ಕ್ಷಮೆ ಕೇಳುವ ಮುನ್ನ ಭಯೋತ್ಪಾದನೆ ವಿಶ್ವರೂಪ ಗೊತ್ತಿರಲಿಲ್ಲವೇ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ?
ಈ ಸಿನಿಮಾ ನಟ-ನಟಿಯರಿಗೆಲ್ಲ ಏನಾಗಿದೆ? ಒಂದು ಕಡೆ ನೋಡಿದರೆ ಕರ್ನಾಟಕದಲ್ಲಿ ಜನಿಸಿ, ಇಲ್ಲಿಯ ಸಿನಿಮಾದಲ್ಲಿ ನಟಿಸಿ, ಇಲ್ಲಿಯ ಅನ್ನ ತಿಂದು, ಗಾಳಿ ಸೇವಿಸಿ ತಮಿಳುನಾಡಿನಲ್ಲಿ ಹೆಸರು ಮಾಡಿದರು ಎಂಬ ಮಾತ್ರಕ್ಕೆ ಕಾವೇರಿ ವಿಷಯದಲ್ಲಿ ತಮಿಳುನಾಡು ಪರ ಮಾತನಾಡುವ ಮೂಲಕ ಕನ್ನಡ ನಾಡಿನ ಋಣವನ್ನು ಸಾರಾಸಗಟವಾಗಿ ತಿರಸ್ಕರಿಸಿದ್ದಾರೆ.
ಇನ್ನು ಭಾರತದಲ್ಲೇ ಇದ್ದು, ಜಗತ್ತಿನ ವಿದ್ಯಮಾನಗಲೆಲ್ಲವನ್ನೂ ತಿಳಿದುಕೊಂಡು, ಇಲ್ಲಿಯ ಜನರ ಪ್ರೀತಿ-ಬೆಂಬಲ ಗಳಿಸಿದ ಬಾಲಿವುಡ್ ನಟಿ, ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನ ಕ್ವಾಂಟಿಕೋ ಧಾರಾವಾಹಿಯಲ್ಲಿ ವ್ಯಕ್ತಿಯೊಬ್ಬ ಭಯೋತ್ಪಾದಕ ಎಂದು ಆತನ ಕೊರಳಲ್ಲಿದ್ದ ರುದ್ರಾಕ್ಷಿಯಿಂದ ಪತ್ತೆ ಹಚ್ಚುವ ಕುರಿತ ದೃಶ್ಯದಲ್ಲಿ ನಟಿಸಿದ್ದಾರೆ. ಆ ಮೂಲಕ ಯಾವುದೇ ಕಾರಣವಿಲ್ಲದೆ ರುದ್ರಾಕ್ಷಿ ಹಾಕಿಕೊಂಡವರೆಲ್ಲ ಭಯೋತ್ಪಾಕದರು ಹಾಗೂ ಅವರೆಲ್ಲರೂ ಹಿಂದೂಗಳು ಎಂಬರ್ಥ ಇರುವ ಸನ್ನಿವೇಶದಲ್ಲಿ ನಟಿಸಿದ್ದಾರೆ.
ಹಾಗಾದರೆ ರುದ್ರಾಕ್ಷಿ ಹಾಕಿಕೊಂಡವರೆಲ್ಲ ಭಯೋತ್ಪಾದಕರೇ? ಇಷ್ಟೆಲ್ಲ ತಿಳಿದುಕೊಂಡಿರುವ, ಓದಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಅವರಿಗೆ ಭಯೋತ್ಪಾಕದರ ಸಂಕೇತ ಯಾವುದು ಎಂಬ ಕುರಿತು ಅರಿವಿಲ್ಲವೇ? ಈ ಪ್ರಿಯಾಂಕಾ ಚೋಪ್ರಾ ಅಷ್ಟೊಂದು ಮುಗ್ಧರೇ? ಏಕೆ ಇವರು ಭಾರತದ ಮರ್ಯಾದೆ ತೆಗೆಯಲು ಯತ್ನಿಸುತ್ತಿದ್ದಾರೆ? ಏಕೆ ಇವರಿಗೆ ಹುಟ್ಟಿದ ನೆಲ, ಜಲದ ಬಗ್ಗೆ ಇವರಿಗೆ ಗೌರವವಿಲ್ಲ?
