ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು ಎಂದವರಿಗೆ ಪ್ರಣಬ್ ಮುಖರ್ಜಿಯೇ ಉತ್ತರಿಸಿದ್ದಾರೆ ನೋಡಿ!
ಈ ಕಾಂಗ್ರೆಸ್ಸಿನವರು ಆಗಾಗ ದೇಶದಲ್ಲಿ ಅಸಹಿಷ್ಣುತೆ ಇದೆ, ಅಶಾಂತಿ ಇದೆ ಎಂದು ಬೊಬ್ಬೆ ಹಾಕುತ್ತಾರೆ. ಆದರೆ ಎಂತಹ ದುರದೃಷ್ಟ ನೋಡಿ, ವಾಸ್ತವದಲ್ಲಿ ಅವರೇ ದೊಡ್ಡ ಅಸಹಿಷ್ಣುವಾದಿಗಳಾಗಿದ್ದಾರೆ. ದೇಶದಲ್ಲಿ ಪ್ರತಿ ವಿಷಯದಲ್ಲೂ ರಾಜಕೀಯ ಮಾಡುವ ಮೂಲಕ ಕಾಂಗ್ರೆಸ್ ತಾನು ಅಸಹಿಷ್ಣು ಎಂಬುದನ್ನು ತೋರಿಸುತ್ತದೆ.
ಈಗ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ವಿಷಯದಲ್ಲೂ ಕಾಂಗ್ರೆಸ್ ಇಂತಹುದೇ ಅಸಹಿಷ್ಣುತೆ ತೋರಿಸಿದೆ. ಹೌದು, ಜೂನ್ ಏಳರಂದು ನಾಗಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಲಿದ್ದು, ಇದಕ್ಕೇ ಕಾಂಗ್ರೆಸ್ ರಂಪ ಮಾಡುತ್ತಿದೆ. ಮುಖರ್ಜಿಯವರು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಬೇಡ ಅಂತಲೇ ಬಹುತೇಕ ಕಾಂಗ್ರೆಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಮಾಜಿ ರಾಷ್ಟ್ರಪತಿಯವರು ಈ ವಿಷಯದಲ್ಲಿ ಎಂದಿನಂತೆ ಪ್ರಬುದ್ಧತೆ ಮೆರೆದಿದ್ದು, ತಾವು ಹೋಗುವ ಕಾರ್ಯಕ್ರಮ ವಿರೋಧಿಸಿದವರಿಗೆ ಸರಿಯಾಗಿಯೇ ಟಾಂಗ್ ನೀಡಿದ್ದಾರೆ. ಆ ಮೂಲಕ ಕಾಂಗ್ರೆಸ್ಸಿಗರ ಬಾಯಿ ಮುಚ್ಚಿಸಿದ್ದಾರೆ.
ಹೌದು, ಜೂನ್ ಏಳರಂದು ನಡೆಯುವ ಕಾರ್ಯಕ್ರಮಕ್ಕೆ ಹೋಗುವುದಾಗಿ ಪ್ರಣಬ್ ಅವರು ತಿಳಿಸಿದ ಬಳಿಕ ಉಂಟಾದ ಭಿನ್ನಾಭಿಪ್ರಾಯದ ಕುರಿತು ಖುದ್ದು ಅವರೇ ಉತ್ತರ ನೀಡಿದ್ದು, ನಾನು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಹೋಗುವುದು ನಿಶ್ಚಿತ. ಅಲ್ಲಿ ಹೋಗಿ ಏನು ಹೇಳಬೇಕು ಎಂದುಕೊಂಡಿದ್ದೀನೋ, ಅದನ್ನು ಹೇಳೇ ಹೇಳುತ್ತೇನೆ ಎನ್ನುವ ಮೂಲಕ ಅವರು ಹೋಗುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರಿಗೆ ಸರಿಯಾಗಿ ಟಾಂಗ್ ನೀಡಿದ್ದಾರೆ.
ಪ್ರಣಬ್ ಮುಖರ್ಜಿ ಅವರು ಆರೆಸ್ಸೆಸ್ ಕಾರ್ಯಕ್ರಮಕ್ಕೆ ಹೋಗಲಿದ್ದಾರೆ ಎಂಬ ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಮುಖಂಡ ಸಿ.ಕೆ.ಜಾಫರ್ ಮಾತನಾಡಿ, ಮಾಜಿ ರಾಷ್ಟ್ರಪತಿಯವರು ತಮ್ಮ ನಿರ್ಧಾರದ ಕುರಿತು ಪರಿಶೀಲನೆ ಮಾಡಬೇಕು. ಅವರು ಕಾರ್ಯಕ್ರಮಕ್ಕೆ ಹೋಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದರು. ಅಲ್ಲದೆ ಹಲವು ಕಾಂಗ್ರೆಸ್ ನಾಯಕರು ಸಹ ಇದೇ ಧಾಟಿಯಲ್ಲಿ ಮಾತನಾಡಿದ್ದರು. ಆದರೆ ಇವರಿಗೆಲ್ಲ ಮುಖರ್ಜಿಯವರು ಸರಿಯಾಗಿಯೇ ಉತ್ತರ ನೀಡಿದ್ದಾರೆ.
Leave A Reply