ಜಮೀರ್ ಗೆ ಫಾರ್ಚೂನರ್ ಬೇಕಂತೆ, ಮುಳುಗುವ ಕಾಂಗ್ರೆಸ್ ಗೆ ಇಂತವರೇ ಸಾಕು!!
ಕರ್ನಾಟಕದ ಸಚಿವರೊಬ್ಬರು ತಮ್ಮ ದೌಲತ್ತು, ಹಣದ ಮದವನ್ನು ತೋರಿಸುವ ಮೂಲಕ ರಾಜಕಾರಣಿಗಳ ಸಮೂಹಕ್ಕೆ ಮತ್ತೊಮ್ಮೆ ಕೆಟ್ಟ ಹೆಸರು ತಂದಿದ್ದಾರೆ. ಒಂದು ಕಡೆ ಮೂಡಿಗೆರೆಯ ಶಾಸಕರಾಗಿದ್ದ ವೈಎಸ್ ವಿ ದತ್ತ ಅವರು ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ಫೋಟೋವನ್ನು ನೋಡಿದ್ದ ಜನರು ಜನಪ್ರತಿನಿಧಿಗಳು ಎಂದರೆ ಹೀಗೆ ಇರಬೇಕು ಎಂದು ಹಾರೈಸಿದ್ದರು. ಆದರೆ ಜೆಡಿಎಸ್ ಪಕ್ಷದಲ್ಲಿದ್ದ ಶಾಸಕರೊಬ್ಬರು ದೇವೇಗೌಡರ ವಿರುದ್ಧವಾಗಿ ಮಾತನಾಡಿ ಕುಮಾರಸ್ವಾಮಿಯವರನ್ನು ನಿಂದಿಸಿ ಆ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಮೊನ್ನೆಯ ಚುನಾವಣೆಯ ಮೊದಲು ಕಾಂಗ್ರೆಸ್ ಗೆ ಸೇರಿದ್ದರು. ಈಗ ಕಾಂಗ್ರೆಸ್ಸಿನಲ್ಲಿ ಗೆದ್ದು ಮಂತ್ರಿ ಕೂಡ ಆಗಿದ್ದಾರೆ. ಅದರೊಂದಿಗೆ ಈಗಲೇ ಕಾಂಗ್ರೆಸ್ಸಿನ ಮುಖಂಡರಿಗೆ ಮುಜುಗರವಾಗುವಂತಹ ಹೇಳಿಕೆಯನ್ನು ನೀಡಿದ್ದಾರೆ. ಬಹುಶ: ರಾಹುಲ್ ಗಾಂಧೀ ಜಮೀರ್ ಹೇಳಿರುವಂತಹ ಮಾತನ್ನು ಕೇಳಿಸಿಕೊಂಡರೆ “ವೋ ಕ್ಯಾ ಬೋಲ್ತಾ ಹೇ, ಐಸಾಹೀ ಬೋಲ್ಕೆ ಹಮಾರಾ ಸರಕಾರ್ ಗಿರಾಯೇಗಾ ಕ್ಯಾ?” ಎಂದು ಕೇಳಿಯೇ ಬಿಡುತ್ತಿದ್ದರು. ಅಷ್ಟಕ್ಕೂ ಜಮೀರ್ ಕೇಳಿದ್ದು ಏನು ಗೊತ್ತಾ?
ಫಾರ್ಚೂನರ್ ನಲ್ಲಿಯೇ ಜನ್ಮವಾಗಿತ್ತಾ…
ಫಾರ್ಚೂನರ್ ಕಾರ್, ನನಗೆ ದೊಡ್ಡ ಕಾರಿನಲ್ಲಿ ಕುಳಿತು ಅಭ್ಯಾಸ. ಈ ಇನೋವಾದಲ್ಲಿ ಕುಳಿತುಕೊಳ್ಳುವುದು ಹೇಗೆ? ಅದಕ್ಕಾಗಿ ಸರಕಾರದಿಂದ ಫಾರ್ಚೂನರ್ ಕಾರು ಕೊಡಿಸಿ ಎಂದು ಕೇಳಿದ್ದೇನೆ. ನಮಗೆ ಅಪರೂಪಕ್ಕೊಮ್ಮೆ ಅವಕಾಶ ಸಿಗುತ್ತಿರುವುದು, ಮಂತ್ರಿಯಾಗಿರುವುದು. ಹಾಗಿರುವಾಗ ನಾವು ದೊಡ್ಡ ಕಾರಿನಲ್ಲಿ ಹೋದರೆ ಮಾತ್ರ ಮಂತ್ರಿ ಎಂದು ಗುರುತಿಸುತ್ತಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಈ ಮಾತನ್ನು ಕೇಳಿದರೆ ಜನಪ್ರತಿನಿಧಿಯಾಗುವವನು ಜನರ ಎದುರು ಫೋಸ್ ಕೊಡುವುದಕ್ಕಾಗಿಯೇ ರಾಜಕೀಯಕ್ಕೆ ಬರುವುದು ಎನ್ನುವ ಅರ್ಧ ಬರುವುದಿಲ್ಲವೇ?
