• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನರೇಂದ್ರ ಮೋದಿ ಸರ್ಕಾರದ ಈ 10 ಅಂಶಗಳ ಬಗ್ಗೆ ತಿಳಿದರೆ ವಿರೋಧಿಗಳೂ ಬೆಂಬಲಿಬರಾಗಿಬಿಡುತ್ತಾರೆ!

TNN Correspondent Posted On June 16, 2018
0


0
Shares
  • Share On Facebook
  • Tweet It

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಹಲವರು ಅವರು ದೇಶಕ್ಕೆ ಏನು ಮಾಡಿದ್ದಾರೆ? ಯಾವ ಯೋಜನೆ ಜಾರಿಗೊಳಿಸಿದ್ದಾರೆ? ಬರೀ ವಿದೇಶ ಪ್ರವಾಸ ಕೈಗೊಳ್ಳುವ ಅವರು ಬಡವರಿಗಾಗಿ ಏನು ಪ್ರಯೋಜನ ಮಾಡಿದ್ದಾರೆ? ಕೇಂದ್ರ ಸರ್ಕಾರದಿಂದ ದೇಶದಲ್ಲಿ ಯಾವ ಬದಲಾವಣೆಯಾಗಿದೆ ಎಂದು ಪ್ರಶ್ನಿಸುವವರ ಸಂಖ್ಯೆ ತುಸು ಜಾಸ್ತಿಯಾಗಿದೆ.

ಆದರೆ ಮೋದಿ ಸರ್ಕಾರದಲ್ಲಿ ದೇಶದಲ್ಲಿ ಮಹತ್ತರ ಬದಲಾವಣೆಯಾಗಿದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಉದಾಹರಣೆ ಸಮೇತ ಅವುಗಳನ್ನು ಇಲ್ಲಿ ತಿಳಿಸಲಾಗಿದೆ. ಇಷ್ಟೆಲ್ಲ ಓದಿದ ಮೇಲೆ ಮೋದಿ ಅವರು ದೇಶಕ್ಕೆ ಏನೂ ಮಾಡಿಲ್ಲ ಅನಿಸದೇ ಇರದು. ಒಮ್ಮೆ ಓದಿ.

