು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ನಾಗಪುರದಲ್ಲಿ ನಡೆಯುವ ಸಂಘ ಶಿಕ್ಷಾ ವರ್ಗದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದೇವು. ಪ್ರಣಬ್ ಮುಖರ್ಜಿ ಅವರು ನಮ್ಮ ಆಹ್ವಾನವನ್ನು ಸ್ವೀಕರಿಸಿದ್ದು, ಸಂಘ ಶಿಕ್ಷಾ ವರ್ಗದಲ್ಲಿ ಭಾಗವಹಿಸಲಿರುವ 600 ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಆರ್ ಎಸ್ ಎಸ್ ಮುಖಂಡ ರಾಕೇಶ ಸಿನ್ಹಾ ತಿಳಿಸಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಪ್ರಣಬ್ ಮುಖರ್ಜಿ ನಾಗಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಮಾರಂಭದಲ್ಲಿ ಭಾಗವಹಿಸುವ ಕುರಿತು ಸುದ್ದಿ ಹರಿದಾಡುತ್ತಿತ್ತು. ಇದೀಗ ಸಂಘದ ಪ್ರಮುಖರೇ ಅಧಿಕೃತ ಮಾಹಿತಿ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಪ್ರಣಬ್ ಮುಖರ್ಜಿ ಅವರು ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ, ರಾಜೀವ ಗಾಂಧಿ ಅವರನ್ನು ಹತ್ತಿರದಿಂದ ಬಲ್ಲವರಾಗಿದ್ದು, ಅವರ ಜೊತೆ ಆಡಳಿತದಲ್ಲಿ ಸಕ್ರಿಯವಾಗಿದ್ದವರು. ಕಾಂಗ್ರೆಸ್ ನಲ್ಲಿ ಹಲವು ದಶಕಗಳ ಕಾಲ ರಾಷ್ಟ್ರೀಯ ನಾಯಕರಾಗಿದ್ದವರು. ಇದೀಗ ಸದಾ ಆರ್ ಎಸ್ ಎಸ್ ಅನ್ನು ವಿರೋಧಿಸುವ ಕಾಂಗ್ರೆಸ್ ಮುಖಂಡರ ಎದುರೇ  ಆರ್ ಎಸ್ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ.

0
Shares
  • Share On Facebook
  • Tweet It




Trending Now
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
Tulunadu News March 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
  • Popular Posts

    • 1
      ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!

  • Privacy Policy
  • Contact
© Tulunadu Infomedia.

Press enter/return to begin your search