ಅರವಿಂದ್ ಕೇಜ್ರಿವಾಲ್ ಅವರ ಧರಣಿಗೆ ದೆಹಲಿ ಹೈಕೋರ್ಟ್ ಛೀಮಾರಿ ಹಾಕಿದೆ ನೋಡಿ!
ನವದೆಹಲಿ: ಅರವಿಂದ್ ಕೇಜ್ರಿವಾಲ್ ಎಂದರೇನೆ ಹಾಗೆ. ಅವರು ದೆಹಲಿಯ ಅಭಿವೃದ್ಧಿಗಾಗಿ ಯಾವ ಯೋಜನೆ ಜಾರಿಗೊಳಿಸುತ್ತಾರೋ ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆ ಈಡೇರಿಸಿದ್ದಾರೋ, ಆ ಕುರಿತು ಅವರು ಮಾತನಾಡುವುದಿಲ್ಲ. ಆದರೂ ಸುದ್ದಿಯಲ್ಲಿ ಇರಬಯಸುವ ಅವರು ನರೇಂದ್ರ ಮೋದಿ ಅವರನ್ನು ಟೀಕಿಸುವ ಮೂಲಕವೋ, ಅಥವಾ ಇನ್ನಾವುದೋ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕವೋ ಸುದ್ದಿಯಲ್ಲಿರುತ್ತಾರೆ.
ಆದರೆ ಹೀಗೆ ಸುದ್ದಿಯಲ್ಲಿ ಇರಬಯಸಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ನಡೆಸುತ್ತಿರುವ ಐಎಎಸ್ ಅಧಿಕಾರಿಗಳ ವಿರುದ್ಧ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಕ್ರಮ ಕೈಗೊಳ್ಳಬೇಕು ಎಂದು ಬೈಜಾಲ್ ಕಚೇರಿಯಲ್ಲೇ ಕೇಜ್ರಿವಾಲ್ ಧರಣಿ ನಡೆಸುತ್ತಿದ್ದು, ಹೈಕೋರ್ಟ್ ಛೀಮಾರಿ ಹಾಕಿದೆ.
ಯಾವುದೇ ಪ್ರತಿಭಟನೆ ಕಚೇರಿ ಅಥವಾ ನಿವಾಸದ ಹೊರಗಡೆ ನಡೆಯಬೇಕು. ಆದರೆ ಒಂದು ವಾರದಿಂದ ಕೇಜ್ರಿವಾಲ್ ಎಲ್ ಜಿ ಕಚೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಪ್ರತಿಭಟನೆ ಎಂದು ಕರೆಯಲು ಸಾಧ್ಯ? ಕೇಜ್ರಿವಾಲ್ ಅವರಿಗೆ ಹೀಗೆ ನಿವಾಸದಲ್ಲಿ ಕುಳಿತು ಪ್ರತಿಭಟನೆ ಮಾಡಲು ಯಾರು ಅನುಮತಿ ನೀಡಿದ್ದಾರೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.
ದೆಹಲಿ ಪ್ರತಿಪಕ್ಷ ನಾಯಕರಾಗಿರುವ ವಿಜೇಂದರ್ ಗುಪ್ತಾ ಅವರು ಹೀಗೆ ಪ್ರತಿಭಟನೆ ಮಾಡುತ್ತಿರುವ ಅರವಿಂದ ಕೇಜ್ರಿವಾಲ್ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಅಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೇಜ್ರಿವಾಲ್ ಅವರಿಗೆ ಛೀಮಾರಿ ಹಾಕಿದೆ.
Leave A Reply