ಆರ್ ಎಸ್ಎಸ್ ಸಭೆಗೆ ಮುಖರ್ಜಿ ಭೇಟಿ ವಿರೋಧಿಸುತ್ತಿರುವವರು ನೆಹರು, ಇಂದಿರಾ ನಡೆ ಮರೆತ್ತಿದ್ದಾರಾ?
ದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂರನೇ ವರ್ಷದ ಸಂಘ ಶಿಕ್ಷಾ ವರ್ಗದಲ್ಲಿ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ನ ಮಾಜಿ ಮುಖಂಡ ಪ್ರಣಬ್ ಮುಖರ್ಜಿ ಮಾತನಾಡುತ್ತಿರುವುದಕ್ಕೆ ಕಾಂಗ್ರೆಸ್ಸಿಗರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 2019ರ ಚುನಾಣೆ ಹೊತ್ತಲ್ಲಿ ಪ್ರಣಬ್ ಮುಖರ್ಜಿ ಈ ಭೇಟಿ ನೀಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ಕಾಂಗ್ರೆಸ್ ನಾಯಕರಿಗೆ ತಮ್ಮ ಅಧಿನಾಯಕರಾಗಿದ್ದು ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಹೊಂದಿರುವ ಅಭಿಪ್ರಾಯದ ಬಗ್ಗೆ ಅರಿವು ಇಲ್ಲದಂತೆ ಕಾಣುತ್ತಿದೆ.
ಆಧುನಿಕ ಕಾಂಗ್ರೆಸ್ಸಿನ ಕುಟುಂಬ ಆಡಳಿತದ ಜನಕ ಜವಾಹರ್ ಲಾಲ್ ನೆಹರು 1963ರಲ್ಲಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಸಂಘದ ಸ್ವಯಂ ಸೇವಕರ ಪಡೆಯನ್ನು ಆಮಂತ್ರಿಸಿದ್ದರು. ಸಂಘದ ಸ್ವಯಂ ಸೇವಕರು 1962ರಲ್ಲಿ ನಡೆದ ಚೀನಾ ವಿರುದ್ದದ ಹೋರಾಟದಲ್ಲಿ ಸಂಘದ ಸ್ವಯಂ ಸೇವಕರು ಸಹಾಯ ಮಾಡಿದಕ್ಕೆ ಶ್ಲಾಘನೆ ವ್ಯಕ್ತಪಡಿಸಿ, ನೆಹರು ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದರು, ಸಂಘದ ಸ್ವಯಂ ಸೇವಕರು ಪಥಸಂಚಲನದಲ್ಲಿ ಭಾಗವಹಿಸಿದ್ದು ಎಂದು ಆರ್ ಎಸ್ ಎಸ್ ಮಾಧ್ಯಮ ವಿಭಾಗದ ರಾಷ್ಟ್ರೀಯ ವಕ್ತಾರ ರತನ್ ಶರ್ದಾ ತಿಳಿಸಿದ್ದಾರೆ.
ಪ್ರಸ್ತುತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಭೇಟಿಯನ್ನು ವಿರೋಧಿಸುತ್ತಿರುವವರಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕೂಡ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ತಿಳಿದಿಲ್ಲ. 1977ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಏಕನಾಥ್ ರಾನಡೆ ಅವರ ಆಹ್ವಾನದ ಮೆರೆಗೆ ಸಂಘದಿಂದ ನಿರ್ಮಿಸಲಾದ ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಎಂದು ರತನ್ ಶರ್ದಾ ತಿಳಿಸಿದ್ದಾರೆ.
ಪ್ರಣಬ್ ಮುಖರ್ಜಿ ಜೂನ್ 7ರಂದು ನಾಗಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂರನೇ ವರ್ಷದ ಸಂಘ ಶಿಕ್ಷಾ ವರ್ಗ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಸಂಘದ ಪ್ರಬಲ ವಿರೋಧಿಯಾಗಿದ್ದು, ಸದಾ ಸಂಘವನ್ನು ಟೀಕಿಸುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಆದರೆ ಇದೀಗ ಅವರ ಪಕ್ಷದಲ್ಲಿ ಮುಖಂಡರಾಗಿದ್ದವರೊಬ್ಬರು ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
Leave A Reply