ಪುಂಡಪೋಕರಿಗಳಿಂದ ಮಹಿಳೆಯರು ತಮ್ಮ ರಕ್ಷಣೆ ಮಾಡಿಕೊಳ್ಳಲು ವಿಎಚ್ ಪಿ ಏನು ಮಾಡಲು ಹೊರಟಿದೆ ಗೊತ್ತಾ?
ದೇಶದ ಹಲವೆಡೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿವೆ, ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ, ಆಳುವ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಬುದ್ಧಿಜೀವಿಗಳು, ಹಲವು ಸಂಘಟನೆಗಳು ಜೋರು ಬೊಬ್ಬೆ ಹಾಕುತ್ತವೆಯೇ ಹೊರತು, ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಸಹಕಾರ ನೀಡುವುದಿಲ್ಲ.
ಆದರೆ, ವಿಶ್ವ ಹಿಂದೂ ಪರಿಷತ್ ಮಾತ್ರ ಉತ್ತಮ ಕಾರ್ಯಕ್ಕೆ ಮುಂದಾಗಿದ್ದು, ಹೆಣ್ಣುಮಕ್ಕಳಿಗೆ ಪುಂಡಪೋಕರಿಗಳಿಂದ, ಕಾಮುಕರಿಂದ ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಕುರಿತು ತರಬೇತಿ ನೀಡಲು ಯೋಜನೆ ರೂಪಿಸಿದೆ.
ಹೌದು, ವಿಶ್ವ ಹಿಂದೂ ಪರಿಷತ್ ನ ದುರ್ಗಾ ವಾಹಿನಿ ಎಂಬ ಮಹಿಳಾ ವಿಭಾಗವೂ ಈ ಕಾರ್ಯಕ್ಕೆ ಮುಂದಾಗಿದ್ದು, ದೇಶಾದ್ಯಂತ ಹೆಣ್ಣು ಮಕ್ಕಳಿಗೆ ಕಾಮುಕರಿಂದ ರಕ್ಷಣೆ ಪಡೆಯಲು ಸ್ಟಿಕ್ ಫೈಟಿಂಗ್, ಶೂಂಟಿಂಗ್, ಕರಾಟೆ ಹಾಗೂ ಜೂಡೋ ವಿದ್ಯೆ ಕಲಿಸಲು ತೀರ್ಮಾನಿಸಿದೆ.
ಅಷ್ಟೇ ಅಲ್ಲ, ದುರುಳರು ಮೈಮೇಲೆ ಬಿದ್ದಾಗ ಹೇಗೆ ಪ್ರತಿಕ್ರಿಯಿಸಬೇಕು, ಅವರಿಂದ ಹೇಗೆ ತಪ್ಪಿಸಿಕೊಳ್ಳಬೇಕು, ಆ ಕುರಿತು ಇರುವ ಉಪಾಯಗಳು ಯಾವವು, ಯಾವ ಸಮಯದಲ್ಲಿ ಎಂತಹ ಜಾಗದಲ್ಲಿ ತಿರುಗಾಡಬಾರದು ಸೇರಿ ಹಲವು ವಿಷಯಗಳ ಕುರಿತು ಹೆಣ್ಣುಮಕ್ಕಳಿಗೆ ತರಬೇತಿ ನೀಡಲಾಗುತ್ತದೆ.
ಒಟ್ಟಿನಲ್ಲಿ ದೇಶಾದ್ಯಂತ ದಿನೇದಿನೇ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದ್ದು. ವಿಶ್ವ ಹಿಂದೂ ಪರಿಷತ್ ಹೀಗೆ ಮಹಿಳೆಯರಿಗೆ ತರಬೇತಿ ನೀಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಆದಾಗ್ಯೂ ಕೇಂದ್ರ ಸರ್ಕಾರ 12 ವರ್ಷದೊಳಗಿನ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದರೆ ಗಲ್ಲುಶಿಕ್ಷೆ ವಿಧಿಸುವ ಕಾಯಿದೆ ಜಾರಿ ಮಾಡಿದೆ.
Leave A Reply