ಬಲೆಗೆ ಬೀಳಲಿದ್ದಾನೆ 13 ಸಾವಿರ ಕೋಟಿ ರೂ. ವಂಚಕ: ನೀರವ್ ಮೋದಿಗೆ ರೆಡ್ ಕಾರ್ನರ್ ನೋಟಿಸ್
ದೆಹಲಿ: ಪಂಜಾಬ್ ನ್ಯಾಶನಲ್ ಬ್ಯಾಂಕಿನಲ್ಲಿ ಭಾರಿ ವಂಚನೆ ಎಸಗಿ ದೇಶ ಬಿಟ್ಟು ಓಡಿ ಹೋಗಿರುವ ಆರ್ಥಿಕ ಅಪರಾಧಿ ನೀರವ್ ಮೋದಿ ಬಂಧನಕ್ಕೆ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ದೇಶಾದ್ಯಂತ ತೀವ್ರ ಚರ್ಚಿಗೀಡಾಗಿದ್ದು, ವಿಷಯವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಲು ಇಂಟರ್ ಪೋಲ್ ಮುಂದಾಗಿದೆ.
ಇಂಟರ್ ಪೋಲ್ ನೀಡಿರುವ ನೋಟಿಸ್ ಪ್ರಕಾರ ದ್ವಿಪೌರತ್ವ ಹೊಂದಿರುವ ಈ ವಂಚಕನನ್ನು ಬಲೆಗೆ ಬೀಳಿಸಲು ಭಾರಿ ಅನುಕೂಲ ಕಲ್ಪಿಸಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ನೀರವ್ ಮೋದಿ 13 ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ವಂಚಕ ನೀರವ್ ಮೋದಿಗೆ ರೆಡ್ ಕಾರ್ನರ್ ನೋಟಿಸ್ ನೀಡುವಂತೆ ಸಿಬಿಐ ಇಂಟರ್ ಪೋಲ್ ಗೆ ಪತ್ರ ಬರೆದು ಮನವಿ ಮಾಡಿತ್ತು. ಮನವಿಗೆ ಸ್ಪಂದಿಸಿರುವ ಇಂಟರ್ ಪೋಲ್, ರೆಡ್ ಕಾರ್ನರ್ ನೋಟಿಸ್ ನೀಡಿದೆ. ಇದೀಗ ಯಾವುದೇ ಸಮಯದಲ್ಲಿ, ಯಾವುದೇ ದೇಶದಲ್ಲಿ ನೀರವ್ ಮೋದಿ ಅಡಗಿ ಕುಳಿತರೂ ಆತನನ್ನು ಬಂಧಿಸುವ ಸಾಧ್ಯತೆ ಇದೆ.
13 ಸಾವಿರ ಕೋಟಿ ರುಪಾಯಿ ವಂಚನೆಗೆ ಸಂಬಂಧಿಸಿದಂತ ನೀರವ್ ಮೋದಿ ಹಾಗೂ ಅವರ ಅಂಕಲ್, ಗೀತಾಂಜಲಿ ಜೆಮ್ಸ್ ನ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಾಗಿದೆ. ಹಗರಣದ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಈಗ ರೆಡ್ ಕಾರ್ನರ್ ನೋಟಿಸ್ ನೀಡಲಾಗಿದೆ. ಈ ಮೂಲಕ ಇಂಟರ್ ಪೋಲ್ ಸದಸ್ಯ ರಾಷ್ಟ್ರಗಳಾದ 192 ರಾಷ್ಟ್ರಗಳಲ್ಲಿ ಎಲ್ಲಿಯೇ ಇದ್ದರೂ, ನೀರವ್ ಮೋದಿಯನ್ನು ಬಂಧಿಸಬಹುದು. ಜನವರಿ ಮೊದಲ ವಾರದಲ್ಲಿ ನೀರವ್ ಮೋದಿ ಸೇರಿ ಆತನ ಪತ್ನಿ ಅಮಿ ಮೋದಿ, ಸಹೋದರ ನಿಶಾಲ್ ಮೋದಿ ಮತ್ತು ಅಂಕಲ್ ಮೇಹುಲ್ ಚೌಕ್ಸಿ ದೇಶವನ್ನು ಬಿಟ್ಟು ಪರಾರಿಯಾಗಿದ್ದ.
Leave A Reply