  • ಜನಧನ ಯೋಜನೆ ಮೂಲಕ ಇದುವರೆಗೆ 31 ಕೋಟಿ ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ. ಇದರಿಂದ ರೈತರು ಸರ್ಕಾರದ ಯೋಜನೆಯ ಹಣವನ್ನು ನೇರವಾಗಿ ಅಕೌಂಟ್ ನಿಂದಲೇ ಪಡೆಯುವಂತಾಗಿದೆ. ಅಲ್ಲದೆ 2014ರಲ್ಲಿ ಶೇ.53ರಷ್ಟು ಯುವಕರು ಬ್ಯಾಂಕ್ ಅಕೌಂಟ್ ಹೊಂದಿದ್ದರು. ಆದರೆ ಈಗ ಆ ಪ್ರಮಾಣ ಶೇ.80ಕ್ಕೆ ಏರಿಕೆಯಾಗಿದೆ.
  • ಹೀಗೆ ಜನಧನ ಯೋಜನೆ ಮೂಲಕ 31 ಕೋಟಿ ಅಕೌಂಟ್ ತೆರೆದಿದ್ದು, ಅಮೆರಿಕದ ಜನಸಂಖ್ಯೆಗೆ ಸಮಾನವಾಗಿದೆ. ಈಗ ಹೇಳಿ ಒಂದು ಸರ್ಕಾರದಿಂದ 31 ಕೋಟಿ ಜನರಿಗೆ ಉಪಯೋಗವಾಗುತ್ತದೆ ಎಂದರೆ ಅದಕ್ಕಿಂತ ಸಂತಸದ ವಿಚಾರ ಮತ್ತೇನಿದೆ?
  • 2014ರವರೆಗೆ ದೇಶದಲ್ಲಿ 2.63 ಗಿಗಾವ್ಯಾಟ್ ಸೋಲಾರ್ ಇಂಧನ ಉತ್ಪಾದನೆ ಮಾಡಲಾಗುತ್ತಿತ್ತು. ಆದರೆ ಮೋದಿ ಸರ್ಕಾರದ ಅವಧಿಯಲ್ಲಿ ಇದು 8 ಪಟ್ಟು ಜಾಸ್ತಿಯಾಗಿದೆ. ಅಂದರೆ 2018ರ ವೇಳೆಗೆ ಈ ಉತ್ಪಾದನೆ ಪ್ರಮಾಣ 22 ಗಿಗಾ ವ್ಯಾಟ್ ಗೆ ಹೆಚ್ಚಾಗಿದೆ. ಇಂಧನವೇ ಇಲ್ಲದೆ ಯಾವ ದೇಶ ಅಭಿವೃದ್ಧಿಯಾಗಿದೆ ಅಲ್ವಾ?
  • ಮೋದಿ ಸರ್ಕಾರ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಳಿಸಿದ್ದಾಗ ತುಂಬ ಜನ ಟೀಕಿಸಿದ್ದರು. ಆದರೆ ಈ ಯೋಜನೆ ಭಾಗವಾಗಿ 2014ರಲ್ಲಿ ಕೇವಲ ಎರಡಿದ್ದ ಮೊಬೈಲ್ ಉತ್ಪಾದನೆ ಘಟಕಗಳು ಪ್ರಸ್ತುತ 120ಕ್ಕೆ ಏರಿಕೆಯಾಗಿದೆ. ಇಷ್ಟು ಕಂಪನಿಗಳು ದೇಶದಲ್ಲೇ ಮೊಬೈಲ್ ಉತ್ಪಾದನೆ ಮಾಡುತ್ತಿವೆ, ಅಲ್ಲಿಗೆ ನಮ್ಮ ಹಣ ದೇಶದಲ್ಲೇ ಉಳಿಯಿತು ಹಾಗೂ ಹಲವು ಜನರಿಗೆ ಉದ್ಯೋಗವೂ ಸಿಕ್ಕಿತು.
  • ಕೇಂದ್ರದಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ, ಅಂದರೆ 2004ರಿಂದ 2014ರ ಅವಧಿಯಲ್ಲಿ ಪ್ರತಿ ವರ್ಷ 491 ಕಿ,ಮೀ. ರೈಲ್ವೆ ವಿದ್ಯುದ್ಯೀಕರಣವಾಗಿದೆ. ಆದರೆ ಇದೇ ಮೋದಿ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ ಸುಮಾರು 1600 ಕಿ.ಮೀ. ರೈಲ್ವೆ ವಿದ್ಯುದ್ಯೀಕರಣವಾಗಿದೆ ಎಂದರೆ ನಂಬಲೇಬೇಕು.
  • 2011 ರಿಂದ 2014ರ ಅವಧಿಯಲ್ಲಿ ದೇಶದ ಕೇವಲ 53 ಗ್ರಾಮಪಂಚಾಯಿತಿಗಲಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಮೋದಿ ಅವರು ಬಂದ ಬಳಿಕ ಇದುವರೆಗೆ 1.15 ಲಕ್ಷ ಗ್ರಾಮಪಂಚಾಯಿತಿಗಳಿಗೆ ಈ ಸಂಪರ್ಕ ಕಲ್ಪಿಸಲಾಗಿದೆ.
  • ಪಂಜಾಬ್ ಸೇರಿ ಈಶಾನ್ಯ ರಾಜ್ಯಗಳಲ್ಲಿ ಉಗ್ರರ ದಾಳಿಗೆ ಮೃತಪಡುವವರ ಸರಾಸರಿ ಶೇ.80ರಷ್ಟು ಕಡಿಮೆಯಾಗಿದೆ. ಇದು ಯುಪಿಎ ಅವಧಿಯಲ್ಲಿ ಕೇವಲ ಶೇ.5ರಷ್ಟಿತ್ತು ಎಂದರೆ ನೀವು ನಂಬಲೇಬೇಕು.
  • ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲು ನಿಸರ್ಗವೇ ತಡೆಯೊಡ್ಡುತ್ತದೆ. ಆದರೂ ಮೋದಿ ಅವರು ಮೇಘಾಲಯಕ್ಕೆ ಸಂಪರ್ಕ ಕಲ್ಪಿಸುವ ದುದ್ನೋಯಿ-ಮೇಂಡಿಪಠಾರ್, ತ್ರಿಪುರಾಗೆ ಸಂಪರ್ಕ ಕಲ್ಪಿಸುವ ಕಮರ್ಘಾಟ್-ಅಗರ್ತಲಾ, ಮಿಝೋರಾಂಗೆ ಸಂಪರ್ಕ ಕಲ್ಪಿಸುವ ಕಥಕಲ್-ಭೈರಾಬಿ ರೈಲಿಗೆ ಚಾಲನೆ ನೀಡುವ ಮೂಲಕ ಈ ರಾಜ್ಯಗಳಿಗೆ ಬ್ರಾಡ್ ಗೇಜ್ ರೈಲುಹಳಿ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.
  • ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಸುಮಾರು 25 ವಾಯುಯಾನ ಕಾರ್ಯಾಚರಣೆಗಳ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಮೂಲಕ ಭಾರತ ವಿಶ್ವದ 3ನೇ ಬೃಹತ್ ವಿಮಾನಯಾನ ಮಾರುಕಟ್ಟೆಯಾಗಿ ಹೊರಹೊಮ್ಮುವಂತೆ ಮಾಡಿದೆ. ಇದಕ್ಕೂ ಮೊದಲು ಕೇವಲ 85 ನಿಲ್ದಾಣ ನಿರ್ಮಾಣ ಮಾಡಲಾಗಿತ್ತು.
  • ದೇಶದಲ್ಲಿ ಕೋಟ್ಯಂತರ ಮಹಿಳೆಯರು ಸೌದೆ ಒಲೆಯಿಂದ ಹಲವು ರೋಗಗಳಿಗೆ ತುತ್ತಾಗುತ್ತಿದ್ದರು. ಆದರೂ 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಈ ಕುರಿತು ಯೋಚನೆ ಮಾಡಲಿಲ್ಲ. ನರೇಂದ್ರ ಮೋದಿ ಸರ್ಕಾರ ಇದುವರೆಗೆ 4.1 ಕೋಟಿ ಮನೆಗಳಿಗೆ ಎಲ್ಪಿಜಿ ಗ್ಯಾಸ್ ಸಂಪರ್ಕ ಕಲ್ಪಿಸುವ ಮೂಲಕ ನಮ್ಮ ಮನೆಯ ಹೆಣ್ಣುಮಗಳು ಸೌದೆ ಹೊಗೆಯಿಂದ ಮುಕ್ತವಾಗುವಂತೆ ಮಾಡಿದ್ದಾರೆ.
0
Shares
  • Share On Facebook
  • Tweet It




Trending Now
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
  • Popular Posts

    • 1
      ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • 2
      ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • 3
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search