ಯೋಗದ ಯೋಗವನ್ನೇ ಬದಲಾಯಿಸಿದ ಮೋದಿ, ಅವರಿಂದಲೇ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ!
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಅಭಿವೃದ್ಧಿಯಷ್ಟೇ ಅಲ್ಲ, ಭಾರತದ ಘನತೆಯೂ ಗಾಳಿಪಟದಂತೆ ಬಾನೆತ್ತರಕ್ಕೆ ಹಾರುತ್ತಿದೆ. ಪ್ರಸ್ತುತ ಭಾರತದ ಪ್ರಧಾನಿಯೊಬ್ಬರು ವಿಶ್ವದ ಯಾವುದೇ ದೇಶಕ್ಕೆ ಹೋಗಲಿ, ಆ ದೇಶದ ನಾಯಕರು ಮೋದಿ ಅವರನ್ನು ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಮೋದಿ ಮಾತಿಗೆ ವಿಶ್ವವೇ ಕಿವಿಯಾಗುತ್ತದೆ. ಇವರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತದೆ.
ಇಂತಿಪ್ಪ ನರೇಂದ್ರ ಮೋದಿ ಅವರು 2014 ಡಿಸೆಂಬರ್ ನಲ್ಲಿ ಒಂದು ಮನವಿ ಮಾಡಿದ್ದರು. ವಿಶ್ವಸಂಸ್ಥೆ ಯೋಗದ ಜಾಗೃತಿಗಾಗಿ, ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯನ್ನಾಗಲಿ ಮಾಡಬೇಕು ಎಂದು ಕೋರಿದ್ದರು. ಇದಕ್ಕೆ ಸ್ಪಂದಿಸಿದ್ದ ವಿಶ್ವಸಂಸ್ಥೆ, ಮೋದಿ ಅವರ ಮಾತಿಗೆ ಮನ್ನಣೆ ಕೊಟ್ಟು, ಜೂನ್ 21ನ್ನು ವಿಶ್ವ ಯೋಗ ದಿನ ಎಂದು ಘೋಷಿಸಿತು. ಆ ಮೂಲಕ ಭಾರತದಲ್ಲಿ ಜನಿಸಿದ್ದ ಯೋಗ ವಿಶ್ವದ ಯೋಗವಾಗಯಿತು.
2015ರ ಜೂನ್ 21ರಂದು ಮೋದಿ ಅವರ ಆಶಯದಂತೆ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಅಮೆರಿಕ ಸೇರಿ ವಿಶ್ವದ ಹಲವು ರಾಷ್ಟ್ರಗಳು ಯೋಗ ದಿನಾಚರಣೆ ಆಚರಿಸುತ್ತಿವೆ. ಇಂದು ಇಡೀ ವಿಶ್ವವೇ ಯೋಗ ದಿನ ಆಚರಿಸುತ್ತಿದೆ. ಭಾರತದಲ್ಲಿ ಮೋದಿ ನಾಯಕತ್ವದಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ.
ಅಂದು ನರೇಂದ್ರ ಮೋದಿ ಅವರು ಮಾಡಿದ ಮನಸ್ಸಿನಿಂದ ಪ್ರಸ್ತುತ ಯೋಗಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ ದೊರೆತಿದೆ. ಈ ಬಾರಿಯ ನಾಲ್ಕನೇ ಯೋಗ ದಿನಾಚರಣೆಯನ್ನು ಸುಮಾರು 100ಕ್ಕೂ ಅಧಿಕ ರಾಷ್ಟ್ರಗಳು ಆಚರಿಸುತ್ತಿವೆ ಎಂದು ಆಯುಷ್ ಸಚಿವ ಪಿಯೂಷ್ ಗೋಯೆಲ್ ಮಾಹಿತಿ ನೀಡಿದ್ದಾರೆ.
ಅಲ್ಲದೆ ಇಂದು ನರೇಂದ್ರ ಮೋದಿ ನೇತೃತ್ವದಲ್ಲಿ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್ ನಲ್ಲಿ ಯೋಗ ದಿನ ಆಚರಿಸಿದ್ದು, ಸಾವಿರಾರು ಜನ ಭಾಗವಹಿಸಿದ್ದಾರೆ. ನಮ್ಮ ಮೈಸೂರು ಸೇರಿ ದೇಶಾದ್ಯಂತ ಯೋಗ ದಿನ ಆಚರಿಸಲಾಗುತ್ತಿದೆ. ಆದಾಗ್ಯೂ ಈ ಬಾರಿಯ ಯೋಗ ದಿನಕ್ಕೆ ಮೋದಿ ಅವರು ಯೋಗ ಒಂದುಗೂಡಿಸುತ್ತದೆ ಎಂಬ ಘೋಷವಾಕ್ಯ ನೀಡಿದ್ದು, ಅದರಂತೆಯೇ ಎಲ್ಲರೂ ಒಗ್ಗೂಡಿ ಯೋಗ ದಿನ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ.
ಒಟ್ಟಿನಲ್ಲಿ ಭಾರತಕ್ಕೆ ಒಬ್ಬ ದಕ್ಷ ಪ್ರಧಾನಿ ಸಿಕ್ಕರೆ, ದೇಶದ ಗೌರವ ಹೆಚ್ಚಾಗುತ್ತದೆ, ಅಭಿವೃದ್ಧಿಗೆ ಹೊಸ ಭಾಷ್ಯ ಸಿಗುತ್ತದೆ, ಇಡೀ ವಿಶ್ವವೇ ಭಾರತದ ಸಂಸ್ಕೃತಿಯನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತದೆ ಎಂಬುದಕ್ಕೆ ಯೋಗ ದಿನಾಚರಣೆಯೇ ಸಾಕ್ಷಿ. ಅದೆಲ್ಲದಕ್ಕೂ ಮೋದಿಯವರೇ ಕಾರಣ ಎಂಬುದು ಮತ್ತೊಂದು ಹೆಗ್ಗಳಿಕೆ.
Leave A Reply