ಜಮ್ಮು ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: ಬಂದ್ ಮಾಡುತ್ತೇನೆ ಎಂದ ಪ್ರತ್ಯೇಕತವಾದಿಗಳು ಅಂದರ್
ದೆಹಲಿ: ದೇಶ ರಕ್ಷಣೆಯ ಹಿತಕ್ಕಾಗಿ ಜಮ್ಮು ಕಾಶ್ಮೀರದಲ್ಲಿ ಪಿಡಿಪಿಯೊಂದಿಗಿನ ಮೈತ್ರಿಯನ್ನೇ ಕಡಿದುಕೊಂಡಿರುವ ಭಾರತೀಯ ಜನತಾ ಪಕ್ಷ ದಿಟ್ಟ ನಿರ್ಧಾರವನ್ನು ಕೈಗೊಂಡು, ಇಡೀ ದೇಶವಾಸಿಗಳಿಗೆ ಸಿಹಿ ಸುದ್ದಿ ಕೊಟ್ಟಿತ್ತು. ಇದೀಗ ಜಮ್ಮು ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಶುರುವಾದ ಬೆನ್ನಲೇ ಪ್ರತ್ಯೇಕತವಾದಿಗಳಿಗೆ ಸೇನೆ ಭರ್ಜರಿ ಶಾಕ್ ನೀಡಿದ್ದು, ಗುರುವಾರವೇ ಸೇನೆ ಪ್ರತ್ಯೇಕತವಾದಿಗಳನ್ನು ಹತ್ತಿಕ್ಕುವ ಕಾರ್ಯ ಆರಂಭಿಸಿದೆ.
ಪಾಕಿಸ್ತಾನದ ಗಡಿಯಲ್ಲಿ ಸೇನೆ ಗುಂಡಿನ ದಾಳಿ ಆರಂಭಿಸಿದ್ದು, ಇತ್ತ ದೇಶದಲ್ಲಿದ್ದುಕೊಂಡು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಪ್ರತ್ಯೇಕತವಾದಿಗಳಿಗೆ ತಕ್ಕ ಪಾಠವನ್ನು ಕಲಿಸಲು ಮುಂದಾಗಿದ್ದು, ಜಮ್ಮು ಕಾಶ್ಮೀರ ಬಂದ್ ಘೋಷಿಸಿರುವ ಪ್ರತ್ಯೇಕತವಾದಿ ಮುಖಂಡರನ್ನು ಬಂಧಿಸಲು ಆರಂಭಿಸಿದೆ. ಗುರುವಾರ ಮೂರು ಗಂಟೆಯಲ್ಲೇ ಪ್ರಮುಖ ಮೂರು ನಾಯಕರನ್ನು ಬಂಧಿಸಿದ್ದಾರೆ. ಬೆಳಗ್ಗೆ ಪ್ರತ್ಯೇಕವಾದಿ ನಾಯಕ ಯಾಸೀನ್ ಮಲ್ಲಿಕ್ ನನ್ನು ಶ್ರೀನಗರದಲ್ಲಿ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
ಅದರ ಮರುಕ್ಷಣವೇ ಮತ್ತೋರ್ವ ಪ್ರತ್ಯೇಕವಾದಿ ಉಗ್ರಹಸ್ತಕ ಹಿಲಲ್ ವಾರ್‍ನನ್ನು ಬಂಧಿಸಲಾಗಿದೆ. ವಾರ್ ನ ಬಂಧನ ಸುದ್ದಿ ಕೇಳಿ ಮತ್ತೋರ್ವ ಪ್ರತ್ಯೇಕತವಾದಿ ಮಿರ್ವೈಸ್ ಉಮರ್ ಫಾರೂಕ್ ಬಂಧ ಘೋಷಿಸಿದ್ದರಿಂದ ಆತನನ್ನು ಬಂಧಿಸಿ, ಪೊಲೀಸರು ಗೃಹ ಬಂಧನಕ್ಕೆ ದೂಡಿದ್ದಾರೆ. ಕೇವಲ ಮೂರು ಗಂಟೆಯ ಅವಧಿಯಲ್ಲಿ ಮೂವರು ಪ್ರತ್ಯೇಕವಾದಿ ನಾಯಕರನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದು ಉಗ್ರ ನಿಗ್ರಹ ಕಾರ್ಯಾಚರಣೆ ಮಿಂಚಿನ ವೇಗ ದೊರೆತಿದೆ.
ಮೊದಲು ಬಂಧನಕ್ಕೊಳಗಾದ ಪ್ರತ್ಯೇಕವಾದಿ ನಾಯಕ ಯಾಸೀನ್ ಮಲ್ಲಿಕ್‍ನನ್ನು ಪೊಲೀಸರು ಜೈಲಿಗಟ್ಟಿದ್ದರೆ ಮತ್ತಿಬ್ಬರನ್ನು ಗೃಹಬಂಧನದಲ್ಲಿಟ್ಟಿದ್ದಾರೆ. ಶ್ರೀನಗರದಲ್ಲಿ ಬಂಧನಕ್ಕೊಳಗಾದ ಯಾಸೀನ್ ಮಲ್ಲಿಕ್‍ನನ್ನು ಪೊಲೀಸರು ಬಂಧಿಸಿ ಒಯ್ದಿದ್ದಾರೆ. ಆದರೆ ಹಿಲಲ್ ವಾರ್‍ನನ್ನು ಮತ್ತು ಮಿರ್ವೈಸ್ ಉಮರ್ ಫಾರೂಕ್‍ನನ್ನು ಬಂಧಿಸಿದ್ದ ಪೊಲೀಸರು ಅವರ ಮನೆಯಲ್ಲೇ ಬಂಧನದಲ್ಲಿಟ್ಟು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಮೂಲಕ ಇಬ್ಬರು ಉಗ್ರ ಹಸ್ತಕರಿಗೆ ಗೃಹ ಬಂಧನದ ರುಚಿಯನ್ನು ಕಾಶ್ಮೀರ ಪೊಲೀಸರು ತೋರಿಸಿದ್ದಾರೆ. ಇದುವರೆಗೆ ಪಿಡಿಪಿ ಸರ್ಕಾರದ ಸಹಾಯದಲ್ಲಿ ಆಶ್ರಯ ಪಡೆದಿದ್ದ ಪ್ರತ್ಯೇಕತವಾದಿಗಳಿಗೆ ಸರ್ಕಾರ ಉರುಳಿದ ಕೇವಲ ಎರಡೇ ದಿನದಲ್ಲಿ ಕೇಂದ್ರ ಸರ್ಕಾರ ಭರ್ಜರಿ ಬಿಸಿ ಮುಟ್ಟಿಸಿದೆ.
Leave A Reply