ಸಾರ್ವಜನಿಕರ ಹಣ ಎಂದರೆ ಅದು ದೇವರ ಡಬ್ಬಿಯಲ್ಲಿರುವ ಕಾಣಿಕೆ ಎಂದೇ ತಿಳಿದು ಕೆಲಸ ಮಾಡಬೇಕಾಗುತ್ತದೆ. ಅದನ್ನು ಮುಟ್ಟುವುದು ಎಂದರೆ ಪಾಪ ಎಂದು ತಿಳಿದುಕೊಳ್ಳಬೇಕು. ಜನರ ತೆರಿಗೆಯ ಒಂದೊಂದು ರೂಪಾಯಿ ಕೂಡ ಅವರ ಅಭಿವೃದ್ಧಿಗೆ ಹೋಗಬೇಕೆ ವಿನ: ನಮಗೆ ಫಾರ್ಚೂನರ್ ಕೊಡಿ, ಅದರಲ್ಲಿ ಹೋದ್ರೆ ಮಾತ್ರ ಗೊತ್ತಾಗುತ್ತೆ ಎಂದೆಲ್ಲ ಹೇಳಿ ತಮ್ಮ ಅಹಂಕಾರ ಪ್ರದರ್ಶಿಸುವುದು ಸರಿಯಾ? ಮಂತ್ರಿಯಾದವರಿಗೆ ಸರಕಾರ ಸರಕಾರಿ ವಾಹನ ಕೊಡುತ್ತದೆ. ಹಿಂದೆ ಕಾಂಟೆಸ್ಸಾ ಎನ್ನುವ ಗಾಡಿ ಕೊಡಲಾಗುತ್ತಿತ್ತು. ಈಗ ಇನೋವಾ ಕೊಡಲಾಗುತ್ತದೆ. ಅದಕ್ಕೆ ಜಮೀರ್ ಫಾರ್ಚೂನರ್ ಗಾಡಿಯೇ ಬೇಕು ಎಂದು ಕೇಳಿದ್ದಾರೆ. ಅವರು ಕೇಳಿದ ಗಾಡಿಗೆ ಸರಕಾರ ಕೊಡುವ ಗಾಡಿಗಿಂತ ದುಪ್ಪಟ್ಟು ದರ ಇದೆ. ತಾವು ದೊಡ್ಡ ಗಾಡಿಯಲ್ಲಿ ಹೋದರೆ ಜನರಿಗೆ ಗೊತ್ತಾಗುವುದು ಎನ್ನುವುದಾದರೆ ಜಮೀರ್ ಬುಲ್ ಡೋಜರ್ ನಲ್ಲಿ ಹೋಗಲಿ ಅಥವಾ ಲಾರಿಯಲ್ಲಿ ಹೋಗಲಿ. ಇವರು ಬೇಕಾದರೆ ಲಾರಿಯ ತಲೆಯ ಮೇಲೆ ನಿಂತು ಕೈ ಬೀಸುತ್ತಾ ಹೋಗಲಿ. ಎಲ್ಲರಿಗೂ ಗೊತ್ತಾಗುತ್ತೆ. ಒಬ್ಬ ಸಚಿವ ತಾವು ಮಾಡುವ ಒಳ್ಳೆಯ ಕೆಲಸದಿಂದ ಜನರ ಮಧ್ಯೆ ಗುರುತಿಸಬೇಕೆ ವಿನ: ದೊಡ್ಡ ಕಾರಿನಿಂದ ಅಲ್ಲ ಎಂದು ಜಮೀರ್ ಗೆ ಗೊತ್ತಿರಬೇಕಿತ್ತು. ನೀವು ಜನರ ಕಷ್ಟವನ್ನು ಅರಿತು ಅವರಿಗೆ ಸಹಾಯ ಮಾಡಿ ಊರ ಅಭಿವೃದ್ಧಿ ಮಾಡಿದರೆ ನೀವು ರಿಕ್ಷಾದಲ್ಲಿ ಬಂದರೂ ಜನ ನಿಮ್ಮನ್ನು ಮುತ್ತಿಕೊಳ್ಳುತ್ತಾರೆ.
