• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾರತದ ಘರ್ಜನೆ: ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಪಾಕ್ ನ ಸತ್ವವಿಲ್ಲದ ಹೇಳಿಕೆಗಳು ವಾಸ್ತವ ಬದಲಾಯಿಸುವುದಿಲ್ಲ

TNN Correspondent Posted On June 26, 2018
0


0
Shares
  • Share On Facebook
  • Tweet It

ವಿಶ್ವಸಂಸ್ಥೆ: ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಪಾಕಿಸ್ತಾನದ ಸತ್ವವಿಲ್ಲದ ಹೇಳಿಕೆಗಳು, ಖಾಲಿ ವಾಖ್ಚಾತುರ್ಯ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತ ಸ್ಪಷ್ಟನೆಯನ್ನು ನೀಡಿದ್ದು, ಪಾಕಿಸ್ತಾನ ನಾಟಕವನ್ನು ವಿಶ್ವದೆದುರು ಮತ್ತೊಮ್ಮೆ ಬಹಿರಂಗಪಡಿಸಿದೆ.

ದಾಖಲೆ ಸಹಿತ ಜಮ್ಮು ಕಾಶ್ಮೀರ ಭಾರತ ಅವಿಭಾಜ್ಯ ಮತ್ತು ಅನಿವಾರ್ಯವಾದ ಅಂಗ. ಪಾಕಿಸ್ತಾನದ ಬುಟಾಟಿಕೆಯ ಹೇಳಿಕೆಗಳು ಕಾಶ್ಮೀರವನ್ನು ಭಾರತದಿಂದ ದೂರಮಾಡಲು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೇ ಭಾರತದ ಕಾರ್ಯದರ್ಶಿ ಸಂದೀಪಕುಮಾರ ಬೈಯಪ್ಪು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.

ಪಾಕಿಸ್ತಾನದ ವಿರುದ್ಧ ಛಾಟಿ ಬೀಸಿರುವ ಬೈಯಪ್ಪು ಅವರು, ಜಮ್ಮು ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನ ಸುಳ್ಳುಗಳನ್ನು ಹರಡುತ್ತಲೆ ದಿನದೂಡುತ್ತಿದೆ. ಭಾರತ ವಿರೋಧಿ ನೀತಿಯನ್ನು ಜಮ್ಮು ಕಾಶ್ಮೀರದ ವಿಷಯದ ಮೂಲಕ ದುರ್ಬಳಕೆ ಮಾಡಿಕೊಳ್ಳುತ್ತಿದ್ದೆ. ಭಾರತ ಜಮ್ಮು ಕಾಶ್ಮೀರದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುತ್ತಿದೆ ಶಾಂತಿ ನೆಲೆಸುತ್ತಿದೆ. ಆದರೆ ಪಾಕಿಸ್ತಾನ ವಿನಾಕಾರಣ ಸುಳ್ಳುಗಳನ್ನು ಹರಡುತ್ತಾ ಧ್ವೇಷ ಕಾರುತ್ತಿದೆ ಎಂದು ಖಡಕ್ ಸಂದೇಶವನ್ನು ವಿಶ್ವಸಮುದಾಯಕ್ಕೆ ನೀಡಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಪಿಡಿಪಿಯೊಂದಿಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡ ಕೆಲ ದಿನಗಳ ನಂತರ ಕಣಿವೆ ರಾಜ್ಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದು, ಇಡೀ ದೇಶ ಪ್ರಸ್ತುತ ನಡೆಸುತ್ತಿರುವ ಕಾರ್ಯಚರಣೆಗಳಿಂದ ಖುಷಿಯಲ್ಲಿದೆ. ಇದೀಗ ವಿಶ್ವಸಂಸ್ಥೆಯಲ್ಲೂ ಪಾಕಿಸ್ತಾನದ ಮಾನವನ್ನು ಹರಾಜಿಗೆ ಹಾಕುವ ಮೂಲಕ ಭಾರತ ತನ್ನ ಅಂತಸತ್ವವನ್ನು ಕಾಪಾಡಿಕೊಂಡು ಮುನ್ನಡಿ ಇಡುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೇ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸಿರುವ 370 ಕಾಯಿದೆ ತೆಗೆದು ಹಾಕುವ ದಿನಗಳು ದೂರವಿಲ್ಲ ಎಂಬ ಆಶಯ ಮೂಡಿದೆ.

1 delegation has yet again misused the platform to made an unwarranted reference to the Indian state of J&K: India during right to reply at UNGA General Debate on responsibility to Protect and the Prevention of Genocide, War Crimes, Ethnic Cleansing and Crimes against Humanity pic.twitter.com/QKQTMRhlD8

— ANI (@ANI) June 26, 2018

0
Shares
  • Share On Facebook
  • Tweet It




Trending Now
ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
Tulunadu News February 18, 2026
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Tulunadu News February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
  • Popular Posts

    • 1
      ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!

  • Privacy Policy
  • Contact
© Tulunadu Infomedia.

Press enter/return to begin your search