ನೀವೇ ಯೋಚಿಸಿ ನೋಡಿ, ಇಡೀ ವಿಶ್ವದಲ್ಲೇ ಭಯೋತ್ಪಾದನೆ ಎಂದರೆ ಒಂದೇ ಧರ್ಮೀಯರೇ ಮುನ್ನೆಲೆಗೆ ಬರುತ್ತಾರೆ. ಖಂಡಿತ ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ ಎಂಬುದು ಕಟುವಾಸ್ತವವೇ ಆಗಿದೆ. ಅದಕ್ಕೆ ತವರೂರು ಪಾಕಿಸ್ತಾನ ಎಂದು ಎಲ್ಲರಿಗೂ ಗೊತ್ತಿದೆ.
ಪರಿಸ್ಥಿತಿ ಹೀಗಿರುವಾಗ, ಪ್ರಿಯಾಂಕಾ ಚೋಪ್ರಾ ಅವರು ಯಾವ ಆಧಾರದ ಮೇಲೆ ವ್ಯಕ್ತಿಯ ಕೊರಳಲ್ಲಿದ್ದ ರುದ್ರಾಕ್ಷಿಯನ್ನು ಗುರುತಿಸಿ, ಆತ ಭಯೋತ್ಪಾದಕ ಎಂದು ಗುರುತಿಸಿದರು? ಅಂತಹ ಸನ್ನಿವೇಶದ ಚಿತ್ರೀಕರಣಕ್ಕೆ ಯಾಕೆ ಒಪ್ಪಿಕೊಂಡರು? ಈಗ ಎಲ್ಲ ಮುಗಿದ ಮೇಲೆ ಜನರ ಕ್ಷಮೆ ಕೇಳಿದರೆ ಏನು ಪ್ರಯೋಜನ? ಭಯೋತ್ಪಾದನೆಯಲ್ಲಿ ಯಾರು ತೊಡಗಿದ್ದಾರೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಪ್ರಿಯಾಂಕಾ ಚೋಪ್ರಾ ಈಗ ಕ್ಷಮೆ ಕೇಳಿದರೆ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ಅವರು ಮೊದಲೇ ಬುದ್ಧಿಗೆ ಸ್ವಲ್ಪ ಕೆಲಸ ಕೊಡಬೇಕಿತ್ತು.
ಅಷ್ಟೇ ಅಲ್ಲ, ಈ ಹಿಂದೆ ಟಿವಿ ಆ್ಯಂಕರ್ ಎದುರು ಹಲ್ಲು ಗೀಂಜುತ್ತ ಮಾತನಾಡಿದ್ದ ಪ್ರಿಯಾಂಕಾ ಚೋಪ್ರಾ, ಭಾರತೀಯ ಸಿನಿಮಾ ಎಂದರೆ ಸೊಂಟ ಹಾಗೂ ಎದೆ ತೋರಿಸುವ ಅನ್ವರ್ಥಕ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಭಾರತೀಯ ಸಿನಿಮಾದಲ್ಲಿ ಸೊಂಟ, ಎದೆ ಹೊರತಾಗಿ ಎಂತಹ ಸಾಂಸ್ಕೃತಿಕ, ದೇಶ ಪ್ರೇಮದ ಸಿನಿಮಾಗಳು ಬಂದಿವೆ ಎಂಬುದನ್ನೂ ಗಮನಿಸಿದ ಪ್ರಿಯಾಂಕಾ ಚೋಪ್ರಾ, ದೇಶದ ಸಿನಿಮಾ ರಂಗವನ್ನು ಹರಾಜು ಹಾಕಿದ್ದರು.
ಇಂತಹ ಹಿನ್ನೆಲೆಯಿರುವ ಪ್ರಿಯಾಂಕಾ ಚೋಪ್ರಾ ಈಗ ಭಾರತೀಯರ ಕ್ಷಮೆ ಕೇಳಿರುವುದು ಬಾಲಿಷವೆನಿಸಿದೆ. ಎಲ್ಲ ಮಾಡಿದ ಮೇಲೆ ಕ್ಷಮೆ ಕೇಳುವುದಕ್ಕಿಂತ, ಮೊದಲೇ ವಿವೇಚನೆಗೆ ತುಸು ಮಸಾಜು ಮಾಡಿದ್ದರೆ ಪ್ರಿಯಾಂಕಾ ಚೋಪ್ರಾ ತಾವೂ ಮುಜಗರ ಅನುಭವಿಸುತ್ತಿರಲಿಲ್ಲ, ಭಾರತೀಯರಿಗೂ ಮುಜುಗರವಾಗುತ್ತಿರಲಿಲ್ಲ. ಇನ್ನಾದರೂ ಬುದ್ಧಿ ಕಲಿಯಿರಿ ಪ್ರಿಯಾಂಕಾ ಚೋಪ್ರಾ.
Leave A Reply