ಮಹಾರಾಷ್ಟ್ರ ಜಾರಿಗೊಳಿಸಲು ಮುಂದಾಗಿರುವ ಈ ಯೋಜನೆ ಕುಮಾರಸ್ವಾಮಿಯೂ ಜಾರಿಗೆ ತರುವರೇ?
ಮುಂಬೈ: ದೇಶದಲ್ಲಿ ಸ್ವಚ್ಛ ಭಾರತ್ ಯೋಜನೆ ಅನ್ವಯ ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸಿ ಕೇಂದ್ರ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಪ್ರತಿ ಗ್ರಾಮಗಳು, ನಗರಗಳಲ್ಲೂ ಪ್ರಸ್ತುತ ಶೌಚಾಲಯಗಳು ನಿರ್ಮಾಣವಾಗಿ ಜನರಲ್ಲೂ ಜಾಗೃತಿ ಮೂಡಿದೆ.
ಆದರೆ ದೇಶದ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೌಚಾಲಯಗಳ ಕೊರತೆ ಇದೆ. ನಿತ್ಯ ಲಕ್ಷಾಂತರ ಜನ ಕಾರು, ಬಸ್ಸುಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ತೆರಳುತ್ತಾರೆ. ಆದರೆ ಅವರಲ್ಲಿ ಬಹುತೇಕರು ನಿತ್ಯ ಮಲ ಹಾಗೂ ಮೂತ್ರ ವಿಸರ್ಜನೆಗೆ ರಸ್ತೆ ಬದಿಯ ಪೊದೆಯನ್ನೇ ಅನುಭವಿಸುವಂತಾಗಿದೆ. ಅಷ್ಟರ ಮಟ್ಟಿಗೆ ರಾಷ್ಟ್ರೀಯ ಹೆದ್ದಾರಿ ಬದಿ ಶೌಚಾಲಯವಾಗಿ ಮಾರ್ಪಟ್ಟಿದೆ.
ಆದರೆ ಪ್ರಯಾಣಿಕರ ಸಂಕಷ್ಟವನ್ನು ಅರಿತ ಮಹಾರಾಷ್ಟ್ರ ಬಿಜೆಪಿ ಸರ್ಕಾರ ರಾಜ್ಯಾದ್ಯಂತ ಹೆದ್ದಾರಿ ಬದಿಯಲ್ಲಿ ಸುಮಾರು 400 ಶೌಚಾಲಯಗಳನ್ನು ಸ್ಥಾಪಿಸುವ ಯೋಜನೆ ರೂಪಿಸಿದೆ. ಹೌದು, ಪಿಡಬ್ಲ್ಯೂಡಿ ಈ ಕುರಿತು ಯೋಜನೆ ರೂಪಿಸಲು ಮುಂದಾಗಿದ್ದು, ರಾಜ್ಯದ ಸುಮಾರು 160 ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಶೌಚಾಲಯ ನಿರ್ಮಿಸಲು ಮುಮದಾಗಿದೆ.
ಇದಕ್ಕಾಗಿ ಖಾಸಗಿ ಸಹಭಾಗಿತ್ವಕ್ಕೂ ಚಿಂತನೆ ನಡೆಸಿದ್ದು, ಯೋಜನೆ ಜಾರಿಯಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್, ಹಿಂದೂಸ್ಥಾನ್ ಪೆಟ್ರೋಲಿಯಂ ಲಿಮಿಟೆಡ್ ಕಂಪನಿಗಳು ಸಹ ಸಹಭಾಗಿಗಳಾಗಲಿವೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಮಹಾರಾಷ್ಟ್ರ ಸರ್ಕಾರ ಉತ್ತಮ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ನೂತನವಾಗಿ ಕರ್ನಾಟಕದಲ್ಲಿ ಸರ್ಕಾರ ರಚಿಸಿರುವ ಕುಮಾರಸ್ವಾಮಿಯವರೂ ಮಹಾರಾಷ್ಟ್ರದಂತೆ ರಾಜ್ಯದ ಮೂಲಕವೂ ಹಾದು ಹೋದ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಬದಿ ಶೌಚಾಲಯ ನಿರ್ಮಿಸಿದರೆ ಒಳಿತು.
Leave A Reply