ಕಾಂಗ್ರೆಸ್ ನೈತಿಕ ದಿವಾಳಿ ಆಗುತ್ತಿರುವುದರ ಸಂಕೇತ…
ಇನ್ನು ಇದೇ ಜಮೀರ್ ತಾವು ಸಿದ್ಧರಾಮಯ್ಯನವರ ವೆಹಿಕಲ್ ಕೇಳಿದ್ದಲ್ಲ, ಯಾವುದಾದರೂ ಎಸ್ ಯುವಿ ಕೇಳಿದ್ದು ಎನ್ನುತ್ತಾರೆ. ಇದನ್ನು ರಾಷ್ಟ್ರೀಯ ವಾಹಿನಿಯೊಂದರಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಸಮರ್ಥಿಸಿಕೊಂಡು ಮಾತನಾಡುತ್ತಾರೆ. ಕರ್ನಾಟಕದ ಎಷ್ಟೋ ಹಳ್ಳಿಗಳಿಗೆ ಸರಿಯಾದ ಬಸ್ ಸೌಲಭ್ಯಗಳಿಲ್ಲ. ಬಸ್ ಇಲ್ಲದೆ ಮಕ್ಕಳು ಕಿಲೋ ಮೀಟರ್ ನಡೆದು ಶಾಲೆಗೆ ಹೋಗುತ್ತಾರೆ. ತಾಯಂದಿರು ಮಕ್ಕಳನ್ನು ಕಂಕುಳಲ್ಲಿ ಹೊತ್ತು ಪೇಟೆಗೆ ಬರುತ್ತಾರೆ. ಅಲ್ಲಿ ಸರಿಯಾದ ಬಸ್ಸುಗಳನ್ನು ಹಾಕುವ ಬದಲು ಇಂತಹ ಮಂತ್ರಿಗಳು ತಮಗೆ ಫಾರ್ಚೂನರ್ ಗಾಡಿ ಬೇಕು, ತಾನು ಹುಟ್ಟಿದ್ದೇ ಇಂತಹ ಗಾಡಿಯ ಒಳಗೆ ಎನ್ನುವಂತೆ ಮಾತನಾಡುತ್ತಾರಲ್ಲ, ಇವರಿಗೆ ಜನರ ಬಗ್ಗೆ ನಿಜವಾದ ಕಾಳಜಿ ಇದೆ ಎಂದು ಯಾರಿಗಾದರೂ ಅನಿಸುತ್ತದೆಯಾ? ನಾವು ಜನಸೇವಕರು ಎಂದು ಮತ ಕೇಳುವಾಗ ಬರುವ ಇದೇ ಜನ ಗೆದ್ದ ಬಳಿಕ ಸೀದಾ ನಮ್ಮ ತಲೆಯ ಮೇಲೆ ಕೂರುತ್ತಾರಲ್ಲ, ಇವರಿಗೆ ನಮ್ಮ ಬಗ್ಗೆ ಕಾಳಜಿ ಇದೆಯಾ? ಇದೇ ಕಾಂಗ್ರೆಸ್ಸಿಗರು ನರೇಂದ್ರ ಮೋದಿಯವರ ಉಡುಗೆಯ ಬಗ್ಗೆ ಅದರ ಮೌಲ್ಯದ ಬಗ್ಗೆ ಕಮೆಂಟ್ ಮಾಡುತ್ತಾರಲ್ಲ, ಸೂಟು ಬೂಟಿನ ಸರಕಾರ ಎಂದರಲ್ಲ, ಮೋದಿ ಯಾವುದೇ ಲಕ್ಷಾಂತರ ಬೆಲೆಯ ಸೂಟ್ ಹಾಕಿರಲಿಲ್ಲ. ಒಂದು ವೇಳೆ ಇವರ ಸುಳ್ಳನ್ನು ಒಂದು ಕ್ಷಣ ಒಪ್ಪಿಕೊಂಡರೂ ಅದು ಮೋದಿ ಕೇಂದ್ರ ಸರಕಾರದ ತಿಜೋರಿಯಿಂದ ಹಟ ಮಾಡಿ ಕಿತ್ತ ಹಣ ಅಂತೂ ಅಲ್ಲವೇ ಅಲ್ಲ!
Leave A Reply