ಕಾಶ್ಮೀರದಲ್ಲಿ ಎರಡನೇ ಹಂತದ ಆಪರೇಷನ್ ಆಲೌಟ್ ಲಿಸ್ಟ್ ನಲ್ಲಿ ಯಾರ್ಯಾರಿದ್ದಾರೆ ಗೊತ್ತಾ?
ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿ ಮಾಡಿದ್ದರೂ ಭಾರತೀಯ ಸೇನೆ ಮಾತ್ರ ಉಗ್ರರ ವಿರುದ್ಧ ಭರ್ಜರಿಯಾಗಿಯೇ ಕಾರ್ಯಾಚರಣೆ ಮಾಡುತ್ತಿದೆ. ಶುಕ್ರವಾರಷ್ಟೇ ನಾಲ್ವರು ಉಗ್ರರನ್ನು ಹತ್ಯೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಅಷ್ಟೇ ಅಲ್ಲ, ಈ ಮೊದಲು ಉಗ್ರರ ವಿರುದ್ಧ ಕೈಗೊಂಡಿದ್ದ ಆಪರೇಷನ್ ಆಲೌಟ್ ಕಾರ್ಯಾಚರಣೆಯನ್ನು ಎರಡನೇ ಹಂತದಲ್ಲಿ ವಿಸ್ತರಿಸಲು ಸೇನೆ ಮುಂದಾಗಿದ್ದು, ವಿವಿಧ ಉಗ್ರ ಸಂಘಟನೆಗಳ ಸುಮಾರು 21 ಉಗ್ರರ ಪಟ್ಟಿಯನ್ನು ಮಾಡಿದ್ದು, ಕಾರ್ಯಾಚರಣೆ ಶುರುವಿಟ್ಟುಕೊಂಡಿದೆ.
ಜಮ್ಮು-ಕಾಶ್ಮೀರದ ಪ್ರಮುಖ 21 ಉಗ್ರರ ಪಟ್ಟಿ ಸಿದ್ಧಗೊಳಿಸಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ 11, ಲಷ್ಕರೆ ತಯ್ಯಬಾದ 7, ಜೈಷೆ ಮೊಹಮ್ಮದ್ ಸಂಘಟನೆಯ ಇಬ್ಬರು ಹಾಗೂ ಅನ್ಸರ್ ಘಜ್ವತ್ ಉಲ್ ಹಿಂದ್ ಸಂಘಟನೆಯ ಒಬ್ಬ ಉಗ್ರ ಪಟ್ಟಿಯಲ್ಲಿದ್ದು, ಯಾವಾಗ ಇವರ ಎದೆಗೆ ಗುಂಡು ಇಟ್ಟೆವೋ ಎಂದು ಸೈನಿಕರು ಹಾತೊರೆಯುತ್ತಿದ್ದಾರೆ.
ಈ ಪ್ರಮುಖ 21 ಉಗ್ರರಲ್ಲಿ ಎ ಪ್ಲಸ್ ಪ್ಲಸ್ ಕ್ಯಾಟಗರಿಯ ಸುಮಾರು ಆರು ಉಗ್ರರಿದ್ದು, ಇವರ ಕುರಿತು ಮಾಹಿತಿ ನೀಡಿದವರಿಗೆ 12 ಲಕ್ಷ ರೂಪಾಯಿ ನೀಡುವುದಾಗಿ ಸಹ ಭಾರತೀಯ ಸೇನೆ ಘೋಷಿಸಿದೆ.
ರಿಯಾಜ್ ಅಹ್ಮದ್ ನೈಕೂ (ಕಾಶ್ಮೀರದಲ್ಲಿ ಉಗ್ರ ಕಾರ್ಯಾಚರಣೆಯ ಮುಖ್ಯಸ್ಥ-ಹಿಜ್ಬುಲ್ ಮುಜಾಹಿದ್ದೀನ್), ಅಲ್ತಾಫ್ ಅಹ್ಮದ್ ದರ್ (ದಕ್ಷಿಣ ಕಾಶ್ಮೀರ ವಿಭಾಗದ ಕಮಾಂಡರ್), ಉಮರ್ ಮಜೀದ್ ಗನೈ (ಕುಲ್ಗಾಮ್ ನಿವಾಸಿ), ಜೀನತ್ ಉಲ್ ಇಸ್ಲಾಮ್ ಸೇರಿ ಆರು ಉಗ್ರರು ಎ ಪ್ಲಸ್ ಪ್ಲಸ್ ಕ್ಯಾಟಗರಿಯಲ್ಲಿದ್ದಾರೆ ಎಂದು ಮೂಲಗಳು ತಿಳಸಿವೆ.
ಒಟ್ಟಿನಲ್ಲಿ ಜಮ್ಮು-ಕಾಶ್ಮೀರದಲ್ಲಿ ಯಾವುದೇ ಸರ್ಕಾರವೇ ಇರಲಿ, ಸಮ್ಮಿಶ್ರ ಸರ್ಕಾರವೇ ಬರಲಿ,
Leave A Reply