ಮೋದಿ ಅವರನ್ನು ಟೀಕಿಸುವ ಭರದಲ್ಲಿ ರಾಹುಲ್ ಗಾಂಧಿ ಮತ್ತೆ ಎಡವಟ್ಟು, ಕೋಕಾ-ಕೋಲಾ ಇತಿಹಾಸ ಬದಲಿಸಿ ನಗೆಪಾಟಲು!
ಈ ರಾಹುಲ್ ಗಾಂಧಿಯವರು ದೇಶದಲ್ಲಿ ಎಲ್ಲೇ ಭಾಷಣ ಮಾಡಲಿ, ವಿದೇಶಕ್ಕೇ ಹೋಗಲಿ, ಅಲ್ಲೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದೇ ಕೆಲಸ ಎಂದು ಭಾವಿಸಿದ್ದಾರೆ. ದೇಶದ ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆಯೇ ಇಲ್ಲದ ಈತ ಮೋದಿ ಅವರನ್ನು ಟೀಕಿಸುವುದೇ ನಾಯಕತ್ವ ಎಂದು ಭಾವಿಸಿದ್ದಾರೆ.
ಆದರೆ ಅದರಲ್ಲೂ ಬರೀ ಸುಳ್ಳುಗಳನ್ನು ಹೇಳುವ ಮೂಲಕ, ಯಾವುದೋ ಅಂಕಿ-ಅಂಶ ಹೇಳುವ ಮೂಲಕ ದೇಶದ ಜನರ ಎದುರು ನಗೆಪಾಟಲಿಗೀಡಾಗುತ್ತಾರೆ. ಇತ್ತೀಚೆಗೆ ಪೆಟ್ರೋಲ್ ಬೆಲೆ ಕೆಜಿಗೆ ಜಾಸ್ತಿಯಾಗುತ್ತಲೇ ಇದೆ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ದಡ್ಡತನ ಪ್ರದರ್ಶಿಸಿದ್ದರು. ಪ್ರಧಾನಿ ಅಭ್ಯರ್ಥಿಯಾಗಿರುವ ಇವರಿಗೆ ಪೆಟ್ರೋಲ್ ಲೀಟರ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತದೆ ಎಂಬುದು ಸಹ ಗೊತ್ತಿಲ್ಲ ಎಂದು ಜಾಲತಾಣದಲ್ಲಿ ಜನ ಜಾಡಿಸಿದರು.
ಇಂತಹ ಎಡವಟ್ಟುಗಳಿಗೆ ಹೆಸರುವಾಸಿಯಾಗಿರುವ ರಾಹುಲ್ ಗಾಂಧಿ ಈಗ ಮತ್ತೆ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಹಸಿ ಸುಳ್ಳು ಹೇಳಿದ್ದು, ಮತ್ತೆ ಜನರ ಎದುರು ನಗೆಪಾಟಲಿಗೀಡಾಗಿದ್ದಾರೆ. ಆ ಮೂಲಕ ತಮ್ಮ ಹೆಡ್ಡತನವನ್ನು ಪ್ರದರ್ಶಿಸಿದ್ದಾರೆ.
ಹೌದು, ಮೋದಿ ಅವರನ್ನು ಟೀಕಿಸಲು ಮುಂದಾದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಿಗಳ ಪರವಾಗಿ ಆಡಳಿತ ನಡೆಸುತ್ತಿದ್ದಾರೆ. ಆದರೆ ಅಮೆರಿಕದಲ್ಲಿ ಸಾಮಾನ್ಯರೂ ಉದ್ಯಮಿಗಳಾಗಿ ಬದಲಾಗಿದ್ದಾರೆ. ಶರಬತ್ ಮಾರುತ್ತಿದ್ದ ವ್ಯಕ್ತಿ ಕೋಕಾ-ಕೋಲಾ ಕಂಪನಿ ಸ್ಥಾಪಿಸಿದ್ದಾರೆ. ಡಾಬಾ ಮಾಲೀಕರಾಗಿದ್ದ ವ್ಯಕ್ತಿ ಈಗ ಮ್ಯಾಕ್ ಡೋನಾಲ್ಡ್ ಅಂತಹ ಸಂಸ್ಥೆ ಸ್ಥಾಪಿಸಿದ್ದಾರೆ. ಆದರೆ ಭಾರತದಲ್ಲಿ ಸಾಮಾನ್ಯ ಮೆಕಾನಿಕ್ ಒಬ್ಬ ಆಟೋಮೊಬೈಲ್ ಕಂಪನಿ ಮಾಲೀಕರಾಗಿದ್ದು ನೋಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದರು.
ಆದರೆ ಇಂಟರ್ ನೆಟ್ ನಲ್ಲಿ ಹುಡುಕಾಡಿದಾಗ ರಾಹುಲ್ ಗಾಂಧಿ ಅವರು ಹೇಳಿದ್ದು ಸುಳ್ಳು ಎಂಬುದು ಸಾಬೀತಾಗಿದ್ದು, ಮ್ಯಾಕ್ ಡೊನಾಲ್ಡ್ ಡಾಬಾ ಮಾಲೀಕರಾಗಿರಲಿಲ್ಲ, ಅವರೊಬ್ಬ ಸೇಲ್ಸ್ ಮನ್ ಆಗಿದ್ದರು ಎಂಬುದು ಬಹಿರಂಗವಾಗಿದೆ. ಆ ಮೂಲಕ ರಾಹುಲ್ ಗಾಂಧಿ ಹೇಳಿದ್ದು ಸುಳ್ಳು ಎಂಬುದು ಸಾಬೀತಾಗಿದ್ದು, ದೇಶಾದ್ಯಂತ ಜನ ಟೀಕಿಸುತ್ತಿದ್ದಾರೆ. ರಾಹುಲ್ ಗಾಂಧಿ ಯಾವಾಗ ವಾಸ್ತವಿಕವಾಗಿ ಮಾತನಾಡುತ್ತಾರೋ ಎಂದು ಜನ ಪ್ರಶ್ನಿಸುವಂತಾಗಿದೆ.
Leave A Reply